SAKSHI Trust - Bangalore
ಮಹಾ ತಪಸ್ವಿ // Maha Tapasvi
Couldn't load pickup availability
ಪುಟಗಳು: ೨೯೫
ಮೂಲ: ಶೊಂಠಿ ಅನಸೂಯಮ್ಮ
ಅನುವಾದ: ಗುರುಪ್ರಸಾದ್ ಹಾಲ್ಕುರಿಕೆ
ವಾಸಿಷ್ಠ ಗಣಪತಿ ಮುನಿಗಳು ಋಷಿಸದೃಶ ಕವಿ ಎನ್ನುವುದು ಅವರ ಅನೇಕ ಅನುಭಾವೀ ರಚನಗಳಲ್ಲಿ ಕಂಡುಬರುತ್ತದೆ. ಗಣಪತಿ ಮುನಿಗಳನ್ನು ಕಾವ್ಯರಚನಯಲ್ಲಿ ಕಾಳಿದಾಸ ಹಾಗೂ ಆದಿ ಶಂಕರಾಚಾರ್ಯರಿಗೆ ಸಮ ಎಂಬುದಾಗಿ ಪರಿಗಣಿಸಲಾಗಿದೆ. ಗಣಪತಿ ಮುನಿಗಳು ಔಷಧಿ ಜ್ಞಾನದಲ್ಲಿ ಚರಕನಂತೆಯೂ, ಜ್ಯೋತಿಷ್ಯಶಾಸ್ತ್ರದಲ್ಲಿ ಪರಾಶರರಂತೆಯೂ, ಹಾಗೂ ಖಗೋಳಶಾಸ್ತ್ರದಲ್ಲಿ ವರಾಹಮಿಹಿರರಂತೆಯೂ ಸುಪ್ರಸಿದ್ಧರಾಗಿದ್ದರು. ಇವರು ಯಾವುದೇ ದೇವರನ್ನು ಕುರಿತು ಧ್ಯಾನಮಾಡಿದರೂ ಆ ದೈವವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಿದ್ದರು. ತಮ್ಮ ಜೀವಿತಾವಧಿಯಲ್ಲಿಯೇ ಇವರು ಕಪಾಲಭೇದದಲ್ಲಿ ಸಿದ್ಧಿಯನ್ನು ಸಾಧಿಸಿದ್ದರು. ಇವರು ತಪಸ್ಸಿನಲ್ಲಿ ಉಜ್ವಲತೆ ಮೆರೆದವರು. ಒಟ್ಟಿನಲ್ಲಿ ಇವರ ಜೀವನವು ಅತ್ಯಂತ ಪವಿತ್ರವಾದದ್ದು, ರೋಚಕವಾದದ್ದು ಹಾಗೂ ಎಲ್ಲರೂ ಅರಿಯಲೇಬೇಕಾದದ್ದು.
