ಭಾರತ ಗೌರವ ಶಿಬಿರ – ಆಹ್ವಾನ
ಭಾರತವು ಪುಣ್ಯಭೂಮಿ. ಇದು ದೇವಸಾನಿಧ್ಯದಿಂದ ಪವಿತ್ರಗೊಂಡ ದೇಶ ಆಗಿದ್ದು, ತ್ಯಾಗ, ಯೋಗ ಮತ್ತು ಕರ್ಮಗಳಿಗೆ ಆದರ್ಶಭೂಮಿ. ಅನೇಕ ಶೂರರು, ವೀರರು, ಧೀರರು ಈ ನಾಡನ್ನು ಆಳಿದ್ದು, ಅಪಾರ ಯೋಗಿಗಳು, ತ್ಯಾಗಿಗಳು, ಸಂತರು ಹಾಗೂ ಸನ್ಯಾಸಿಗಳು ತಪಸ್ಸು ಮಾಡಿದ ಧನ್ಯಭೂಮಿಯಿದು. ಇದುವೇ "ಭಾರತ ಗೌರವ".
ವೇದಗಳು ಭಾರತೀಯ ಸಂಸ್ಕೃತಿಯ ಅಡಿಷ್ಠಾನ ಶಿಲೆಗಳಾಗಿವೆ. ಭೂತ, ವರ್ತಮಾನ ಮತ್ತು ಭವಿಷ್ಯ – ಇವೆಲ್ಲದಕ್ಕೂ ವೇದಗಳು ಬೆಳಕು. ಮನುಷ್ಯನ ಅಂತಃಕರಣವನ್ನು ಜಾಗೃತಗೊಳಿಸುವ ಜ್ಞಾನವೇ ವೇದಗಳ ದಾರಿಯಲ್ಲಿ ಲಭ್ಯ. ಈ ಜ್ಞಾನವನ್ನರಿಯಲು ಮತ್ತು ಜೀವನದಲ್ಲಿ ಆಳವಾಗಿ ಅಳವಡಿಸಿಕೊಳ್ಳಲು “ಭಾರತ ಗೌರವ ಶಿಬಿರ”ವು ಆಯೋಜಿಸಲಾಗಿದೆ.
ನಮ್ಮ ಸಂಸ್ಕೃತಿಯ ಸಂಚಿತ ಪಾಠಗಳನ್ನು ತಿಳಿದುಕೊಳ್ಳುವುದು, ಮರೆತ ಸಂಸ್ಕೃತಿ ಸ್ಮರಣೆಗೆ ನವ ಚೈತನ್ಯ ತುಂಬುವುದು, ಹಾಗೂ ಭಾರತದಲ್ಲಿ ಜನ್ಮತಳೆದ ಪ್ರಾತಃಸ್ಮರಣೀಯರನ್ನು ಸ್ಮರಿಸುವುದು ಅವಶ್ಯಕ. ವಿಶ್ವಗುರು ಪರಂಪರೆಯ ಪಥದಲ್ಲಿ ಹೆಜ್ಜೆ ಹಾಕಲು ನಾವು ಸಿದ್ಧರಾಗಬೇಕು. ಈ ಶಿಬಿರವು ಸಂಸ್ಕೃತಿಯ ತೇರನ್ನು ಎಳೆಯುವ, ಪರಂಪರೆಯ ಪಲ್ಲಕ್ಕಿಯನ್ನು ಹೊರುವ ಅವಕಾಶ.
ಈ ಶಿಬಿರದಲ್ಲಿ ದೇವರು ದಯಪಾಲಿಸಿದ ಶಕ್ತಿ, ಯುಕ್ತಿ, ಸಾಮರ್ಥ್ಯ ಮತ್ತು ಸದ್ಗುಣಗಳನ್ನು ಸಮಾಜಸೇವೆಗೆ ತೊಡಗಿಸಿಕೊಳ್ಳುವ ಪ್ರೇರಣೆ ದೊರೆಯಲಿದೆ.
ಶಿಬಿರದ ವಿವರಗಳು:
- ದಿನಾಂಕ: ಜೂನ್ 14 - 22, 2025 ರವರೆಗೆ
- ಸ್ಥಳ: ಅರೋವೇದ ತೋಟ, ಬೆಂಗಳೂರು ಹೊರವಲಯ – ಶಾಂತ, ಪ್ರಕೃತಿ ಸೌಂದರ್ಯ ತುಂಬಿದ ಪರಿಸರ
- ಭಾಗವಹಿಸಬಹುದಾದವರು: 20 ರಿಂದ 50 ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು
- ಪ್ರವೇಶ ಲಭ್ಯತೆ: ಕೇವಲ 30 ರಿಂದ 35 ಆಸಕ್ತರಿಗೆ
- ಪ್ರವೇಶ: ಉಚಿತ
- ವ್ಯವಸ್ಥೆ: ಸರಳ ಮತ್ತು ಸಾತ್ವಿಕ ಆಹಾರ, ವಸತಿ ವ್ಯವಸ್ಥೆ ಲಭ್ಯ
ಶಿಬಿರದ ವಿಶೇಷತೆಗಳು:
- ಯೋಗ, ಪ್ರಾಣಾಯಾಮ, ಧ್ಯಾನ
- ವೈಚಾರಿಕ ಚರ್ಚೆಗಳು, ಆಟೋಟಗಳು
- ವಿವಿಧ ಕ್ಷೇತ್ರದ ಸಾಧಕರು, ವಿದ್ವಾಂಸರು ಮಾರ್ಗದರ್ಶನ ನೀಡುವರು
- ಅಧ್ಯಯನ ಸಾಮಗ್ರಿ ಉಚಿತವಾಗಿ ನೀಡಲಾಗುವುದು
ಅರ್ಜಿ ಸಲ್ಲಿಕೆ:
- ಕೊನೆಯ ದಿನಾಂಕ: 25-05-2025
- ಆಯ್ಕೆ ಫಲಿತಾಂಶ: 30-05-2025 ಒಳಗಾಗಿ ತಿಳಿಸಲಾಗುವುದು
ಸಂಪರ್ಕಿಸಿ:
- ಬಿಂದುಮಾಧವ ವಿ.ಜೆ. – 90088 33886
- info@vedah.com