ವೇದ ಕಾರ್ಯಾಗಾರ 20, 21 ಮಾರ್ಚ್, 2021 ಅರೋವೇದ, ಏಡಮಡು – ಬೆಂಗಳೂರು

ವೇದಜ್ಞಾನ ರಕ್ಷಣೆ, ಪ್ರಸಾರ ಕುರಿತು ಪ್ರಕೃತಿ ಪರಿಸರದಲ್ಲಿ ಚಿಂತನೆ

 

ವೇದಗಳು ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭ. ಜ್ಞಾನಿಗಳೆಲ್ಲ ಈ ಸಂಗತಿಯನ್ನು ಸಮರ್ಥಿಸಿದ್ದಾರೆ. ವೇದದಲ್ಲಿರುವ ವಿಷಯವೆಲ್ಲ ಲೋಕಕಲ್ಯಾಣಕರ ಆಗಿದೆ. ವೇದಪ್ರಣೀತ ಜೀವನಧರ್ಮ ಮಾನವನ ಹಿತ ಕಾಪಾಡುತ್ತದೆ. ವೇದವು ಶ್ರೇಷ್ಠ ಶಿಕ್ಷಣ ಪದ್ಧತಿಯನ್ನು, ಆರೋಗ್ಯಮಯ ಸಮಾಜ ವ್ಯವಸ್ಥೆಯನ್ನು, ಆದರ್ಶ ಕುಟುಂಬ ಸಂಪ್ರದಾಯವನ್ನು, ಜನಹಿತಪರ ರಾಜ್ಯ ವ್ಯವಸ್ಥೆಯನ್ನು, ಸಾಮರಸ್ಯಭರಿತ ಜೀವನವನ್ನು, ಜಾತಿ-ಮತ-ಕುಲ-ಲಿಂಗ ಭೇದರಹಿತತೆಯನ್ನು ಪ್ರತಿಪಾದಿಸುತ್ತದೆ.

ವೇದದಲ್ಲಿ ಶರೀರಕ್ಕೆ ಅಗತ್ಯವಾದ ಆರೋಗ್ಯ ಇದೆ, ಮನಸ್ಸಿಗೆ ಬೇಕಾಗುವ ಶಾಂತಿ ಇದೆ, ಆತ್ಮಕ್ಕೆ ಅಗತ್ಯವಾದ ಏಕಾಂತತೆ ಇದೆ. ಒಟ್ಟಾರೆ, ವೇದ ಎಲ್ಲರಿಗೂ ಬೇಕು. ಇದೊಂದು ಸಾಗರದಂತೆ. ಇಲ್ಲಿ ಬಿಂದುವೂ ಇದೆ, ಸಿಂಧುವೂ ಇದೆ. ಇದೆಲ್ಲವೂ ಲಭ್ಯವಾಗಲು ಸಾಗರದ ತಳ ತಿಳಿಯಲು ಸಿದ್ಧರಾಗಬೇಕು. ಹುಡುಕುವವನಿಗೆ ನೂರೆಂಟು ದಾರಿ, ದುಡುಕುವವರಿಗೆ ದಾರಿಯೇ ಕಾಣದು. ವೇದ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತ.

ಸಾಕ್ಷಿ (SAKSHI) ಎಂದರೆ ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಸಂಸ್ಥೆ. ಇದೊಂದು ಆಧ್ಯಾತ್ಮಿಕ ಸಂಸ್ಥೆ. ೧೯೯೭ರಲ್ಲಿ ಪ್ರಾರಂಭವಾದ ಈ ಸಂಸ್ಥೆ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಸುಂದರ, ಸಾಮರಸ್ಯಪೂರ್ಣ, ಸೃಜನಾತ್ಮಕ ಹಾಗೂ ಸಂತಸಮಯ ಜೀವನ ನಡೆಸಲು ಅನುವಾಗುವಂತಹ ಜಾಗೃತಿಯನ್ನು ಸಮಾಜದಲ್ಲಿ ಮೂಡಿಸುವ ಉದ್ದೇಶ ಹೊಂದಿದೆ. ಈ ಉದ್ದೇಶಕ್ಕೆ ಸಂಪೂರ್ಣ ಸಹಾಯಕ ಆಗಿರುವ ವೇದಗಳ ವಿಚಾರ ಧಾರೆಯನ್ನು ಸಾರುವುದೇ ಸಂಸ್ಥೆಯ ಗುರಿ.

ಇದೀಗ ದಿನಾಂಕ 20 ಹಾಗೂ 21 (ಶನಿವಾರ, ಭಾನುವಾರ) ಮಾರ್ಚ್, 2021 ರಂದು ಒಂದು ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲೆಡೆಯಿಂದ ವೇದಾಸಕ್ತರು ಇದರಲ್ಲಿ ಭಾಗವಹಿಸಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಕಾರ್ಯಾಗಾರದಲ್ಲಿ ವೇದ ಜ್ಞಾನದ ಮಹತ್ವ, ವೇದಾರ್ಥ ನಿರೂಪಣೆ, ಸಮಾಜ ಕಾರ್ಯದಲ್ಲಿ ವೇದಾಸಕ್ತರ ಪಾತ್ರ ಮುಂತಾದ ವಿಷಯಗಳ ಮಂಡನೆಯಾಗಲಿದೆ. ವೇದ ಜ್ಞಾನ ಪ್ರಸಾರ ಕುರಿತಂತೆ ವಿಶೇಷ ಒತ್ತು ನೀಡಲಾಗುತ್ತದೆ.

ಭಾಗವಹಿಸುವವರಿಗೆ ನಾವು ಪ್ರಕಟಿಸಿದ ವೇದಾರ್ಥದ 24 ಸಂಪುಟಗಳನ್ನು ಅಧ್ಯಯನ ಸಾಮಗ್ರಿಯಾಗಿ ನೀಡಲಾಗುತ್ತದೆ. ಇದಲ್ಲದೆ ವಸತಿ ವ್ಯವಸ್ಥೆ, ಪ್ರಯಾಣ ವೆಚ್ಚ ಮತ್ತು ಭೋಜನ ವ್ಯವಸ್ಥೆ ಒದಗಿಸಲಾಗುವುದು.

ತಮ್ಮನ್ನು ನಾವು ಈ ಕಾರ್ಯಾಗಾರಕ್ಕೆ ಆಮಂತ್ರಿಸುತ್ತಿದ್ದೇವೆ. ದಯವಿಟ್ಟು ಬನ್ನಿ. ಭಾಗವಹಿಸಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಬಿಂದುಮಾಧವ ವಿ.ಜೆ. : 9008833886/ ರಂಜನ್ ಭಟ್ ಕೆ.ಆರ್. 9481255787/ info@vedah.com

50 ಆಸಕ್ತರಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ.

ವಯೋಮಿತಿ: 20 ವರ್ಷ ಮೇಲ್ಪಟ್ಟವರು 50 ವರ್ಷದ ಒಳಗಿನವರು.

ಕಾರ್ಯಾಗಾರ ಸ್ಥಳ: ಅರೋವೇದ ತೋಟ, ಏಡಮಡು ಗ್ರಾಮ, ಕನಕಪುರ ಹೆದ್ದಾರಿ. (ಬೆಂಗಳೂರಿನಿಂದ 25 ಕಿ.ಮೀ.)