ಸೂರ್ಯ : ಅಂತಃಪ್ರಕಾಶದ ಅಧಿದೇವತೆ

40.00

ಸೂರ್ಯ – ಸವಿತೃ ದೇವತೆಯನ್ನು ಕುರಿತ ಈ ಪುಸ್ತಕವು, ಅಗ್ನಿ, ಇಂದ್ರ, ಸೋಮ, ಗಣಪತಿ, ಬ್ರಹ್ಮಣಸ್ಪತಿ, ರುದ್ರ ಮುಂತಾದ ದೇವತೆಗಳನ್ನು ಕುರಿತ ಪುಸ್ತಕಗಳಿಗೆ ಪೂರಕವಾಗಿದೆ. ಸೂರ್ಯನು ಪರಮ ಪ್ರಕಾಶ ಹಾಗೂ ಪರಮ ಸತ್ಯ ಆಗಿದ್ದಾನೆ. ಸೂರ್ಯನಲ್ಲಿ ಕಾಣುವ ಭೌತಿಕ ಗೋಳವು ಸೂರ್ಯನ ಭೌತಿಕ ರೂಪದ ಸಂಕೇತ.

ಈ ದೇವತೆಯ ವೈವಿಧ್ಯಮಯ ಶಕ್ತಿಗಳನ್ನು ವಿವರಿಸಲು ಹಲವಾರು ಮಂತ್ರಗಳು ಅಧ್ಯಾಯ ೨ ಮತ್ತು ೩ರಲ್ಲಿವೆ.

ಸೂರ್ಯನನ್ನು ಸಾಮಾನ್ಯವಾಗಿ ಅನಂತ ಪ್ರಕಾಶದ ನಿಷ್ಕ್ರಿಯ ರೂಪವೆಂದು ಭಾವಿಸಲಾಗಿದೆ. ಸೃಷ್ಟಿಯ ಪ್ರಶ್ನೆ ಬಂದಾಗ, ಸವಿತೃವಿನ ಹೆಸರನ್ನು ಬಳಸಲಾಗುತ್ತದೆ. ಸವಿತರ್ ಮತ್ತು ಅವನ ಕಾರ್ಯದ ಪ್ರಯೋಜನಗಳ ಬಗ್ಗೆ ಅಧ್ಯಾಯ ೪ರಲ್ಲಿ ತಿಳಿಸಲಾಗಿದೆ.

ಸೂರ್ಯನು ಸಕಲ ಚರಾಚರಗಳನ್ನು ಕೇವಲ ಸ್ಪರ್ಶದಿಂದ ಪೋಷಿಸುತ್ತಾನೆ ಎಂದು ಹೇಳಲಾಗಿದೆ. ಹಾಗಿದ್ದಲ್ಲಿ ಜೀವಿಗಳ ಸಂಕಟವನ್ನು ವಿವರಿಸುವುದು ಹೇಗೆ? ಈ ವಿಷಯದ ಬಗ್ಗೆ ಋಗ್ವೇದದ ೫ನೇ ಅಧ್ಯಾಯದಲ್ಲಿ ಚಿಂತನೆ ಇದೆ.

ಹಿಂದೂ ಪರಂಪರೆಯಲ್ಲಿ ಸೂರ್ಯನನ್ನು ಸಕಲ ರೋಗಗಳ ಮತ್ತು ನೋವುಗಳ ನಿವಾರಕ ಎಂದು ಭಾವಿಸಲಾಗಿದೆ. ಪ್ರಸಿದ್ದವಾದ “ಆದಿತ್ಯ ಹೃದಯ” ಮುಂತಾದ ಗ್ರಂಥದಿಂದ ಇದು ಸ್ಪಷ್ಟವಾಗಿದೆ. ರೋಗ ಉಪಶಮನಕ್ಕಾಗಿ ಸೂರ್ಯನನ್ನು ಪ್ರಾರ್ಥಿಸುವ ಹಲವಾರು ಮಂತ್ರಗಳು ೬ನೇ ಅಧ್ಯಾಯದಲ್ಲಿವೆ. (೬. ೪೭. ೨,೩) ಮುಂತಾದ ಹಲವಾರು ಮಂತ್ರಗಳಿಂದ ಸೂಚಿತವಾಗಿರುವಂತೆ, ಋಗ್ವೇದದಲ್ಲಿ ಸೋಮ ಮತ್ತು ರುದ್ರ ದೇವತೆಗಳನ್ನು ಮಹಾನ್ ಚಿಕಿತ್ಸಕರೆಂದು ಭಾವಿಸಲಾಗಿದೆ ಎಂಬುದನ್ನು ಗಮನಿಸಿ.


ಒಳಪುಟಗಳಲ್ಲಿ
i) ಸಂಕ್ಷಿಪ್ತ ರೂಪಗಳು / iv
ii) ಓದುಗರೊಡನೆ / v
1. ಸೂರ್ಯ ಮತ್ತು ಸವಿತೃ : ಪೀಠಿಕೆ / 1
2. ಪ್ರಕಾಶದಾತ ಸೂರ್ಯ / 3
3. ಸೂರ್ಯನ ಶಕ್ತಿಗಳು / 8
4. ಸೃಷ್ಟಿಕರ್ತ ಸವಿತಾ / 15
5. ದುಃಖದ ವಿವರಣೆ ಹಾಗೂ ಮಾರ್ತಾಂಡ /20
6. ರೋಗ ಉಪಶಮನ ಶಕ್ತಿಗಳು / 22
7. ಸ್ವರ್, ಸೂರ್ಯಲೋಕ / 25
8. ಸುಖಾನುಭವದ ಅಧಿದೇವತೆ ಭಗ-ಸವಿತೃ / 27
9. ಮಿತ್ರ-ವರುಣ / 34
10. ಗಾಯತ್ರೀ ಮಂತ್ರ / 40
11. ಧ್ಯಾನಕ್ಕಾಗಿ ಗಾಯತ್ರೀ / 44
12. ನವಚೈತನ್ಯ ಸಾಧನೆ / 46
13. ಗಾಯತ್ರೀ ಮಂತ್ರದ ಶ್ರೇಷ್ಠತೆ / 50

ಅನುಬಂಧನಗಳು
1. ಸ್ತ್ರೀಯರು ಮತ್ತು ಗಾಯತ್ರೀ / 52
2. ಶಮನಕಾರಿ ಶಕ್ತಿಯ ಬಗ್ಗೆ ಹೆಚ್ಚಿನ ವಿವರಗಳು /54
3. ಉಲ್ಲೇಖಿತ ಮಂತ್ರಗಳ ಪಟ್ಟಿ / 55

SKU: 43ec517d68b6 Category: