ರುದ್ರ ಮಂತ್ರಗಳು (ನಮಕ, ಚಮಕ)

50.00

ತೈತ್ತಿರೀಯ ಸಂಹಿತೆಯಲ್ಲಿನ ರುದ್ರಮಂತ್ರಗಳು ಪ್ರಜ್ಞೆಯ ಉತ್ಕ್ರಾಂತಿಗಾಗಿ ಮತ್ತು ಉಪಶಮನಕಾರಿ ಶಕ್ತಿಯ ಪ್ರಕಟಣೆಗಾಗಿ ಮಹಾನ್ ಋಷಿಗಳಿಂದ ಮಾನವತೆಗೆ ಕೊಡಲ್ಪಟ್ಟಿವೆ. ನಮಕ ಸೂಕ್ತದ ಪಾಠ ಮತ್ತು ಅರ್ಥವನ್ನು ನೀಡಿರುವ ಅನೇಕ ಪುಸ್ತಕಗಳಿವೆ. ಪ್ರಸ್ತುತ ಪುಸ್ತಕವು ಅವುಗಳಿಗಿಂತ ಹಲವಾರು ಮಹತ್ವಪೂರ್ಣ ರೀತಿಗಳಲ್ಲಿ ಭಿನ್ನವಾಗಿದೆ. ಕೇವಲ ಮಂತ್ರ ಪಠನ ಮಾತ್ರವಲ್ಲದೆ ನಮ್ಮ ಸೂಕ್ಷ್ಮ ಶರೀರಗಳಲ್ಲಿ ನಡೆಯುತ್ತಿರುವ ಅಂತರ್ಯಜ್ಞದ ಅನುಷ್ಠಾನ ಇಲ್ಲಿನ ಕೇಂದ್ರ ಬಿಂದುವಾಗಿದೆ. ನಮಕ ಮತ್ತು ಚಮಕ ಸೂಕ್ತಗಳ ಪಠನವು ಈ ಅನುಷ್ಠಾನದ ಒಂದು ಭಾಗವಾಗಿದೆ. ಆಧುನಿಕರು ಮತ್ತು ಯಾಸ್ಕ ಮುಂತಾದ ಪ್ರಾಚೀನ ದಿಗ್ಗಜರು ಗಮನಿಸಿದಂತೆ, ವೇದಮಂತ್ರವನ್ನು ಅರ್ಥಮಾಡಿಕೊಳ್ಳದೇ ಪಠಿಸುವುದು ನಿರರ್ಥಕ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ.

ಈ ಪುಸ್ತಕದಲ್ಲಿ ಆರು ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯವು ವೇದದ ಸತ್ವಾರ್ಥವನ್ನು, ರುದ್ರ-ಶಾಂತಿ ಪ್ರಾರ್ಥನೆಯನ್ನು, ವೇದದಲ್ಲಿನ ಶಿವ, ವಿಷ್ಣು ಮುಂತಾದ ದೇವತೆಗಳ ವಿಚಾರವನ್ನು ಪರಿಚಯಿಸುತ್ತದೆ. ೨ ರಿಂದ ೫ರ ವರೆಗಿನ ಅಧ್ಯಾಯಗಳು ಅಂತರ್ ಯಜ್ಞವನ್ನು ನಿಯೋಜಿಸುತ್ತವೆ. ಎರಡನೆಯ ಅಧ್ಯಾಯಕ್ಕೆ ಲಘುನ್ಯಾಸ ಅಥವಾ ಶರೀರದ ಎಲ್ಲ ಅಂಗಗಳೂ ಕೇವಲ ಭೌತದ್ರವ್ಯ ಎಂಬ ಕಲ್ಪನೆಯನ್ನು ಬಿಟ್ಟುಬಿಡುವುದು ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಶರೀರದ ಹಲವಾರು ಅಂಗಗಳಲ್ಲಿ ಉಪಸ್ಥಿತವಿರುವ ವಿಭಿನ್ನವಾದ ವಿಶ್ವಶಕ್ತಿಗಳನ್ನು ನಾವು ಪ್ರಾರ್ಥಿಸುವೆವು. ಓದುಗರ ಅನುಕೂಲಕ್ಕಾಗಿ, ಎಲ್ಲ ಮಂತ್ರಗಳನ್ನು ಮತ್ತು ಅವುಗಳ ಆಧ್ಯಾತ್ಮಿಕ ಅರ್ಥವನ್ನು ನೀಡಲಾಗಿದೆ.


ಅಧ್ಯಾಯ ಸೂಚಿ
1. ಪ್ರಸ್ತಾವನೆ / 01
1.1 ವೇದಗಳು / 01
1.2 ಯಜುರ್ವೇದ ತೈತ್ತಿರೀಯ ಸಂಹಿತೆ / 02
1.3 ಶತರುದ್ರೀಯ; ರುದ್ರ-ಅಧ್ಯಾಯ / 07
1.4 ಈ ಪುಸ್ತಕದ ವೈಶಿಷ್ಟತೆ / 08
1.5 ಈ ಪುಸ್ತಕದ ನಿರ್ದಿಷ್ಟ ಪ್ರಯೋಜನಗಳು / 09
1.6 ಶಿವ-ಬ್ರಹ್ಮ-ವಿಷ್ಣು ತ್ರಿಮೂರ್ತಿಗಳು / 14
1.7 ಗಣಪತಿ ಮಂತ್ರ / 16
1.8 ತ್ರ್ಯಂಬಕ ಮಂತ್ರ / 16
2. ಲಘುನ್ಯಾಸ : ಅಂತರ್ಯಜ್ಞದ ಮೂಲಾಂಶಗಳು / 17
2.1 ಧ್ಯಾನ / 17
2.2 ಸೂಕ್ಷ್ಮ ಶರೀರದಲ್ಲಿರುವ ದೇವತೆಗಳು / 18
2.3 ಧ್ಯಾನ / 24

3. ನಮಕ ಸೂಕ್ತ / 26
3.1 ರುದ್ರ ಪ್ರಶಾಂತೀಕರಣ ಸೂಕ್ತ / 26
3.2-3.9 ರುದ್ರ-ಶಿವನ ಉಪಾಧಿಗಳು / 30-44
3.10 ಶಿವ-ರುದ್ರರನ್ನು ಸ್ತುತಿಸುವ ೧೨ ಋಕ್ – ಮಂತ್ರಗಳು / 46
3.11 ಶಿವ-ರುದ್ರರನ್ನು ಸ್ತುತಿಸುವ ಋಕ್ ಹಾಗೂ ಯಜುಸ್ ಮಂತ್ರಗಳು / 51
3.12 ಮಂಗಳಾಚರಣ ಮಂತ್ರಗಳು / 53
4. ಚಮಕ ಸೂಕ್ತ (ತೈ. ಸಂ. ೪.೭) / 56
4.1 ಭೌತಿಕ, ಪ್ರಾಣಮಯ ಹಾಗೂ ಮನೋಮಯ ಶಕ್ತಿಗಳು / 58
4.2 ಪ್ರಾಣಶಕ್ತಿಯ ಧ್ಯೇಯ / 59
4.3 ಮನೋಶಕ್ತಿಯ ಧ್ಯೇಯಗಳು / 61
4.4 ಶರೀರದ ಪೋಷಣೆ / 62
4.5 ನೈಸರ್ಗಿಕ ಶಕ್ತಿಗಳು / 64
4.6 ದೈವೀ ಶಕ್ತಿಗಳು / 65
4.7 ದೇವತೆಗಳಲ್ಲಿ ಸೋಮ ಅಥವಾ ಆನಂದದ ವಿತರಣೆ / 66
4.8 ಯಜ್ಞ ಸಾಧನಗಳ ಶಕ್ತಿಗಳು / 68
4.7 ಜ್ಯೋತಿ ಮತ್ತು ಮಂತ್ರ – ಶಬ್ದಗಳ ಶಕ್ತಿ / 69
4.10 ಭಾಗ 1 : ಸಾಂಕೇತಿಕ ಪ್ರಾಣಿಗಳು / 70
ಭಾಗ 2 : ಪರಿಪೂರ್ಣತೆ / 72
4.11 ಪೂರ್ಣಾಂಕವು (integers) ಸ್ಪಷ್ಟಪಡಿಸುವ ಅಜ್ಞಾತ ಶಕ್ತಿಗಳು / 72
4.12 ಮಂಗಳಾಚರಣ ಮಂತ್ರಗಳು / 74
5. ಅಂತರ್ಯಜ್ಞದ ಮಂಗಳಾಚರಣೆ / 76
5.1 ಸಮೃದ್ಧಿಯ ಉಗಮ / 76
5.2 ಆತ್ಮದ ಪಯಣ (ಅಗ್ನಿ-ಪಕ್ಷಿ ; ಸುಪರ್ಣ ) / 79
5.3 ಯಜ್ಞದ ಮಂಗಳಾಚರಣೆ / 84
6. ಶಿವ-ಸಂಕಲ್ಪ ಮಂತ್ರಗಳು / 89

SKU: 68d30a959472 Category: