Rig Veda Samhite | Mandala 7

300.00

ಋಗ್ವೇದ ೭ನೇ ಮಂಡಲದ ಎಲ್ಲ ೮೪೧ ಮಂತ್ರಗಳನ್ನು ಅರ್ಥಸಹಿತ ಹಾಗೂ ಅಲ್ಲಲ್ಲಿ ಟಿಪ್ಪಣಿಗಳೊಂದಿಗೆ ಇಲ್ಲಿ ಅರ್ಪಿಸುತ್ತಿದ್ದೇವೆ. ಈ ಮಂಡಲದ ಬಹುಪಾಲು ಮಂತ್ರಗಳ ದ್ರಷ್ಟಾರ ವಸಿಷ್ಠ ಋಷಿ.

ಪಾರಂಪರಿಕವಾಗಿ ಪ್ರತಿಯೊಂದು ಮಂತ್ರವೂ ಅನೇಕ ಪಾದಗಳಲ್ಲಿ (ಸಾಮಾನ್ಯವಾಗಿ ನಾಲ್ಕು ) ವಿಭಾಗಿಸಲ್ಪಟ್ಟಿದೆ. ನಾವು ಪ್ರತಿಯೊಂದು ಭಾಗದ ಅನುವಾದವೂ ಅರ್ಥಪೂರ್ಣವಾಗುವಂತೆ ಮತ್ತು ಅನುವಾದದಲ್ಲಿ ಒಂದು ಸಾಲಿಗೆ ಅಡಕವಾಗುವಂತೆ, ಮಂತ್ರವನ್ನು ಕೆಲವೊಮ್ಮೆ ಹೆಚ್ಚು ಭಾಗಗಳಾಗಿ ವಿಭಾಗಿಸಿದ್ದೇವೆ. ಹೀಗೆ, ಇಡೀ ಅನುವಾದ, ಪದ್ಯರೂಪವೆಂದೆನ್ನಲಾಗದಿದ್ದರೂ, ಕೆಲಮಟ್ಟಿನ ಕಾವ್ಯಸ್ವರೂಪ ರಚನೆ ಹೊಂದಿದೆ. ಸಂಸ್ಕೃತ ಪಾಠದ ಒಂದು ಪಾದವು, ಒಂದೇ ಸಾಲಿನಲ್ಲಿ ಅನುವಾದಿಸಲ್ಪಟ್ಟಿರುವುದರಿಂದ, ಪದಗಳ ಅರ್ಥವನ್ನು ಅರಿಯಲು ಆಸಕ್ತಿಯುಳ್ಳ ಓದುಗರಿಗೆ ಅನುಕೂಲವಾಗಿದೆ.

‘ಸಾಕ್ಷಿ’ಯ ಈ ಹಿಂದಿನ ಪ್ರಕಟಣೆಗಳಲ್ಲಿ ಇದ್ದಂತೆಯೇ, ವೇದದ ಆಧ್ಯಾತ್ಮಿಕ ಮತ್ತು ಮನಸ್ಸಂಬಂಧಿತ (ಮನಃಶಾಸ್ತ್ರೀಯ) ಸಂದೇಶದ ಮೇಲೆ ಲಕ್ಷ್ಯ ಕೇಂದ್ರಿತವಾಗಿಟ್ಟುಕೊಳ್ಳಲಾಗಿದೆ. ನಮ್ಮ ಪುಸ್ತಕದ ಆದ್ಯ ಉದ್ದೇಶವು ಎಲ್ಲ ಜೀವನ ಸ್ತರಗಳಿಗೆ ಸೇರಿದ ವೇದ ಪ್ರಿಯರಿಗೆ, ಅನುವಾದವು ಅರಿಯಲು ಅನುಕೂಲವಾಗಿವಂತೆ ಮಾಡುವುದಾಗಿದೆ, ಹೊರತು, ಭಾಷತಜ್ಞರಿಗೆ ಅಥವಾ ವಿದ್ವದ್ವಲಯದ ಪರಿಣತರಿಗೆ ಮಾತ್ರ ಸೀಮಿತವಾಗಿಡುವುದಲ್ಲ.

ನಮ್ಮ ಈ ಹಿಂದಿನ ಪುಸ್ತಕಗಳಾದ ‘ಋಗ್ವೇದ ಸಂಹಿತೆ – ಮಂಡಲ ಹತ್ತು’, ಮತ್ತು ‘ಋಗ್ವೇದ ಸಂಹಿತೆ – ಮಂಡಲ ನಾಲ್ಕು’ ಇವುಗಳಲ್ಲಿ ವಿವರವಾಗಿ ವರ್ಣಿತವಾದ ಮಾದರಿಯನ್ನೇ ಈ ಅನುವಾದದಲ್ಲಿಯೂ ಅನುಸರಿಸಲಾಗಿದೆ.

ಮಂತ್ರಗಳಲ್ಲಿಯ ಅನೇಕ ಶಬ್ದಗಳಿಗೆ ಶ್ರೀ ಅರೋಬಿಂದೊ ನೀಡಿದ ಅರ್ಥವು, ಮಹಾ ಪಂಡಿತರಾದ ಸಾಯಣರ ಭಾಷ್ಯದಲ್ಲಿ ಕಂಡುಬರುವುದಕ್ಕಿಂತ, ಅಥವಾ ಭಾರತಶಾಸ್ತ್ರಜ್ಞರ (Indologists) ಅನುವಾದಗಳಲ್ಲಿ ಕಂಡುಬರುವ ಅರ್ಥಕ್ಕಿಂತ ತೀರ ವಿಭಿನ್ನವಾಗಿದೆ ಎಂಬುದನ್ನು ಬೇರೆ ಹೇಳುವ ಅವಶ್ಯಕತೆ ಇಲ್ಲ. ಶಾಸ್ತ್ರಿಯ (ಸಾಹಿತ್ಯಕ ) ಸಂಸ್ಕೃತಕ್ಕಿಂತ ತೀರ ಭಿನ್ನವಾದ, ವೇದಮಂತ್ರಗಳ ಸಂಸ್ಕೃತವನ್ನು ಶ್ರೀ ಅರೋಬಿಂದೊ ಆಳವಾಗಿ ಅಧ್ಯಯನ ಮಾಡಿದ್ದರು. ಈ ಅಧ್ಯಯನ ಮತ್ತು ವೇದರಹಸ್ಯದ ಕುರಿತಾದ ಅವರ ಅಂತಃಸ್ಪುರಣೆ, ಇವು ಪದಗಳ ಉಚಿತ ಅರ್ಥ ನೀಡುವಲ್ಲಿ ನೆರವಾದವು; ಅವನ್ನೇ ಇಲ್ಲಿ ತೆಗೆದುಕೊಳ್ಳಲಾಗಿದೆ. ಶಬ್ದಗಳಿಗೆ ಅರ್ಥಾರೋಪಣೆ ಮಾಡುವ ಈ ವಿಷಯ ಕುರಿತ ಹೆಚ್ಚಿನ ವಿವರಗಳಿಗೆ ‘ಸಾಕ್ಷಿ’ ಪ್ರಕಟಣೆ (Semantics of Rig Veda) ‘ಋಗ್ವೇದದ ಶಬ್ದಾರ್ಥ ವಿವರಣೆ’ ಎಂಬ ಪುಸ್ತಕವನ್ನು ನೋಡಬಹುದು. ( ix ) ನೆಯ ವಿಭಾಗದಲ್ಲಿ ಮಂತ್ರಗಳಲ್ಲಿರುವ ಕೆಲವೊಂದು ಮುಖ್ಯ ಶಬ್ದಗಳಿಗೆ ಅರ್ಥವನ್ನು ಕೊಡಲಾಗಿದೆ.

ನಮ್ಮ ಕೈಪಿಡಿ ಪುಸ್ತಕ ‘Essentials of Rig Veda’ (ಋಗ್ವೇದದ ಮುಖ್ಯ ಅಂಶಗಳು), ಮಂತ್ರ ಛಂಧಸ್ಸು, ಋಷಿಗಳು, ದೇವತೆಗಳು ಶಕ್ತಿಗಳು ಮತ್ತು ಕೆಲವೊಂದು ಸ್ವಾರಸ್ಯಕರ ವಿಷಯಗಳ ಕುರಿತ ಉತ್ತಮ ಮೇಲ್ನೋಟವನ್ನು ನೀಡುತ್ತದೆಯೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.


ಒಳಪುಟಗಳಲ್ಲಿ
i. Foreword by Dr. Prof. Bhashyam Swamy / v
ii. 104 ಸೂಕ್ತಗಳ ಶೀರ್ಷಿಕೆಗಳು : ಮಂಡಲ 7 / vi
iii. ವಿವಿಧ ದೇವತೆಗಳ ಉದ್ದೇಶಿಸಿದ ಸೂಕ್ತಗಳು / viii
iv. ಓದುಗರೊಡನೆ / viii
v. ವಸಿಷ್ಠ ಋಷಿ / ix
vi. ಮಂಡಲ : 7 – ಮೇಲ್ನೋಟ / xii
vii. ದೇವತಾ ಶಕ್ತಿಗಳು : ಒಂದು ಅವಲೋಕನ / xiii
viii. ದೇವತೆಗಳ ಸಾಂಕೇತಿಕತೆ / xix
ix. ಕೆಲವು ಶಬ್ದಗಳು, ಆಧ್ಯಾತ್ಮಿಕ ಅರ್ಥಗಳು / xx
x. ಸಂಕ್ಷಿಪ್ತ ರೂಪಗಳು / xx

I. ಪಠ್ಯ, ಅನುವಾದ ಹಾಗೂ ಟಿಪ್ಪಣಿಗಳು : 841 ಮಂತ್ರಗಳು (104 ಸೂಕ್ತಗಳು)
ವಿಭಾಗ  ದೇವತೆಗಳು              ಸೂಕ್ತಗಳು  ಮಂತ್ರಗಳು  ಪುಟ
1         ಅಗ್ನಿ                            1-17        145          1
2        ಇಂದ್ರ, ವಸಿಷ್ಠನ ಜನ್ಮ        18-33      161         63
3        ವಿಶ್ವೇದೇವತೆಗಳು, ಸವಿತೃ  34-45      106       131
ಭಗ, ಶಾಂತಿ
4        ರುದ್ರ, ವಾಸ್ತೋಷ್ ಪತಿ,      46-59      90         177
ಜಲಗಳು, ಋಭು, ಮಾರುತರು
5       ಸೂರ್ಯ, ಉಷ, ಮಿತ್ರ,        60-89       223      220
ವರುಣ, ಅಶ್ವಿನರು
6       ವಾಯು, ಸರಸ್ವತಿ, ಬೃಹಸ್ಪತಿ 90-98       58        321
7       ವಿಷ್ಣು, ಪರ್ಜನ್ಯ                 99-104     58        354

II. ಅನುಬಂಧಗಳು
1. ಕೆಲವು ಪದಗಳ ಆಧ್ಯಾತ್ಮಿಕ ಅರ್ಥಗಳು / 383
2. ಈ ಭಾಷಾಂತರದ ಮುಖ್ಯಾಂಶಗಳು / 385
3. ಪರಾಮರ್ಶನ ಸೂಚಿ / 388
4. ವಿಷಯ ಸೂಚಿ / 389

SKU: 8179940896 Category: