Rig Veda Samhite | Mandala 3

250.00

ಋಗ್ವೇದ ತೃತೀಯ ಮಂಡಲದ ಎಲ್ಲಾ ೬೧೭ ಮಂತ್ರಗಳನ್ನು ೬೨ ಸೂಕ್ತಗಳಲ್ಲಿ ವಿವರಣೆಗಳೊಂದಿಗೆ ಸಮರ್ಪಿಸಲು ನಾವು ಹರ್ಷಿಸುತ್ತೇವೆ. ಈ ಮಂಡಲದ ಎಲ್ಲಾ ಮಂತ್ರಗಳು ಋಷಿ ವಿಶ್ವಾಮಿತ್ರ ಅಥವಾ ಅವರ ತಂದೆ ಗೌಥಿ ಕೌಶಿಕ ಅಥವಾ ವಿಶ್ವಾಮಿತ್ರರ ಪುತ್ರರಿಗೆ ಸಂಬಧಿಸಿದವಾಗಿವೆ. ರಾಮಾಯಣ ಅಥವಾ ಪುರಾಣಗಳ ಕುರಿತು ಸ್ವಲ್ಪ ತಿಳಿದಿರುವ ಬಹಳಷ್ಟು ಜನರಿಗೆ ವಿಶ್ವಾಮಿತ್ರ ಋಷಿಗಳ ಪೂರ್ವಾಶ್ರಮದಲ್ಲಿಯ ಋಷಿ ವಸಿಷ್ಟರೊಂದಿಗಿನ ಸಂಘರ್ಷದ ಬಗ್ಗೆ ತಿಳಿದಿರುತ್ತದೆ. ಋಷಿ ವಶಿಷ್ಠರಿಂದ ರಚಿಸಲ್ಪಟ್ಟಿರುವ ಏಳನೆಯ ಮಂಡಲದಲ್ಲಾಗಲಿ ಅಥವಾ ಪ್ರಸ್ತುತ ಮಂಡಲದಲ್ಲಾಗಲಿ ಈ ಕಲಹ ಕುರಿತು ಉಲ್ಲೇಖವಿಲ್ಲ. ನಾವು ಈ ಕಲಹವನ್ನು ಸಾಂಕೇತಿಕವಾಗಿ ಅರ್ಥ ಮಾಡಿಕೊಳ್ಳಬೇಕು. ಈ ಕಲಹದ ಸಾಂಕೇತಿಕತೆಯನ್ನು ಅನುಬಂಧ ೩ ರಲ್ಲಿ ವಿವರಿಸಲಾಗಿದೆ.

ಪಾರಂಪರಿಕವಾಗಿ ಪ್ರತಿಯೊಂದು ಮಂತ್ರವೂ ಅನೇಕ ಪಾದಗಳಲ್ಲಿ (ಸಾಮಾನ್ಯವಾಗಿ ನಾಲ್ಕು ) ವಿಭಾಗಿಸಲ್ಪಟ್ಟಿದೆ. ನಾವು ಪ್ರತಿಯೊಂದು ಭಾಗದ ಅನುವಾದವೂ ಅರ್ಥಪೂರ್ಣವಾಗುವಂತೆ ಮತ್ತು ಅನುವಾದದಲ್ಲಿ ಒಂದು ಸಾಲಿಗೆ ಅಡಕವಾಗುವಂತೆ, ಮಂತ್ರವನ್ನು ಕೆಲವೊಮ್ಮೆ ಹೆಚ್ಚು ಭಾಗಗಳಾಗಿ ವಿಭಾಗಿಸಿದ್ದೇವೆ. ಹೀಗೆ, ಇಡೀ ಅನುವಾದ, ಪದ್ಯರೂಪವೆಂದೆನ್ನಲಾಗದಿದ್ದರೂ, ಕೆಲಮಟ್ಟಿನ ಕಾವ್ಯಸ್ವರೂಪ ರಚನೆ ಹೊಂದಿದೆ. ಸಂಸ್ಕೃತ ಪಾಠದ ಒಂದು ಪಾದವು, ಒಂದೇ ಸಾಲಿನಲ್ಲಿ ಅನುವಾದಿಸಲ್ಪಟ್ಟಿರುವುದರಿಂದ, ಪದಗಳ ಅರ್ಥವನ್ನು ಅರಿಯಲು ಆಸಕ್ತಿಯುಳ್ಳ ಓದುಗರಿಗೆ ಅನುಕೂಲವಾಗಿದೆ.

‘ಸಾಕ್ಷಿ’ಯ ಈ ಹಿಂದಿನ ಪ್ರಕಟಣೆಗಳಲ್ಲಿ ಇದ್ದಂತೆಯೇ, ವೇದದ ಆಧ್ಯಾತ್ಮಿಕ ಮತ್ತು ಮನಸ್ಸಂಬಂಧಿತ (ಮನಃಶಾಸ್ತ್ರೀಯ) ಸಂದೇಶದ ಮೇಲೆ ಲಕ್ಷ್ಯ ಕೇಂದ್ರಿತವಾಗಿಟ್ಟುಕೊಳ್ಳಲಾಗಿದೆ. ನಮ್ಮ ಪುಸ್ತಕದ ಆದ್ಯ ಉದ್ದೇಶವು ಎಲ್ಲ ಜೀವನ ಸ್ತರಗಳಿಗೆ ಸೇರಿದ ವೇದ ಪ್ರಿಯರಿಗೆ, ಅನುವಾದವು ಅರಿಯಲು ಅನುಕೂಲವಾಗಿವಂತೆ ಮಾಡುವುದಾಗಿದೆ, ಹೊರತು, ಭಾಷತಜ್ಞರಿಗೆ ಅಥವಾ ವಿದ್ವದ್ವಲಯದ ಪರಿಣತರಿಗೆ ಮಾತ್ರ ಸೀಮಿತವಾಗಿಡುವುದಲ್ಲ.

ನಮ್ಮ ಈ ಹಿಂದಿನ ಪುಸ್ತಕಗಳಾದ ‘ಋಗ್ವೇದ ಸಂಹಿತೆ – ಮಂಡಲ ಹತ್ತು’, ಮತ್ತು ‘ಋಗ್ವೇದ ಸಂಹಿತೆ – ಮಂಡಲ ನಾಲ್ಕು’ ಇವುಗಳಲ್ಲಿ ವಿವರವಾಗಿ ವರ್ಣಿತವಾದ ಮಾದರಿಯನ್ನೇ ಈ ಅನುವಾದದಲ್ಲಿಯೂ ಅನುಸರಿಸಲಾಗಿದೆ.

ಮಂತ್ರಗಳಲ್ಲಿಯ ಅನೇಕ ಶಬ್ದಗಳಿಗೆ ಶ್ರೀ ಅರೋಬಿಂದೊ ನೀಡಿದ ಅರ್ಥವು, ಮಹಾ ಪಂಡಿತರಾದ ಸಾಯಣರ ಭಾಷ್ಯದಲ್ಲಿ ಕಂಡುಬರುವುದಕ್ಕಿಂತ, ಅಥವಾ ಭಾರತಶಾಸ್ತ್ರಜ್ಞರ (Indologists) ಅನುವಾದಗಳಲ್ಲಿ ಕಂಡುಬರುವ ಅರ್ಥಕ್ಕಿಂತ ತೀರ ವಿಭಿನ್ನವಾಗಿದೆ ಎಂಬುದನ್ನು ಬೇರೆ ಹೇಳುವ ಅವಶ್ಯಕತೆ ಇಲ್ಲ. ಶಾಸ್ತ್ರಿಯ (ಸಾಹಿತ್ಯಕ ) ಸಂಸ್ಕೃತಕ್ಕಿಂತ ತೀರ ಭಿನ್ನವಾದ, ವೇದಮಂತ್ರಗಳ ಸಂಸ್ಕೃತವನ್ನು ಶ್ರೀ ಅರೋಬಿಂದೊ ಆಳವಾಗಿ ಅಧ್ಯಯನ ಮಾಡಿದ್ದರು. ಈ ಅಧ್ಯಯನ ಮತ್ತು ವೇದರಹಸ್ಯದ ಕುರಿತಾದ ಅವರ ಅಂತಃಸ್ಪುರಣೆ, ಇವು ಪದಗಳ ಉಚಿತ ಅರ್ಥ ನೀಡುವಲ್ಲಿ ನೆರವಾದವು; ಅವನ್ನೇ ಇಲ್ಲಿ ತೆಗೆದುಕೊಳ್ಳಲಾಗಿದೆ. ಶಬ್ದಗಳಿಗೆ ಅರ್ಥಾರೋಪಣೆ ಮಾಡುವ ಈ ವಿಷಯ ಕುರಿತ ಹೆಚ್ಚಿನ ವಿವರಗಳಿಗೆ ‘ಸಾಕ್ಷಿ’ ಪ್ರಕಟಣೆ (Semantics of Rig Veda) ‘ಋಗ್ವೇದದ ಶಬ್ದಾರ್ಥ ವಿವರಣೆ’ ಎಂಬ ಪುಸ್ತಕವನ್ನು ನೋಡಬಹುದು. ( ix ) ನೆಯ ವಿಭಾಗದಲ್ಲಿ ಮಂತ್ರಗಳಲ್ಲಿರುವ ಕೆಲವೊಂದು ಮುಖ್ಯ ಶಬ್ದಗಳಿಗೆ ಅರ್ಥವನ್ನು ಕೊಡಲಾಗಿದೆ.

ನಮ್ಮ ಕೈಪಿಡಿ ಪುಸ್ತಕ ‘Essentials of Rig Veda’ (ಋಗ್ವೇದದ ಮುಖ್ಯ ಅಂಶಗಳು), ಮಂತ್ರ ಛಂಧಸ್ಸು, ಋಷಿಗಳು, ದೇವತೆಗಳು ಶಕ್ತಿಗಳು ಮತ್ತು ಕೆಲವೊಂದು ಸ್ವಾರಸ್ಯಕರ ವಿಷಯಗಳ ಕುರಿತ ಉತ್ತಮ ಮೇಲ್ನೋಟವನ್ನು ನೀಡುತ್ತದೆಯೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.


ಒಳಪುಟಗಳಲ್ಲಿ
i. ೬೨ ಸೂಕ್ತಗಳ ಶೀರ್ಷಿಕೆಗಳು / iv
ii. ವಿವಿಧ ದೇವತೆಗಳ ಸೂಕ್ತಗಳು / v
iii. ಓದುಗರೊಡನೆ / v
iv. ಋಷಿ ವಿಶ್ವಾಮಿತ್ರ / vi
v. ಮೂರನೇ ಮಂಡಲದ ಋಷಿಗಳು / x
vi. ದೇವತೆಗಳ ಸಾಂಕೇತಿಕತೆ / x
vii.  ಮೂರನೇ ಮಂಡಲದ ವೈಶಿಷ್ಟ್ಯ / xi
viii. ಕೆಲವು ಮುಖ್ಯ ಪದಗಳು / xiii
ix.   ಸಂಕ್ಷಿಪ್ತ ರೂಪಗಳು / xiv

I. ೬೧೭  ಮಂತ್ರಗಳ (೬೨ ಸೂಕ್ತಗಳ) ಅನುವಾದ ಮತ್ತು ವಿವರಣೆ
ಅನುವಾಕ    ಸೂಕ್ತಗಳು   ಮಂತ್ರಗಳ ಸಂಖ್ಯೆ      ಪುಟ
1                1-12             140                    1
2              13-29             118                   55
3              30-38             128                   96
4              39-53             123                 146
5              54-62             108                 194

II. ಅನುಬಂಧಗಳು
1. ಋಗ್ವೇದದ ಮೂಲ ಚಿಂತನೆಗಳು / 240
2. ಅಂತರ್ಯಜ್ಞದ ಪ್ರಯಾಣದ : ಒಳನೋಟಗಳು / 243
3. ವಿಶ್ವಾಮಿತ್ರ ಮತ್ತು ವಸಿಷ್ಠರ ನಡುವಿನ ಸಂಘರ್ಷದ ವಿವರಣೆ / 247
4. ಗಾಯತ್ರೀ ಮಂತ್ರದ ವಿವಿಧ ರೂಪಗಳು / 249
5. (೫.೮೧. ೧)ರಲ್ಲಿ ಕೊಟ್ಟಿರುವ ಸೂರ್ಯ-ಸವಿತ್ರಿಯ ಶ್ರೇಷ್ಠತೆ / 250
6. ಗಾಯತ್ರೀ ಮಂತ್ರವನ್ನು ಉಪಯೋಗಿಸಿ ಧ್ಯಾನ : / 253
7. ಗಾಯತ್ರೀ ಮಂತ್ರ ಮತ್ತು ಪ್ರಾಣ ಪುನಃಶ್ಚೇತನ / 254
8. ಭಗ ಸವಿತ್ರಿಗೆ ಗಾಯತ್ರೀ ಮಂತ್ರ : (೫.೮೨.೧) / 257
9. ಕೆಲವು ಪದಗಳ ಆಧ್ಯಾತ್ಮಿಕ ಅರ್ಥಗಳು / 259
10. ಈ ಅಣು ಅನುವಾದದ ವಿಶೇಷ / 261
11. ವಿಷಯ ಸೂಚಿ / 264

SKU: a3f390d88e4c Category: