Rig Veda Samhite | Mandala 2

250.00

ಎರಡನೇ ಮಂಡಲದ ೪೩ ಸೂಕ್ತಗಳಲ್ಲಿರುವ ಎಲ್ಲಾ ೪೨೯ ಮಂತ್ರಗಳ ಅನುವಾದವನ್ನು, ಪಠ್ಯ, ಅರ್ಥ ಮತ್ತು ವಿವರಣೆಯೊಂದಿಗೆ ನೀಡಲು ಸಂತೋಷಿಸುತ್ತೇವೆ. ಬಹುಪಾಲು ಮಂತ್ರಗಳು ಋಷಿ ಗ್ರುತ್ಸಮದ ಭಾರ್ಗವ ಶೌನಕರಿಗೆ ಅಂತಃಸ್ಪುರನೆಯಾದವು.

ನಮ್ಮ ‘ಸಾಕ್ಷಿ’ ಪ್ರಕಾಶನದ ಹಿಂದಿನ ಪ್ರಕಟಿತ ಪುಸ್ತಕಗಳ ರೀತಿಯಲ್ಲಿ ಇದರಲ್ಲೂ ವೆದದಲ್ಲಿಯ ಆಧ್ಯಾತ್ಮಿಕ/ ಮನಃಪ್ರಣಾದಿ ಸಂದೇಶದತ್ತ ಗಮನಹರಿಸಲಾಗಿದೆ. ಭಾಷಾ ಪಂಡಿತರು, ಮತ್ತು ಜಿಜ್ಞಾಸುಗಳಿಗೆ ಮಾತ್ರ ಸೀಮಿತಗೊಳ್ಳದೆ ಜೀವನದ ವಿವಿಧ ಪಥಗಳಲ್ಲಿರುವ ಸಮಸ್ತ ವೇದಪ್ರಿಯರಿಗೂ ಅನುವಾದವು ಅರ್ಥವಾಗಬೇಕೆಂಬುದೇ ಈ ಪುಸ್ತಕದ ಪ್ರಮುಖ ಉದ್ದೇಶ

ಪಾರಂಪರಿಕವಾಗಿ ಪ್ರತಿಯೊಂದು ಮಂತ್ರವೂ ಅನೇಕ ಪಾದಗಳಲ್ಲಿ (ಸಾಮಾನ್ಯವಾಗಿ ನಾಲ್ಕು ) ವಿಭಾಗಿಸಲ್ಪಟ್ಟಿದೆ. ನಾವು ಪ್ರತಿಯೊಂದು ಭಾಗದ ಅನುವಾದವೂ ಅರ್ಥಪೂರ್ಣವಾಗುವಂತೆ ಮತ್ತು ಅನುವಾದದಲ್ಲಿ ಒಂದು ಸಾಲಿಗೆ ಅಡಕವಾಗುವಂತೆ, ಮಂತ್ರವನ್ನು ಕೆಲವೊಮ್ಮೆ ಹೆಚ್ಚು ಭಾಗಗಳಾಗಿ ವಿಭಾಗಿಸಿದ್ದೇವೆ. ಹೀಗೆ, ಇಡೀ ಅನುವಾದ, ಪದ್ಯರೂಪವೆಂದೆನ್ನಲಾಗದಿದ್ದರೂ, ಕೆಲಮಟ್ಟಿನ ಕಾವ್ಯಸ್ವರೂಪ ರಚನೆ ಹೊಂದಿದೆ. ಸಂಸ್ಕೃತ ಪಾಠದ ಒಂದು ಪಾದವು, ಒಂದೇ ಸಾಲಿನಲ್ಲಿ ಅನುವಾದಿಸಲ್ಪಟ್ಟಿರುವುದರಿಂದ, ಪದಗಳ ಅರ್ಥವನ್ನು ಅರಿಯಲು ಆಸಕ್ತಿಯುಳ್ಳ ಓದುಗರಿಗೆ ಅನುಕೂಲವಾಗಿದೆ.

‘ಸಾಕ್ಷಿ’ಯ ಈ ಹಿಂದಿನ ಪ್ರಕಟಣೆಗಳಲ್ಲಿ ಇದ್ದಂತೆಯೇ, ವೇದದ ಆಧ್ಯಾತ್ಮಿಕ ಮತ್ತು ಮನಸ್ಸಂಬಂಧಿತ (ಮನಃಶಾಸ್ತ್ರೀಯ) ಸಂದೇಶದ ಮೇಲೆ ಲಕ್ಷ್ಯ ಕೇಂದ್ರಿತವಾಗಿಟ್ಟುಕೊಳ್ಳಲಾಗಿದೆ. ನಮ್ಮ ಪುಸ್ತಕದ ಆದ್ಯ ಉದ್ದೇಶವು ಎಲ್ಲ ಜೀವನ ಸ್ತರಗಳಿಗೆ ಸೇರಿದ ವೇದ ಪ್ರಿಯರಿಗೆ, ಅನುವಾದವು ಅರಿಯಲು ಅನುಕೂಲವಾಗಿವಂತೆ ಮಾಡುವುದಾಗಿದೆ, ಹೊರತು, ಭಾಷತಜ್ಞರಿಗೆ ಅಥವಾ ವಿದ್ವದ್ವಲಯದ ಪರಿಣತರಿಗೆ ಮಾತ್ರ ಸೀಮಿತವಾಗಿಡುವುದಲ್ಲ.

ನಮ್ಮ ಈ ಹಿಂದಿನ ಪುಸ್ತಕಗಳಾದ ‘ಋಗ್ವೇದ ಸಂಹಿತೆ – ಮಂಡಲ ಹತ್ತು’, ಮತ್ತು ‘ಋಗ್ವೇದ ಸಂಹಿತೆ – ಮಂಡಲ ನಾಲ್ಕು’ ಇವುಗಳಲ್ಲಿ ವಿವರವಾಗಿ ವರ್ಣಿತವಾದ ಮಾದರಿಯನ್ನೇ ಈ ಅನುವಾದದಲ್ಲಿಯೂ ಅನುಸರಿಸಲಾಗಿದೆ.

ಮಂತ್ರಗಳಲ್ಲಿಯ ಅನೇಕ ಶಬ್ದಗಳಿಗೆ ಶ್ರೀ ಅರೋಬಿಂದೊ ನೀಡಿದ ಅರ್ಥವು, ಮಹಾ ಪಂಡಿತರಾದ ಸಾಯಣರ ಭಾಷ್ಯದಲ್ಲಿ ಕಂಡುಬರುವುದಕ್ಕಿಂತ, ಅಥವಾ ಭಾರತಶಾಸ್ತ್ರಜ್ಞರ (Indologists) ಅನುವಾದಗಳಲ್ಲಿ ಕಂಡುಬರುವ ಅರ್ಥಕ್ಕಿಂತ ತೀರ ವಿಭಿನ್ನವಾಗಿದೆ ಎಂಬುದನ್ನು ಬೇರೆ ಹೇಳುವ ಅವಶ್ಯಕತೆ ಇಲ್ಲ. ಶಾಸ್ತ್ರಿಯ (ಸಾಹಿತ್ಯಕ ) ಸಂಸ್ಕೃತಕ್ಕಿಂತ ತೀರ ಭಿನ್ನವಾದ, ವೇದಮಂತ್ರಗಳ ಸಂಸ್ಕೃತವನ್ನು ಶ್ರೀ ಅರೋಬಿಂದೊ ಆಳವಾಗಿ ಅಧ್ಯಯನ ಮಾಡಿದ್ದರು. ಈ ಅಧ್ಯಯನ ಮತ್ತು ವೇದರಹಸ್ಯದ ಕುರಿತಾದ ಅವರ ಅಂತಃಸ್ಪುರಣೆ, ಇವು ಪದಗಳ ಉಚಿತ ಅರ್ಥ ನೀಡುವಲ್ಲಿ ನೆರವಾದವು; ಅವನ್ನೇ ಇಲ್ಲಿ ತೆಗೆದುಕೊಳ್ಳಲಾಗಿದೆ. ಶಬ್ದಗಳಿಗೆ ಅರ್ಥಾರೋಪಣೆ ಮಾಡುವ ಈ ವಿಷಯ ಕುರಿತ ಹೆಚ್ಚಿನ ವಿವರಗಳಿಗೆ ‘ಸಾಕ್ಷಿ’ ಪ್ರಕಟಣೆ (Semantics of Rig Veda) ‘ಋಗ್ವೇದದ ಶಬ್ದಾರ್ಥ ವಿವರಣೆ’ ಎಂಬ ಪುಸ್ತಕವನ್ನು ನೋಡಬಹುದು. ( ix ) ನೆಯ ವಿಭಾಗದಲ್ಲಿ ಮಂತ್ರಗಳಲ್ಲಿರುವ ಕೆಲವೊಂದು ಮುಖ್ಯ ಶಬ್ದಗಳಿಗೆ ಅರ್ಥವನ್ನು ಕೊಡಲಾಗಿದೆ.

ನಮ್ಮ ಕೈಪಿಡಿ ಪುಸ್ತಕ ‘Essentials of Rig Veda’ (ಋಗ್ವೇದದ ಮುಖ್ಯ ಅಂಶಗಳು), ಮಂತ್ರ ಛಂಧಸ್ಸು, ಋಷಿಗಳು, ದೇವತೆಗಳು ಶಕ್ತಿಗಳು ಮತ್ತು ಕೆಲವೊಂದು ಸ್ವಾರಸ್ಯಕರ ವಿಷಯಗಳ ಕುರಿತ ಉತ್ತಮ ಮೇಲ್ನೋಟವನ್ನು ನೀಡುತ್ತದೆಯೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.


ಒಳಪುಟಗಳಲ್ಲಿ
i. ಕೃತಜ್ಞತೆಗಳು / iv
ii. ಓದುಗರೊಡನೆ / v
iii. ೪೩ ಸೂಕ್ತಗಳ ಶೀರ್ಷಿಕೆ / vi
iv. ವಿವಿಧ ದೇವತೆಗಳ ಸೂಕ್ತಗಳು / viii
v. ಋಷಿ ಗೃತ್ಸಮದ / ix
vi. ಮಂತ್ರಗಳ ಪಠ್ಯ ಮತ್ತು ಅವುಗಳ ಛಂಧಸ್ಸು / x
vii. ಎರಡನೇ ಮಂಡಲ : ಪಕ್ಷಿನೋಟ / xiii
viii. ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ / xvii
ix. ದೇವತೆಗಳ ಸಾಮರ್ಥ್ಯದ ಪಕ್ಷಿನೋಟ / xx
x. ದೇವತೆಗಳ ಸಾಂಕೇತಿಕತೆ / xxiii
xi. ವೇದಗಳಲ್ಲಿ ಪುನರಾವರ್ತಿತವಾಗುವ ಕೆಲವು ಪದಗಳು / xxv

I. ೪೨೯ ಮಂತ್ರಗಳ ಪಠ್ಯ, ಅನುವಾದ ಮತ್ತು ಟಿಪ್ಪಣಿ
ವಿಭಾಗ ಸೂಕ್ತಗಳು ದೇವತೆಗಳು                 ಮಂತ್ರಗಳು   ಪುಟ
1        1-10   ಅಗ್ನಿ                                    1-89           1
2        11-22  ಇಂದ್ರ                                 90-215      45
3        24-26  ಬೃಹಸ್ಪತಿ                            216-259   120
4       27-32  ಆದಿತ್ಯರು ಮತ್ತು ಇತರರು         260-320   135
5       33-37  ರುದ್ರ, ಮರುತರು ಮತ್ತು ಇತರರು321-377   162
6       38-43  ಸವಿತಾ, ಅಶ್ವಿನರು, ಸೋಮ,      378-429    195
ಪೂಷ ಮತ್ತು ಇತರರು

II. ಅನುಬಂಧಗಳು
1. ವೇದದ  ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು / 219
2. ಕೆಲವು ಪದಗಳ ಆಧ್ಯಾತ್ಮಿಕ ಅರ್ಥ / 228

SKU: 735b90b45681 Category: