ಪರಮಾನಂದ ಪ್ರಾಪ್ತಿ (ಋಗ್ವೇದ ಮಂತ್ರಗಳಿಂದ)

25.00

ಎಲ್ಲರಲ್ಲೂ ಆನಂದವು ಪ್ರಕಟಗೊಳ್ಳುವುದಕ್ಕೆ ಸಂಬಂಧಿತ ೩೮ ಋಗ್ವೇದ ಮಂತ್ರಗಳನ್ನು ಈ ಪುಸ್ತಕವು ವಿವರಿಸುತ್ತದೆ. ಮೊದಲನೆಯ ಅಧ್ಯಾಯವು ಆನಂದವನ್ನು ಪಡೆಯಲು ಬೇಕಾದಂಥ ಜ್ಞಾನಕ್ಕೆ ಸಂಬಂಧಿಸಿದ್ದು, ಸಕಲ ಜ್ಞಾನಕ್ಕೂ ತೆರೆದುಕೊಂಡಿರುವುದು ಮತ್ತು ನಕಾರಾತ್ಮಕ ಆಲೋಚನೆ (Negative thought) ಹಾಗೂ ಸಂಕುಚಿತತೆಗಳಲ್ಲಿ ಸಿಲುಕಿಕೊಳ್ಳದಿರುವುದೇ ಇದರ ಮೌಲಿಕ ಕಲ್ಪನೆ. ನಾವು ಪ್ರತಿಯೊಬ್ಬರೂ ಸಹ ಆನಂದ ಸ್ವರೂಪವೇ ಆಗಿದ್ದೇವೆ.

ಎರಡನೆಯ ಅಧ್ಯಾಯವು ಆನಂದದ ತತ್ವವನ್ನು ಕುರಿತದ್ದು. ನಾವು ದೀರ್ಘಕಾಲ ಏಕೆ ಬಾಳಬೇಕು ಎಂಬುದನ್ನು ತಿಳಿಸಿಕೊಡುವ ಮಂತ್ರಗಳು ಇದರಲ್ಲಿವೆ.

ನಮ್ಮೊಳಗೆ ಆನಂದವನ್ನು ಸಾಕ್ಷತ್ಕರಿಸಿಕೊಂಡು ಇದನ್ನು ಉಳಿಸಿಕೊಳ್ಳುವಂತೆ ಮಾಡುವ ವಿಧಾನಗಳಿಗೆ ಸಂಬಂಧಿಸಿದ್ದು ಮೂರನೆಯ ಅಧ್ಯಾಯ. ವಿಷ್ಣು, ರುದ್ರ-ಶಿವ, ದುರ್ಗಾ, ಅಗ್ನಿ, ಆಧ್ಯಾತ್ಮಿಕ ಸೂರ್ಯ ಹಾಗೂ ಸೃಷ್ಟಿಕರ್ತ ಸವಿತೃ ಮೊದಲಾದ ಹಲವು ಮನಃಪ್ರಾಣಾದಿ ವಿಶ್ವಾತೀತ ಶಕ್ತಿಗಳನ್ನು ನಮ್ಮ ಶರೀರದೊಳಗೆ ಆವಾಹಿಸಬೇಕು. ಈ ಅಧ್ಯಾಯದಲ್ಲಿ ಗಾಯತಿ ಮಂತ್ರ, ಶಿವ-ರುದ್ರ ತ್ರಯಂಬಕ ಮಂತ್ರ, ಭೌತಿಕ ಸೂರ್ಯ, ಆಧ್ಯಾತ್ಮಿಕ ಸೂರ್ಯರಿಗೆ ಸಂಬಂಧಿಸಿದ ಪ್ರಸಿದ್ಧ ಮಂತ್ರಗಳಿವೆ.

ಕೊನೆಯದಾದ ನಾಲ್ಕನೆಯ ಅಧ್ಯಾಯದಲ್ಲಿ ಆನಂದದ ಸಾಕ್ಷಾತ್ಕಾರಕ್ಕೆ ಬೇಕಾದ ಸಿದ್ಧತೆಗಳ ಸೂಚನೆಯಿದೆ. ಇದರಲ್ಲಿ ಜಲ ಎಂಬ ದೈವೀ ಶಕ್ತಿಯನ್ನು ಬಳಸಿಕೊಂಡು ನಮ್ಮ ಮಾನಸಿಕ ಆಯಾಮಗಳನ್ನು ಶುದ್ಧಗೊಳಿಸಿಕೊಳ್ಳಲು ಬೇಕಾದ ಮಂತ್ರಗಳೂ ಸೇರಿವೆ.


ಅನುಕ್ರಮಣಿಕೆ
1. ಪರಮಾನಂದ ಪ್ರಾಪ್ತಿಯ ಭೂಮಿಕೆ / 01
1.1 ಪೀಠಿಕೆ / 01
1.2 ಶುಭ ಜ್ಞಾನಕ್ಕೆ ಸುಸ್ವಾಗತ / 02
1.3 ಮಂಗಳಕರವಾದ ಶ್ರವಣಗಳು ಹಾಗೂ ದರ್ಶನಗಳು / 03
1.4 ಋಷಿಗಳೆಡೆ ನಮ್ಮನ್ನು ಸಾಗಿಸಿ / 04
1.5 ಮೋಹ ಹಾಗೂ ಧಾರಾಳತನ / 04
1.6 ಅದಿತಿ – ಅನಂತತೆಯ ಶಕ್ತಿ / 05
2. ಪರಮಾನಂದ ಸಿದ್ಧಾಂತ / ೦೬
2.1 ಸಂತೋಷ /06
2.2 ಪರಮಾನಂದದ ಮಾರ್ಗ / 07
2.3 ಚಿಂತನೆಗೆ ಪ್ರಕಾಶದ ಮುಂದಾಳುತ್ವ / 08
2.4 ಎಲ್ಲರಿಗೂ ಶಾಂತಿ /09
2.5 ಆನಂದದ ಸಿದ್ಧಾಂತ : ಮಧು ವಿದ್ಯಾ / 07
2.6 ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ / 12
3. ಪರಮಾನಂದದ ಪ್ರಾಪ್ತಿ ಹಾಗೂ ಪೋಷಣೆ / 15
3.1 ವಿಷ್ಣು / 15
3.2 ರುದ್ರ – ಶಿವ / 18
3.3 ದುರ್ಗಾ – ಅಗ್ನಿ / 21
3.4 ಪರಮ ಸವಿತೃ ಅಥವಾ ಸಾವಿತ್ರಿಯ ಪ್ರಾರ್ಥನೆ / 25
3.5ಆಧ್ಯಾತ್ಮಿಕ ಸೂರ್ಯನನ್ನು ಕುರಿತು ಪ್ರಾರ್ಥನೆಗಳು / 33
4. ಪೂರ್ವ ಸಿದ್ಧತೆ / 37
4.1 ಮನಸ್ಸು ಮತ್ತು ದೇಹದ ಶುದ್ಧೀಕರಣ / 37
4.2 ನಮ್ಮ ಅಪರಾಧಗಳ ಕ್ಷಮೆಗಾಗಿ ಪ್ರಾರ್ಥನೆ / 42

SKU: 98dce83da57b Category:

Description

93