ನಿಶ್ಚಿತ ಪ್ರಯೋಜನಗಳಿಗಾಗಿ ಪ್ರಾಣಾಯಾಮ ಹಾಗೂ ಆಸನಗಳು

40.00

ಇಂದು ಮಾರುಕಟ್ಟೆಯಲ್ಲಿ ಆಸನ ಹಾಗೂ ಪ್ರಾಣಾಯಾಮ ಕುರಿತು ಹಲವು ಪುಸ್ತಕಗಳು ಲಭ್ಯ ಇವೆ. ಅವುಗಳಲ್ಲಿ ಹೆಚ್ಚಿನವು ಬೃಹತ್ ಗ್ರಂಥಗಳಾಗಿದ್ದು ಅತೀಬೆಲೆ ಉಳ್ಳಂಥವಾಗಿವೆ. ಇಂಥ ಪರಿಸ್ಥಿತಿಯಲ್ಲಿ ಅತ್ಯಗತ್ಯವಾದದ್ದನ್ನು ಅತಿ ಸಂಕ್ಷಿಪ್ತವಾಗಿ ತಿಳಿಸಿಕೊಡುವ ಉದ್ದೇಶದಿಂದ ಈ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ.

ಆಸನ ಹಾಗೂ ಉಸಿರಾಟದ ಜೊತೆಗೆ ದೊಡ್ಡ ದೊಡ್ಡ ಪುಸ್ತಕಗಳಲ್ಲೂ ಉಲ್ಲೇಖಗೊಳ್ಳದ ಇನ್ನೂ ಅನೇಕ ಉಪಯುಕ್ತ ವಿಷಯಗಳಾದ ವಿಶ್ರಾಂತಿ, ಪ್ರಾಣಭರಣ, ಯೋಗ ನಿದ್ರೆ, ಕಣ್ಣುಗಳಿಗಾಗಿ ಯೋಗ ಮುಂತಾದವುಗಳನ್ನು ಈ ಪುಸ್ತಕದಲ್ಲಿ ಅಳವಡಿಸಲಾಗಿದೆ.

ಅಕ್ಷರಃ ಸಾವಿರಾರು ಜನರು ಆಸನ ಹಾಗೂ ಪ್ರಾಣಯಾಮ ತರಬೇತಿ ಪಡೆದಿದ್ದಾರಾದರೂ ಹಲವರು ಅಭ್ಯಾಸವನ್ನು ಮುಂದುವರಿಸುವುದಿಲ್ಲ. ಇದಕ್ಕೆ ಅನ್ಯ ಕಾರಣಗಳ ಜತೆಗೆ ಸೂಕ್ತ ಸಾಹಿತ್ಯದ ಕೊರತೆಯೂ ಒಂದಾಗಿದೆ. ಇಂಥವರೆಲ್ಲರಿಗೂ ಈ ಪುಸ್ತಕ ಖಂಡಿತವಾಗಿಯೂ ಪ್ರಯೋಜನಕರವಾಗಬಲ್ಲದು.

ಆಸನ ಅಥವಾ ಪ್ರಾಣಾಯಾಮಗಳ ಪರಿಚಯವೇ ಇಲ್ಲದಂಥ ವ್ಯಕ್ತಿಗಳು ಈ ಪುಸ್ತಕದಲ್ಲಿ ವಿವರಿಸಲಾದ ಉದರದಿಂದ ಉಸಿರಾಡುವಂಥ ವ್ಯಾಯಾಮಗಳ ಅಭ್ಯಾಸ ಆರಂಭಿಸಿ ನಿಶ್ಚಿತ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಮಟ್ಟಿಗೆ ಪ್ರಸ್ತುತ ಪುಸ್ತಕವು ಸ್ವಯಂ-ಪೂರ್ಣವಾಗಿದೆ.


ಪರಿವಿಡಿ

ಓದುಗರ ಗಮನಕ್ಕೆ

1. ಪ್ರಾಣಾಯಾಮದ ಅಗತ್ಯ / 1

2. ಪ್ರಾಣ ಹಾಗೂ ಅದರ ಕಾರ್ಯವ್ಯಾಪ್ತಿ / 3

3. ಉಸಿರಾಟ ನಿಯಂತ್ರಣ : ಅಭ್ಯಾಸ ಕ್ರಮ / 6

4. ಶುದ್ಧೀಕರಣ ಶ್ವಾಸಗಳು / 20

5. ಉಸಿರಾಟದಲ್ಲಿನ ದೋಷ ನಿವಾರಣೆ / 26

6. ಆರೋಗ್ಯ ಸುಧಾರಣೆಗಾಗಿ ಆಸನಗಳು / 33

7. ಕೀಲುಗಳು ಹಾಗೂ ಬೆನ್ನಿನ ನೋವು ನಿವಾರಣೆ / 39

8. ಪ್ರಾಣಭರಣ ಹಾಗೂ ಉದ್ವೇಗಹರಣ / 48

9. ಯೋಗ ನಿದ್ರೆ / 53

10. ಕಣ್ಣುಗಳಿಗಾಗಿ ಯೋಗ / 56

11. ಅಕಾರಾದಿ ಸೂಚಿ / 59

ಗ್ರಂಥಮಾಲೆ/ 61