Krishna Yajur Veda Taittiriya Samhite – Kanda 4

350.00

ಬಾಹ್ಯ ಪ್ರಗತಿ ವೇಗವಾಗಿ ನಡೆಯುತ್ತಿದೆ. ಅಂತಃಶಕ್ತಿಯ ವರ್ಧನೆಯೆಡೆಗಿನ ಗಮನ ಕಡಿಮೆಯಾಗಿದೆ. ಇದಕ್ಕಾಗಿ ನಾವು ವೇದ ಜ್ಞಾನವನ್ನು ಆಶ್ರಯಿಸಬೇಕಾಗಿದೆ. ಈ ದೃಷ್ಟಿಕೋನದಿಂದ ಡಾ।। ಆರ್. ಎಲ್. ಕಶ್ಯಪ್ ಅವರು ಯಜುರ್ ವೇದ ತೈತ್ತಿರೀಯ ಸಂಹಿತೆಗೆ ಭಾಷ್ಯ ಬರೆದಿದ್ದಾರೆ. ೨೦೦೨ರಿಂದ ಆರಂಭಿಸಿ ೨೦೦೪ರ ವರೆಗೆ ಎಲ್ಲ ಏಳೂ ಕಾಂಡಗಳು ಮೂರು ಸಂಪುಟಗಳಲ್ಲಿ ಪ್ರಕಟಗೊಂಡವು. ಇಂಗ್ಲೀಷ್ ಓದುಗರ ಗಮನ ಸೆಳೆದಿವೆ. ಈ ಜ್ಞಾನ ಭಾರತೀಯ ಭಾಷೆಗಳ ಓದುಗರಿಗೂ ದೊರಕಬೇಕು ಎಂಬ ಅವರ ಅಪೇಕ್ಷೆಗೆ ತಕ್ಕಂತೆ ಮೊಟ್ಟಮೊದಲನೆಯದಾಗಿ ಕನ್ನಡ ಭಾಷೆಗೆ ತರ್ಜುಮೆ ಕೆಲಸ ಆರಂಭವಾಯಿತು.

೨೦೦೭ರಲ್ಲಿ ೧ನೇ ಕಾಂಡದ ಕನ್ನಡ ಆವೃತ್ತಿ ಹೊರಬಂದಿತು. ಇದೀಗ ೪ನೇ ಕಾಂಡ ನಿಮ್ಮ ಕೈಯಲ್ಲಿ ಇದೆ. ೧ನೇ ಕಾಂಡವು ಸುಲಭ ಅಂತರ್ ಯಜ್ಞವನ್ನು ಪರಿಚಯಿಸುತ್ತದೆ. ೪ನೇ ಕಾಂಡದಲ್ಲಿ ಸೂಕ್ಷ್ಮ ಶರೀರದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ವ್ಯಾಪಕವಾಗಿ ಬಳಕೆಯಲ್ಲಿರುವ ರುದ್ರಮಂತ್ರಗಳು (ನಮಕ, ಚಮಕ) ಈ ಕಾಂಡದಲ್ಲಿದೆ. ಈ ಭಾಗವನ್ನು ಈಗಾಗಲೇ ಪ್ರತ್ಯೇಕ ಪುಸ್ತಕವಾಗಿ ಪ್ರಕಟಿಸಿದ್ದು, ಸಾವಿರಾರು ಪ್ರತಿಗಳನ್ನು ಓದುಗರು ಪಡೆದು, ಪ್ರಯೋಜನ ಕಂಡಿದ್ದಾರೆ. ಈ ಮಂತ್ರಗಳ ಗೂಢಾರ್ಥ ತಿಳಿದುಕೊಳ್ಳಲು ಪ್ರಸ್ತುತ ಅನುವಾದ ಸಹಾಯಕಾರಿ ಎಂಬುದು ನಮ್ಮ ವಿಶ್ವಾಸವಾಗಿದೆ. ೪ನೇ ಕಾಂಡದ ಒಟ್ಟು ವಿಷಯ, ಆಶಯ ಕುರಿತಂತೆ ‘ಪಕ್ಷಿನೋಟ’ ಎಂಬ ಪ್ರತ್ಯೇಕ ಅಧ್ಯಾಯ ಇದೆ.

ಯಜುರ್ ವೇದದ ಅಂತರಂಗ ತಿಳಿದುಕೊಂಡರೆ ಇಲ್ಲಿನ ಅನುವಾದವನ್ನು ಅರ್ಥ ಮಾಡಿಕೊಳ್ಳುವುದು ಬಹು ಸುಲಭ. ಇದಕ್ಕಾಗಿ ಡಾ।। ಕಶ್ಯಪ್ ಅವರು ಬರೆದ ಹಲವಾರು ಪ್ರಬಂಧಗಳನ್ನು ೧ನೇ ಕಾಂಡದಲ್ಲಿ ನೀಡಿದ್ದೇವೆ. ಓದುಗರ ಗಮನವನ್ನು ಅದರೆಡೆಗೆ ಸೆಳೆಯಲು ಪ್ರಬಂಧಗಳ ಪಟ್ಟಿಯನ್ನು ಈ ಸಂಪುಟದ ivನೇ ಪುಟದಲ್ಲಿ ನೀಡಲಾಗಿದೆ. ಅಂತೆಯೇ ಈ ಅನುವಾದ ತಿಳಿದುಕೊಳ್ಳಲು ಅನುವಾಗುವಂಥ ಅನೇಕ ಪೂರಕ ಮಾಹಿತಿಗಳನ್ನೂ ನಿಮಗಾಗಿ ೧ನೇ ಕಾಂಡದ ‘ಅನುಬಂಧ’ದಲ್ಲಿ ನೀಡಿದ್ದೇವೆ. ಅವುಗಳೂ ಮೇಲೆ ಉಲ್ಲೇಖಿಸಿದ ಪಟ್ಟಿಯಲ್ಲಿದೆ. ಒಟ್ಟಿನಲ್ಲಿ ಬಾಹ್ಯ ಯಜ್ಞ ಪ್ರತಿಪಾದಕರು ಸೀಮಿತಗೊಳಿಸಿದ್ದ ಈ ಮಹಾನ್ ಜ್ಞಾನವನ್ನು ಮತ್ತೆ ಅದರ ಉಚ್ಛ್ರಾಯ ಸ್ಥಿತಿಯಲ್ಲಿ ಓದುಗರಿಗೆ ಒದಗಿಸುವುದು ನಮ್ಮ ಯೋಜನೆಯಾಗಿದೆ. ಜಾತಿ, ಮತ, ಕುಲ, ಲಿಂಗ, ವಯಸ್ಸು ಈ ಎಲ್ಲ ಭೇದಗಳಿಂದ ದೂರವಾಗಿ ನೈಜ ಪ್ರಗತಿಯ ದಾರಿಯಲ್ಲಿ ಮುನ್ನಡೆಯಲು ಬಯಸುವವರಿಗೆಲ್ಲ ಈ ಜ್ಞಾನ ಮುಕ್ತವಾಗಿದೆ. ಅವರವರ ಶ್ರಮ ಹಾಗೂ ಶ್ರದ್ಧೆಗಳಿಗೆ ಪೂರಕವಾಗಿ ಇದನ್ನು ಪಡೆದುಕೊಳ್ಳಬಹುದಾಗಿದೆ.

ಹಲವು ಯಜುಸ್ ಮಂತ್ರಗಳು ತುಂಬ ಚಿಕ್ಕದಾಗಿದ್ದು, ೪ ರಿಂದ ೫ ಅಕ್ಷರಗಳನ್ನಷ್ಟೇ ಒಳಗೊಂಡಿವೆ. ಪ್ರಸ್ತುತ ಅನುವಾದದಲ್ಲಿ ಇಂತಹ ಮೂರ್ನಾಲ್ಕು ಮಂತ್ರಗಳನ್ನು ಒಟ್ಟುಗೂಡಿಸಿ ಒಂದೇ ಸಾಲಾಗಿಸಿ ಅರ್ಥ ನೀಡಿದ್ದೇವೆ. ಉದಾಹರಣೆಗೆ ಅನುವಾಕ ೪.. (ಪುಟ ೧೬೮) ರಲ್ಲಿ ೩೧ ಯಜುಸ್ ಗಳಿವೆ. ಇವುಗಳನ್ನು ೨೪ ಸಾಲುಗಳಲ್ಲಿ ಜೋಡಿಸಲಾಗಿದೆ. ಹೀಗೆ ಜೋಡಿಸುವಾಗ ಪಂ. ದಾಮೋದರ ಸಾತವಲೇಕರ್ ಕ್ರಮ ಅನುಸರಿಸಿದ್ದೇವೆ. ನಮ್ಮ ಇಂಗ್ಲೀಷ್ ಆವೃತ್ತಿಯಲ್ಲಿ ಮಂತ್ರಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಸೂಚಿಸಲಾಗಿದೆ. ಇಲ್ಲಿ ಅದನ್ನು ಸೂಚಿಸಿಲ್ಲವಾದರೂ ಎಲ್ಲ ಮಂತ್ರಗಳನ್ನೂ ಅನುವಾದಿಸಲಾಗಿದೆ.


ಒಳಪುಟಗಳಲ್ಲಿ
i. 1ನೇ ಕಾಂಡದಲ್ಲಿನ ಪ್ರಬಂಧಗಳು ಹಾಗೂ ಅನುಬಂಧಗಳ ಪಟ್ಟಿ / iv
ii. ಆಶೀರ್ವಚನ – ಶ್ರೀ ಶ್ರೀ ರಂಗಪ್ರಿಯ ಸ್ವಾಮೀಜಿ / v
iii. ಮುನ್ನುಡಿ – ಪ್ರೊ।। ಎಸ್. ಕೆ. ರಾಮಚಂದ್ರರಾವ್ / vii
iv. ಯಜ್ಞದ ಮೂಲಕ ಸಾಧನೆ  – ರಾೄoಡ್  ಹಿಕ್ಸ್ / xv
v. ವಾಸ್ತವ ಜೀವನದ ಬಾಗಿನ – ಪ್ರೊ।। ದೊಡ್ಡರಂಗೇಗೌಡ / xviii
vi. ವೇದ ಜ್ಞಾನ ಪಡೆಯುವಲ್ಲಿ ಸಾಮಾನ್ಯರಿಗೆ ದಾರಿದೀವಿಗೆ  – ಹಾದಿಗಲ್ಲು ಲಕ್ಷ್ಮೀನಾರಾಯಣ / xx
vii. ಓದುಗರೊಡನೆ / xxii
viii. ಸಂಕ್ಷಿಪ್ತ ರೂಪಗಳು / xxiv

ಕಾಂಡ-೪: ಮಂತ್ರ, ಅರ್ಥ ಹಾಗೂ ವಿವರಣೆ
ಕಾಂಡ-೪: ಸ್ಥೂಲ ಅವಲೋಕನ / 1
4.1ಸೃಷ್ಟಿ ಸವಿತೃ, ಅಗ್ನಿಯನ್ನು ನಮ್ಮೊಳಗೆ ತರುವುದರೊಂದಿಗೆ ಪ್ರಯಾಣದ ಪ್ರಾರಂಭ / 9
4.2 ಸರ್ವತೋಮುಖ ಪರಿಪೂರ್ಣತೆಗಾಗಿ ದೇವತೆಗಳು / 67
4.3 ಸೂಕ್ಷ್ಮ ಶರೀರದ ಅಭಿವೃದ್ಧಿ – I / 121
4.4 ಸೂಕ್ಷ್ಮ ಶರೀರದ ಅಭಿವೃದ್ಧಿ – II / 167
4.5 ಶಿವ-ರುದ್ರ : ನಮಕ ಸೂಕ್ತ (ಶತರುದ್ರೀಯ ರುದ್ರ ಅಧ್ಯಾಯ) / 211
4.6 ದೈವೀ ಶಕ್ತಿಗಳ ಧಾರಣಕ್ಕಾಗಿ ದೇಹವನ್ನು ಪರಿಪಕ್ವಗೊಳಿಸುವುದು / 245
4.7 ಆನಂದದ ಧಾರೆ (ವಸೋರ್ಧಾರಾ) / 303

SKU: 8179940810 Category: