Krishna Yajur Veda Taittiriya Samhite – Kanda 2 – 3

250.00

ಕೃಷ್ಣ ಯಜುರ್ ವೇದ ತೈತ್ತಿರೀಯ ಸಂಹಿತೆಯ (ತೈ. ಸಂ.) ಎರಡನೆ ಹಾಗೂ ಮೂರನೆ ಕಾಂಡದಲ್ಲಿನ ಮಂತ್ರಗಳನ್ನು ಈ ಪುಸ್ತಕ ಹೊಂದಿದೆ. ತೈ.ಸಂ. ಯಲ್ಲಿ ಮಂತ್ರಗಳಲ್ಲದೆ ಬಾಹ್ಯ ಯಜ್ನಾಚರಣೆಯ ವಿಧಿಗಳನ್ನು ವಿವರಿಸುವ ಬ್ರಾಹ್ಮಣ ಭಾಗಗಳಿವೆ. ಈ ಬ್ರಾಹ್ಮಣ ಭಾಗಗಳನ್ನು ಪ್ರಸ್ತುತ ಗ್ರಂಥದಲ್ಲಿ ಸೇರಿಸಿಲ್ಲ. ಈಗಾಗಲೇ ನಮ್ಮ ಸಂಸ್ಥೆಯ (SAKSHI)ಇಂಗ್ಲಿಷ್ ನಲ್ಲಿ ಪ್ರಕಟಿಸಿದ ನಾಲ್ಕು ಸಂಪುಟಗಳಲ್ಲಿ (Krishna Yajur Veda Taittiriya Samhita) ಈ ಭಾಗಗಳ ಪಠ৯ ಅನುವಾದ ಇದೆ.

ಈ ಗ್ರಂಥದಲ್ಲಿ ಹಲವು ವೈಶಿಷ್ಟ್ಯಗಳಿವೆ. ಮೊದಲನೆಯದಾಗಿ, ಯಜುರ್ ವೇದದ ಕಾಲ ಸಾವಿರ ವರ್ಷಗಳಷ್ಟು ಹಿಂದಿನದಾದರೂ ಈವರೆಗೂ ಅದರಲ್ಲಿನ ಮಂತ್ರಭಾಗ ಹಾಗೂ ಬ್ರಾಹ್ಮಣ ಭಾಗಗಳನ್ನು ಯಾರೊಬ್ಬರು ಪ್ರತ್ಯೇಕಿಸಿಲ್ಲ. ಇದೇನು ಮಹಾ ಎಂದು ಯಾರಾದರೂ ಪ್ರಶ್ನೆ ಕೇಳಬಹುದು. ಬ್ರಾಹ್ಮಣ ಭಾಗವನ್ನು ಪ್ರತ್ಯೇಕಿಸಿದರೆ, ಉಳಿಯುವುದು ಮಂತ್ರಗಳು ಮಾತ್ರ ಎಂದು ಹೇಳಬಹುದು. ಆದರೆ ಇದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಯಜುಸ್ ಮಂತ್ರಗಳೂ ಕಾವ್ಯಮಯ ಗದ್ಯ ಭಾಗಗಳಾಗಿರುವುದರಿಂದ ಅವುಗಳನ್ನು ಗದ್ಯದಲ್ಲೇ ಇರುವ ಬ್ರಾಹ್ಮಣ ಭಾಗಗಳಿಂದ ಪ್ರತ್ಯೇಕಿಸುವುದು ಸಂಶೋಧನಾತ್ಮಕ ಕೆಲಸ ಆಗಿದೆ. ಈ ಕಾರಣಕ್ಕಾಗಿಯೇ ಈ ಬಗೆಯ ಕೆಲಸ ನಾಲ್ಕು ಸಾವಿರ ವರ್ಷಗಳಿಂದಲೂ ಹಾಗೇ ಉಳಿದತ್ತು. ಇದೀಗ ಈ ಗ್ರಂಥದ ಮೂಲಕ ಈ ಕಾರ್ಯವನ್ನು ಪೂರೈಸುತ್ತಿದ್ದೇವೆ. ಪುರಾತನ ಸಂಸ್ಕೃತ ಗ್ರಂಥ ‘ಆಪಸ್ತಂಭ ಶ್ರೌತ ಸೂತ್ರಗಳು ‘ ಹಾಗೂ ಇತ್ತೀಚಿಗೆ ಶ್ರೀ ದೈವರಾತರು ಬರೆದ ಒಂದು ಪ್ರಬಂಧದಲ್ಲಿ ಈ ಕಾರ್ಯದ ವ್ಯಾಪ್ತಿಯ ಬಗ್ಗೆ ಒಂದು ಮೇಲ್ ನೋಟ ಕಾಣಸಿಗುತ್ತದೆ.

ಈ ತೈತ್ತಿರೀಯ ಸಂಹಿತೆಯ ಇನ್ನೊಂದು ವೈಶಿಷ್ಟ್ಯ ಏನೆಂದರೆ, ಇದರಲ್ಲಿ ಹಲವು ಮಂತ್ರಗಳು ಪುನರಾವರ್ತನೆ ಆಗಿವೆ. ಈ ವಿಶೇಷತೆ ಅನಿರೀಕ್ಷಿತ ಏನಲ್ಲ, ಯಾಕೆಂದರೆ ವಿವಿಧ ಬಾಹ್ಯ ಯಜ್ನಾಚರಣೆ – ಅಂತರ್ ಯಜ್ಞಗಳಲ್ಲಿ ಅದೇ ಮಂತ್ರಗಳ ಬಳಕೆ ಮಾಡುವರು. ಈ ರೀತಿಯ ಪುನರಾವರ್ತನೆಗಳನ್ನು ಗುರುತಿಸಿ, ಆಯಾ ಮಂತ್ರಗಳಲ್ಲಿ ಸೂಚಿಸಿದ್ದೇವೆ.

ಮೂರನೆಯ ವಿಶೇಷತೆ, ಋಗ್ವೇದದಲ್ಲಿನ ಅನೇಕ ಮಂತ್ರಗಳು ಯಜುರ್ ವೇದದಲ್ಲಿ ಪುನರಾವರ್ತನೆಯಾಗಿದ್ದು, ಅಂಥವುಗಳನ್ನು ಗುರುತಿಸಿ, ಮಂಡಲ, ಸೂಕ್ತ, ಮಂತ್ರ ಸಂಖ್ಯೆಗಳೊಂದಿಗೆ ಅಲ್ಲಲ್ಲಿ ಸೂಚಿಸಲಾಗಿದೆ. ಕೆಲವೆಡೆ, ಮಂತ್ರ ಅದೇ ಆಗಿದ್ದು, ಒಂದೆರಡು ಪದಗಳು ಋಗ್ವೇದ ಮಂತ್ರಗಳಿಗಿಂತ ಭಿನ್ನವಾಗಿರುತ್ತವೆ. ಇಂತಹ ಪಾಠಾಂತರಗಳನ್ನು ಮಂತ್ರ ಸಂಖ್ಯೆಯ ಮುಂದೆ ‘ಪಾ’ ಎಂದು ಸೂಚಿಸಿದ್ದೇವೆ.

ಕೃಷ್ಣ ಯಜುರ್ ವೇದ ಶಾಖೆ ಹೊಂದಿರುವ ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಬಹುಸಂಖ್ಯೆಯಲ್ಲಿರುವರು. ಉತ್ತರ ಭಾರತದಲ್ಲಿ ಯಜುರ್ ವೇದ ಎಂದರೆ ‘ಶುಕ್ಲ ಯಜುರ್ ವೇದ’ವೇ. ಇವೆಡರಲ್ಲಿ ಕೃಷ್ಣ ಯಜುರ್ ವೇದ ಪುರಾತನವಾದದ್ದು. ಆದರೆ ಸ್ವಾಮಿ ದಯಾನಂದ ಸರಸ್ವತಿ ಅವರ ಪ್ರಭಾವದಿಂದಾಗಿ ಕೃಷ್ಣ ಯಜುರ್ ವೇದ ಸಂಪೂರ್ಣ ನೇಪಥ್ಯಕ್ಕೆ ಸರಿಯಿತು. ಶುಕ್ಲ ಹಾಗೂ ಕೃಷ್ಣ ಯಜುರ್ ವೇದಗಳಲ್ಲಿ ಶೇಕಡಾ ೫೦ಕ್ಕೂ ಹೆಚ್ಚಿನ ಭಾಗದ ಮಂತ್ರಗಳು ಒಂದೇ ಆಗಿವೆ.

ತೈ. ಸಂ. ಎಲ್ಲ ಮಂತ್ರಗಳನ್ನು ನಮ್ಮ ಸೂಕ್ಷ್ಮ ಶರೀರಗಳಲ್ಲಿ ಜರಗುವ ಅಂತರ್ ಯಜ್ಞದ ಪರಿಧಿಯಲ್ಲಿ ಪರಿಗಣಿಸಲಾಗಿದೆ. ಪ್ರಾಣಿ ಬಲಿಯ ಪ್ರಶ್ನೆ ಇಲ್ಲಿ ಉದ್ಬವಿಸುವುದೇ ಇಲ್ಲ. ಪ್ರಸ್ತುತ ವೇದದಲ್ಲಿ ಉಲ್ಲೇಖಿತ ಅಗ್ನಿಚಯನ ಅಥವಾ ಸೋಮ ಯಜ್ಞ ಮುಂತಾದ ಬಾಹ್ಯ ಯಜ್ನಾಚರಣೆಯಲ್ಲಿ ಬಳಸುವ ಮಂತ್ರಗಳಿವೆ. ಇವುಗಳೂ ಸಹ ಅಂತರ್ ಯಜ್ಞದ ಸಾಂಕೇತಿಕಗಳಾಗಿವೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ.

ಯಜುರ್ ವೇದ ಮಂತ್ರಗಳು ಬಾಹ್ಯ ಯಜ್ನಾಚರಣೆಗಾಗಿ ಇರುವವು ಎಂದು ಭಾವಿಸಿದವರು ಅಪಾರ ಇರುವಾಗ, ಈ ಎಲ್ಲ ಮಂತ್ರಗಳ ಗೂಢಾರ್ಥ ಅಥವಾ ಆಧ್ಯಾತ್ಮಿಕ ಅರ್ಥ ಬರೆಯುವುದು ನನಗೆ ಒಂದು ಸಾಹಸದ ಕೆಲಸವೇ ಆಯಿತು.


ಒಳಪುಟಗಳಲ್ಲಿ
i. ಆಶೀರ್ವಚನ – ಶ್ರೀ ಶ್ರೀ ರಂಗಪ್ರಿಯ ಸ್ವಾಮೀಜಿ / iv
ii. ಸ್ವಸ್ತಿವಾಚನ – ಶ್ರೀ ಸಿದ್ಧೇಶ್ವರ ಸ್ವಾಮೀಜಿ / viii
iii. ಮುನ್ನುಡಿ – ಪ್ರೊ ।। ಎಸ್. ಕೆ. ರಾಮಚಂದ್ರರಾವ್ / x
iv. ಓದುಗರೊಡನೆ – ಡಾ।। ಆರ್. ಎಲ್. ಕಶ್ಯಪ / xxvi
v. ಅನುವಾದಕನ ಮಾತು / xxviii
vi. ಸಂಕ್ಷಿಪ್ತ ರೂಪಗಳು / xxx

ಭಾಗ I :
ಎರಡನೆಯ ಕಾಂಡ
ಮಂತ್ರ, ಅರ್ಥ ಹಾಗೂ ವಿವರಣೆ / 1

ಭಾಗ II :
ಮೂರನೆ ಕಾಂಡ
ಮಂತ್ರ, ಅರ್ಥ ಹಾಗೂ ವಿವರಣೆ / 67

ಭಾಗ III : ಅನುಬಂಧಗಳು
1. ಪರಾಮರ್ಶನ ಗ್ರಂಥಗಳು / 167
2. ವೈದಿಕ ಶಬ್ದಕೋಶ / 174

SKU: 8179940144 Category: