Krishna Yajur Veda Taittiriya Samhite – Kanda 1

250.00

ಕೃಷ್ಣ ಯಜುರ್ ವೇದ ತೈತ್ತಿರೀಯ ಸಂಹಿತೆಯ ಮಾನವನ ಅಂತಃಸತ್ವವನ್ನು ಅಭಿವೃದ್ಧಿಗೊಳಿಸುವ ಸತ್ವ ಹಾಗೂ ವಿಷಯ ಹೊಂದಿದೆ. ಯಜುರ್ ವೇದವು ಯಜ್ಞ ಕೈಪಿಡಿ ಅಲ್ಲ. ಬಾಹ್ಯ – ಯಜ್ಞದ ವಿಧಿ- ವಿಧಾನಗಳೆಲ್ಲ ಸಾಂಕೇತಿಕ. ಅಂತರ್ – ಯಜ್ಞದ ಪ್ರಕ್ರಿಯೆಗಳನ್ನು ಅವು ಸ್ಥೂಲವಾಗಿ ಸೂಚಿಸುತ್ತದೆ. ಮಾನವ ಚೇತನವನ್ನು ಆರೋಹಣಗೊಳಿಸುವ ಮಾರ್ಗದರ್ಶೀ ಸೂತ್ರಗಳು ಅದರಲ್ಲಿದೆ. ಬಾಹ್ಯ ಇಂದ್ರಿಯಗಳಿಗೆ ಅಸಾಧ್ಯವಾದ, ಉನ್ನತ ಅನುಭವಗಳನ್ನು ತಂದುಕೊಡುವ ಸಾಮರ್ಥ್ಯ ಯಜುರ್ ವೇದ ಮಂತ್ರಗಳಿಗೆ ಇದೆ. ಭೌತಿಕ ಶರೀರವು ಶುದ್ಧೀಕರಣ ಹೊಂದಬೇಕು, ಸುದೃಢಗೊಳ್ಳಬೇಕು; ಭೌತ ಹಾಗೂ ಸೂಕ್ಷ್ಮ ಶರೀರಗಳಲ್ಲಿ ಪ್ರಾಣ-ಶಕ್ತಿ ಭರಣಗೊಳ್ಳಬೇಕು; ವೈಶ್ವಿಕ ಶಕ್ತಿಗಳೊಂದಿಗೆ ಸಹಯೋಗ ಸಾಧಿಸುವಂತಾಗಬೇಕು; ದೇವತೆಗಳ ಲೋಕ- ನಿರ್ಮಾಣದ ಪಾತ್ರ ಅರಿವಿಗೆ ಬರಬೇಕು, ಇದುವೇ ಅಂತರ್ – ಯಜ್ಞದ ಅಪೇಕ್ಷೆ ಆಗಿದೆ. ಇವುಗಳನ್ನೆಲ್ಲ ಸಾಧಿಸುವ ಸಾಧನಾ ಮಾರ್ಗವನ್ನು ಯಜುರ್ವೇದವು ನಿರೂಪಿಸುತ್ತದೆ.

ಈ ದೃಷ್ಟಿಕೋನದ ಹಿನ್ನಲೆಯಿಂದ ಡಾ।। ಆರ್. ಎಲ್. ಕಶ್ಯಪ್ ಅವರು ಕೃಷ್ಣ ಯಜುರ್ ವೇದದ ಏಳೂ ಕಾಂಡಗಳಲ್ಲಿರುವ ಎಲ್ಲ ಮಂತ್ರ ಹಾಗೂ ಬ್ರಾಹ್ಮಣಗಳಿಗೆ ಇಂಗ್ಲಿಷ್ ನಲ್ಲಿ ಅರ್ಥ ಬರೆದಿದ್ದಾರೆ (ಮೂರು ಸಂಪುಟಗಳಲ್ಲಿ ಪ್ರಕಟವಾಗಿದೆ). ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ಈ ಕೃತಿ ಒಂದು ಮಹತ್ವದ ಮೈಲಿಗಲ್ಲು; ಮಾನವ ವಿಕಾಸದ ದೃಷ್ಟಿಯಿಂದ ಒಂದು ಕ್ಷಿಪ್ರ ತಿರುವು ನೀಡುವ ದೃಷ್ಟಿಯಿಂದ ಮಹಾನ್ ಕಾರ್ಯ ಆಗಿದೆ. ಈ ಕೃತಿಯನ್ನು ಹಲವರು ಓದಿ, ಅರ್ಥಮಾಡಿಕೊಂಡು, ಮೆಚ್ಚಿಕೊಂಡಿದ್ದಾರೆ. ಈ ನಾಡಿನ ಅಗ್ರಗಣ್ಯ ವಿದ್ವಾಂಸರಾದ ಡಾ।। ಸಾಲಿಗ್ರಾಮ ಕೃಷ್ಣ ರಾಮಚಂದ್ರರಾವ್ ಅವರು ಈ ಕೃತಿಗೆ ಬರೆದ ಸುದೀರ್ಘ ಮುನ್ನುಡಿಯೇ ಈ ಮಾತಿಗೆ ಸಾಕ್ಷಿಯಾಗಿದೆ. ಡಾ।। ಕಶ್ಯಪ್ ಅವರ ವೇದ ಸೇವೆಯನ್ನು ಬೆಳಕಿಗೆ ತರುವ ಇನ್ನೂ ಕೆಲವು ವಿದ್ವಾಂಸರ ಲೇಖನಗಳನ್ನೊಳಗೊಂಡ ‘Exploring the Mystery of KYTS’ ಕಿರುಪುಸ್ತಕ ಓದಬಹುದಾಗಿದೆ.


ಒಳಪುಟಗಳಲ್ಲಿ
i. ಕೃತಜ್ಞತಾ ಸಮರ್ಪಣೆ / iv
ii. ಆಶೀರ್ವಚನ – ಶ್ರೀ ಶ್ರೀ ರಂಗಪ್ರಿಯ ಸ್ವಾಮೀಜಿ / vii
iii. ಸ್ವಸ್ತಿವಾಚನ – ಶ್ರೀ ಸಿದ್ದೇಶ್ವರ ಸ್ವಾಮೀಜಿ / xi
iv. ಮುನ್ನುಡಿ – ಪ್ರೊ।। ಎಸ್. ಕೆ. ರಾಮಚಂದ್ರರಾವ್ / xiii
v. ಗ್ರಂಥದ ಮೇಲ್ನೋಟ ಮತ್ತು ಕೊಡುಗೆಗಳು / xxix
vi. ಕೆಲವು ಪ್ರಪಾಠಕಗಳ ಬಗ್ಗೆ ಒಂದು ಇಣುಕು ನೋಟ / xxxii
vii. ಸಂಕ್ಷಿಪ್ತ ರೂಪಗಳ / xxxviii
viii. ಓದುಗರೊಡನೆ / xxxix

ಭಾಗ I : ಪರಿಚಯಾತ್ಮಕ ಲೇಖನಗಳು
1. ತೈತ್ತಿರೀಯ ಸಂಹಿತೆ : ಪಕ್ಷಿನೋಟ / 1
2. ಕೃಷ್ಣ ಯಜುರ್ವೇದದ ಶಾಖೆಗಳು / 2
3. ಯಜುರ್ ವೇದದಲ್ಲಿನ ಪ್ರಮುಖ ವಿಚಾರಗಳು / 4
4. ದೇವತೆಗಳು ಮತ್ತು ಅವರ ಮನಃಪ್ರಾಣಾದಿ ಶಕ್ತಿಗಳು / 11
5. ಬಹು-ಪರಿಚಯ ಮಂತ್ರಗಳು / 12
6. ಯಜ್ಞದ ಅರ್ಥ / 15
7. ಉಪನಿಷತ್ ಗಳಲ್ಲಿ ಅಂತರ್ ಯಜ್ಞ / 20
8. ಸಾಂಕೇತಿಕತೆ / 24
9. ಆಂತರಿಕ ಮತ್ತು ಬಾಹ್ಯ ಯಜ್ಞ : ಸಂಗತ / 27
10. ಪ್ರಾಣಿಬಲಿ / 31
11. ದಂತಕಥೆಗಳು ಮತ್ತು ಅವುಗಳ ಗೂಢ ಅರ್ಥ / 34
12. ತೈತ್ತಿರೀಯ ಬ್ರಾಹ್ಮಣ ಮತ್ತು ಆರಣ್ಯಕ / 42
13. ಸೃಷ್ಟಿ / 44
14. ಪುರಾತನ ವೈದಿಕ ಕ್ರಿಯಾವಿಧಿಗಳು, ಆಧುನಿಕ ವೈದಿಕ ಹೋಮ ಮತ್ತು ಅಗ್ನಿಚಯನ ಕ್ರಿಯಾವಿಧಿ / 45
15. ಬ್ರಾಹ್ಮಣ – ಎಲ್ಲಾ ಕಾಂಡಗಳಲ್ಲಿನ ಅನುವಾಕಗಳು : ಪಕ್ಷಿನೋಟ / 49
16. ತೈತ್ತಿರೀಯ ಸಂಹಿತೆಯಲ್ಲಿರುವ ಮಂತ್ರಗಳ ಮತ್ತು ಇತರ ಸಂಬಂಧಿತ ಸಂಖ್ಯೆಗಳ ಪಟ್ಟಿ / 58
17. ಅಂತಃಶಕ್ತಿಯ ವರ್ಧನೆ / 59

ಭಾಗ II : ಮಂತ್ರ, ಅರ್ಥ ಹಾಗೂ ವಿವರಣೆ
ಅ) ಮಂತ್ರ ಹಾಗೂ ಅರ್ಥವನ್ನು ಓದುವ ಬಗೆ / 67
ಆ) ಕಾಂಡ-೧ : ಮೇಲ್ನೋಟ / 69
1.1 ಒಂದು ಸುಲಭ ಅಂತರ್ ಯಜ್ಞ / 71
1.2 ಅಂತರ್ ಸೋಮಯಾಗ I : ದೈವೀ ಶಕ್ತಿಗಳ ಆವಾಹನೆ (ಅಗ್ನಿಷ್ಟೋಮ) / 109
1.3 ಅಂತರ್ ಸೋಮಯಾಗ II : ಜೀವ ಹಾಗೂ ಅಂಗಾಂಗಗಳ ಅರ್ಪಣೆ / 145
1.4 ಅಂತರ್ ಸೋಮಯಾಗ III : ಸೋಮ ವಿತರಣೆ ಹಾಗೂ ಮಂಗಳಾಚರಣೆ / 179
1.5 ಅಗ್ನಿಯನ್ನು ಜಾಗೃತಗೊಳಿಸುವುದು / 221
1.6 ಅಂತರ್ ಯಜ್ಞದ ವಿವರಗಳು / 263
1.7 ಬ್ರಾಹ್ಮಣ ಹಾಗೂ ವಾಜಪೇಯ ಯಜ್ಞ / 303
1.8 ರಾಜಸೂಯ / 340

ಭಾಗ III : ಅನುಬಂಧಗಳು
1. ದೋಷರಹಿತವಾಗಿ ಹಾಗೂ ಅರ್ಥದ ಅನುಸಂಧಾನ ಸಹಿತ ಪಠನ / 380
2. ವೇದ ಅಧ್ಯಯನಕ್ಕೆ ಆವಶ್ಯಕವಾಗಿರುವ ಅಂಶಗಳು : ಶಿಕ್ಷಾ, ಕಲ್ಪ ಇತ್ಯಾದಿ / 381
3. ಋಗ್ವೇದ ಹಾಗೂ ತೈತ್ತಿರೀಯ ಸಂಹಿತೆಗಳಲ್ಲಿರುವ ಸುಸಂಗತತೆ / 383
4. ಪರಾಮರ್ಶನ ಗ್ರಂಥಗಳು / 393
5. ಶಬ್ದಕೋಶ / 400

SKU: 8179940616 Category: