ದೇವ ಮಾನವರು

25.00

‘ದೇವಮಾನವರು’ ಗ್ರಂಥ ಸ್ಫೂರ್ತಿದಾಯಕ ಗೌರವಾಭಿವಂದನೆಗಳ ಗುಚ್ಛ. ವೇದ ದ್ರಷ್ಟಾರರಿಂದ, ಗಣಪತಿ ಮುನಿ, ರಮಣ ಮಹರ್ಷಿ ಮತ್ತು ಶ್ರೀ ಅರೋಬಿಂದೊವರೆಗಿನ, ಆಧ್ಯಾತ್ಮಿಕ ವಿಭೂತಿಗಳ ಹರಿಗಡಿಯದ ಪರಂಪರೆಯನ್ನು ಮತ್ತು ಅದರೊಟ್ಟಿಗೆ, ಮುಸುಕುತ್ತಿರುವ ಮಬ್ಬಿನಲ್ಲಿ ಕಳೆದೇ ಹೋಯಿತೋ ಎಂಬಂತೆ ಅನಿಸಿದರೂ ಅದಮ್ಯ ಭಾರತೀಯ ಅಂತಃಸತ್ತ್ವವು ಮತ್ತೆ ಮತ್ತೆ ಸೂರ್ಯನಂತೆ ಮೇಲೆದ್ದು, ಸನಾತನ ಧರ್ಮದ ಪ್ರಗತಿಯಾತ್ರೆಯನ್ನು ಮುಂದುವರಿಸಿಕೊಂಡು ಹೋಗುತ್ತ ಬಂದಿರುವುದನ್ನು, ಶಾಸ್ತ್ರಿಗಳು ಸೂಚಿಸಬಯಸಿದಂತಿದೆ.

ಕಪಾಲಿಯವರು ವೇದ, ತಂತ್ರ, ಉಪನಿಷತ್ತು, ಶ್ರೀಮಾತಾರವಿಂದರು, ರಮಣ ಮಹರ್ಷಿ ಮತ್ತು ಗಣಪತಿಮುನಿಗಳ ಕೃತಿಯೊಂದಿಗೆ ಇನ್ನೂ ಹಲವು ಗ್ರಂಥಗಳನ್ನುಬರೆದಿದ್ದಾರೆ. ಅದರಲ್ಲಿ ಪ್ರಸ್ತುತ Men of God (1960) ಶ್ರೀಕೃಷ್ಣಚೈತನ್ಯ, ಗುರುನಾನಕ್ ಮತ್ತು ಗುರುಗೋವಿಂದ ಸಿಂಹರ ಜೀವನದ ಚಿತ್ರಣದಿಂದ ಕೂಡಿದ ಸಂಕಲನ. ಸಾಧು ಜೀವನ ಚರಿತ್ರೆಗೆ ಇದು ಕಿರಿದಾದರೂ ಒಳನೋಟಗಳಿರುವ ಕಾರಣ ಮಹತ್ವದ ಸೇರ್ಪಡೆ. ಶ್ರೀ ಟಿ. ವಿ. ಕಪಾಲಿಶಾಸ್ತ್ರಿಗಳು ಪ್ರತ್ಯೇಕ ಲೇಖನದಲ್ಲಿ ಮಧುಸೂಧನ ಸರಸ್ವತಿಯವರ ಕುರಿತು ಬರೆದಿದ್ದಾರೆ. ಮಧುಸೂಧನರು ಕೂಡ ಈ ಪರಂಪರೆಗೇ ಸೇರುವವರು. ಆದ್ದರಿಂದ ಪ್ರಸ್ತುತ ಸಂಗ್ರಹದಲ್ಲಿ ಅವರ ಕುರಿತ ಲೇಖನವೂ ಸೇರಿದೆ.


ಅಧ್ಯಾಯ ಸೂಚಿ

ಪ್ರಸ್ತಾವನೆ / 5

1. ಶ್ರೀಕೃಷ್ಣಚೈತನ್ಯ / 9

2. ಗುರುನಾನಕ / 25

3. ಗುರು ಗೋವಿಂದ ಸಿಂಹ / 41

4. ಮಧುಸೂದನ ಸರಸ್ವತಿ/ 57