ಆಯುರ್ವೇದ ಪರಿಚಯ

25.00

ಆಯುರ್ವೇದ ಕೇವಲ ಒಂದು ಚಿಕಿತ್ಸಾ ಪದ್ಧತಿ ಅಲ್ಲ. ಇದೊಂದು ಸಮಗ್ರ ಜೀವನ ಪದ್ಧತಿ. ಭಾರತೀಯರು ಜಗತ್ತಿಗೆ ನೀಡಿದ ಮಹತ್ತರ ಕೊಡುಗೆಗಳಲ್ಲಿ ಆಯುರ್ವೇದವು ಒಂದು. ಆರೋಗ್ಯದ ಸಹಿತ ದೀರ್ಘಾಯುಷ್ಯವೇ ಆಯುರ್ವೇದದ ಗುರಿ. ದೈವೀ ಪಥದಲ್ಲಿ ಮುನ್ನಡೆಯಬೇಕಾದ ಮಾನವ ತನ್ನ ಶರೀರವನ್ನು ಸುದೃಢವಾಗಿ ಇರಿಸಿಕೊಳ್ಳಬೇಕಾದ್ದು ಆದ್ಯ ಕಾರ್ಯವಾಗಿದೆ. ಶರೀರವು ಆರೋಗ್ಯಕರ ಆಗಿದ್ದರೆ ಮನಸ್ಸು ಶಾಂತವಾಗಿಯೂ ಸಂತೋಷಕರವಾಗಿಯೂ ಇರಬಲ್ಲದು. ಈ ಶರೀರ, ಮನಸ್ಸುಗಳ ಸಮಗ್ರೀಕರಣ ಸೂತ್ರವನ್ನು ಆಯುರ್ವೇದ ಋಷಿಗಳು ಮನುಕುಲಕ್ಕೆ ಕೊಡಮಾಡಿದ್ದಾರೆ.

ತಲೆನೋವು ನಿವಾರಣೆ, ಬೊಜ್ಜು ನಿವಾರಣೆ, ನಿದ್ರಾಹೀನತೆ, ಶಕ್ತಿವರ್ಧನೆ ಇತ್ಯಾದಿ ಹೆಸರಿನಲ್ಲಿ ಹಲವು ಆಯುರ್ವೇದೀಯ ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ. ಇವೆಲ್ಲವೂ ಆಯುರ್ವೇದ ಸಿದ್ಧಾಂತದೆಡೆ ಓದುಗರು ಗಮನ ಸೆಳೆಯಲು ಗಮನ ಹರಿಸಿಲ್ಲ. ಹೀಗಾಗಿ ಆಯುರ್ವೇದದ ಘನ ಸಿದ್ಧಾಂತಗಳ ಕಿರುಪರಿಚಯ ನೀಡುವಂಥ ಅಗತ್ಯವನ್ನು ಈ ಪುಸ್ತಕ ಪೂರೈಸಬಲ್ಲದ್ದಾಗಿದೆ.


ಅಧ್ಯಾಯ ಸೂಚಿ

ಲೇಖಕರ ಮಾತು / iv

ಮುನ್ನುಡಿ / v

ಓದುಗರೊಡನೆ / vii

1. ಆಯುರ್ವೇದದ ಜಾನಪದ ಮೂಲ / 1

2.ಆಯುರ್ವೇದ ಎಂದರೇನು? / 5

3. ಶರೀರ ಮತ್ತು ರೋಗ? / 8

4. ತ್ರಿದೋಷ ಎಂದರೇನು? / 12

5. ಆಯುರ್ವೇದದ ವಿಭಾಗಗಳು / 16

6. ಪಶುವೈದ್ಯ, ವೃಕ್ಷಾಯುರ್ವೇದ / 20

7. ಆಯುರ್ವೇದದ ಔಷಧಿಗಳು / 23

8. ರೋಗಿಗಳ ಪರೀಕ್ಷೆ / 27

9. ಆರೋಗ್ಯದ ಊರುಗೋಲುಗಳು / 30

10. ಚಿಕಿತ್ಸೆಯ ನಾಲ್ಕು ಪಾದಗಳು / 34