Atharva Vedada Antaranga

50.00

ಅಥರ್ವ ವೇದವು ವೇದಕಾಲದ ಜೀವನದ ಮತ್ತು ಸಮಗ್ರ ಮೌಲ್ಯಗಳ ಒಂದು ಮಹೋನ್ನತ ಚಿತ್ರಣವನ್ನು ನೀಡುತ್ತದೆ. ಎಲ್ಲ ಚಟುವಟಿಕೆಗಳಲ್ಲೂ – ಅವುಗಳ ಪ್ರಾಪಂಚಿಕ ಅಥವಾ ಆಧ್ಯಾತ್ಮಿಕ ಎಂಬ ಹಣೆಪಟ್ಟಿ ಅಂಟಿಸದೇ – ಪರಮ ಚೈತನ್ಯವನ್ನು ಆಹ್ವಾನಿಸುವ ಕಲೆಯನ್ನು ಅದು ವಿವರಿಸುತ್ತದೆ. ಶಿಕ್ಷಣ, ಚಿಕಿತ್ಸೆಯ ಕಲೆ, ರಾಜ್ಯಾಡಳಿತ ಇತ್ಯಾದಿ ವಿಷಯಗಳನ್ನು ಕುರಿತಂತೆ ವೇದಕಾಲದ ದೃಷ್ಟಿಕೋನಗಳು ಮತ್ತು ಸಾಧನೆಗಳ ಕುರಿತು ಈ ಪುಸ್ತಕವು ಬೆಳಕನ್ನು ಚೆಲ್ಲುತ್ತದೆ.

ಈ ಪುಸ್ತಕವು ವಿವಿಧ ವರ್ಗದ ಓದುಗರನ್ನು ಉದ್ದೇಶಿಸುತ್ತದೆ. ಮೊದಲನೆಯ ವರ್ಗದವರು ಸಂಸ್ಕೃತ ಭಾಷೆಯ ಪರಿಚಯವಿರದ ಅಥವಾ ಪಾಂಡಿತ್ಯವಿಲ್ಲದಂತಹ ವೇದಪ್ರಿಯರು; ಎಂದರೆ ಕಳೆದ ಸಾವಿರಾರು ವರ್ಷಗಳಲ್ಲಿ ಸಾಹಿತ್ಯ, ವ್ಯಾಕರಣ, ವಾಸ್ತುಶಿಲ್ಪ, ಕಲೆಗಳು, ವೈದ್ಯಕೀಯ, ವಿಜ್ಞಾನ ಮತ್ತು ಗಣಿತಶಾಸ್ತ್ರ ಇತ್ಯಾದಿ ವಿಭಿನ್ನ ಕ್ಷೇತ್ರಗಳಲ್ಲಿ ಕಂಡುಬರುವ ಅಪಾರವಾದ ಸೃಜನಶೀಲತೆಯು ಶೂನ್ಯದಿಂದ ಹೊರಹೊಮ್ಮಿರದು. ಅವುಗಳ ಬೇರುಗಳು ವೇದದಲ್ಲಿಯೇ ಇರಬೇಕೆಂಬ ಅಸ್ಪಷ್ಟವಾದ ಅರಿವುಳ್ಳವರು. ವೇದಮಂತ್ರಗಳ ಅನೇಕ ಉದ್ದರಣಗಳಿಂದ ಅವುಗಳ ಭಾಷಂತರಗಳಲ್ಲಿ ಇಂಬುಗೊಡಲ್ಪಟ್ಟ ಸಾಧನೆಗಳ ಮುಖ್ಯಾಂಶಗಳನ್ನು ಈ ಪುಸ್ತಕವು ಪ್ರಸ್ತುತ ಪಡಿಸುತ್ತದೆ.

ಎರಡನೆಯ ವರ್ಗದವರು ನವಯುಗದ ಜನಗಳೆಂದು ಕರೆಯಲ್ಪಡುವ ಸಹ -ಸೃಷ್ಟಿಯ (Co-creation) ವಿಚಾರವನ್ನು ಪರಿಶೋಧಿಸುವುದರಲ್ಲಿ ಅತ್ಯಂತ ಆಸಕ್ತಿಯುಳ್ಳವರು; ಎಂದರೆ ಎಲ್ಲ ಚಟುವಟಿಕೆಗಳೂ ನಿಜವಾಗಿಯೂ ಅಗ್ನಿ ,ಇಂದ್ರ ಮುಂತಾದ ಹೆಸರುಗಳುಳ್ಳ ವಿಶ್ವಶಕ್ತಿಗಳು ಮತ್ತು ಮಾನವ ಜೀವಿಗಳು ಒಟ್ಟುಗೂಡಿ ಮಾಡುವ ಸಂಯುಕ್ತ ಪ್ರಯತ್ನಗಳು.

ಮೂರನೇ ವರ್ಗದಲ್ಲಿ, ಆರ್ಥಿಕವಾಗಿ ದುಬಾರಿಯಾದ ಬಾಹ್ಯ ಯಜ್ಞ- ಯಾಗಗಳನ್ನು ವಿವಾಹ, ಉಪನಯನ, ಗೃಹ ಯೋಜನೆ (ವಾಸ್ತು), ಗೃಹಪ್ರವೇಶ ಇತ್ಯಾದಿ ಆಚರಿಸುವವರಿದ್ದಾರೆ. ಇವರಲ್ಲಿ ಕೆಲವರಿಗೆ ವೆದದಲ್ಲಿನ ಮಂತ್ರಗಳೇ ಈ ಆಚರಣೆಗಳಲ್ಲಿರುವ ಸಾರ ಎಂಬ ಅಸ್ಪಷ್ಟವಾದ ಅರಿವಿದೆ. ಅಂತಹ ಜನರಿಗೆ ಈ ಪುಸ್ತಕದ ಅನೇಕ ಅಧ್ಯಾಯಗಳು – ಅಧ್ಯಾಯ ೪ ರಲ್ಲಿ ಉಪನಯನ, ಅಧ್ಯಾಯ ೧೧ ರಲ್ಲಿ ವಿವಾಹ. ಅಧ್ಯಾಯ ೧೩ ರಲ್ಲಿ ವಾಸ್ತು ಮತ್ತು ಗೃಹಪ್ರವೇಶ ಇತ್ಯಾದಿ – ಪ್ರಸಿದ್ದವಾದ ಆಚರಣೆಗಳಲ್ಲಿ ಬಳಸುವ ಮಂತ್ರಗಲ್ಲಿ ವಿಹರಿಸಲು ಮಾರ್ಗದರ್ಶಕವಾಗಿವೆ.

ನಾಲ್ಕನೇಯ ವರ್ಗದವರು ತಮ್ಮನ್ನು ತಾವು ಆಧುನಿಕರು ಮತ್ತು ಪ್ರಯೋಜನ ಸಿದ್ದಾಂತಿಗಳೆಂದು (utilitarian) ಕರೆದುಕೊಳ್ಳುವ, ಪುರಾತನ ಸಂಸ್ಕೃತಿಯ ಬಗ್ಗೆ ಯಾವುದೇ ಆಸ್ಥೆಯಿಲ್ಲದಂತಹ ಓದುಗರು; ಆದರೆ ಅವರಿಗೆ ಶಿಕ್ಷಣ ಮತ್ತು ವೈದ್ಯಕೀಯ ವಿಷಯಗಳ ಬಗ್ಗೆ ಆಸಕ್ತಿಯಿದೆ. ಆಧುನಿಕ ವೈದ್ಯಕೀಯ ಅಥವಾ ತಾಂತ್ರಿಕ ಶಿಕ್ಷಣವು ಬಹಳಷ್ಟು ಜನರಿಗೆ ಆರ್ಥಿಕವಾಗಿ ಕೈಗೆಟುಕದಿರುವಷ್ಟು ದುಬಾರಿ ಆಗಿರುವುದು ಇದಕ್ಕೆ ಕಾರಣವಾಗಿದೆ.

ಕೊನೆಯದಾಗಿ ಶೂದ್ರ, ಸ್ತ್ರೀಯರು, ಗೋಮಾಂಸ ಭಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ನಿಯತಕಾಲಿಕೆಗಳಲ್ಲಿ ಕಂಡುಬರುವ ವೇದದ ಬಗೆಗಿನ ಬೇಜವಾಬ್ದಾರಿ ಟೀಕೆಗಳಿಗೆ ನೀಡುವ ಉತ್ತರಗಳನ್ನು ಅಥವಾ ಪ್ರತ್ಯುತ್ತರಗಳನ್ನು ತಿಳಿದುಕೊಳ್ಳುಲು ಇಚ್ಚಿಸುವಂತಹ ಕೆಲವು ಓದುಗರು. ವಾರ್ತಪತ್ರಿಕೆಗಳಲ್ಲಿ ಬರೆಯುವ ಅಂತಹ ಲೇಖಕರು ತಮ್ಮ ಅಭಿಪ್ರಾಯಗಳ ಸಮರ್ಥನೆಗಾಗಿ ೨೦,೦೦೦ ವೇದಮಂತ್ರಗಳ ಪೈಕಿ, ಒಂದು ಮಂತ್ರದ ಒಂದು ಭಾಗವನ್ನು ಉಲ್ಲೇಖಿಸಿ ಒಂದು ಇಡೀ ಪ್ರಬಂಧವನ್ನೇ ಬರೆಯಬಲ್ಲರು.

ಈ ಪುಸ್ತಕದಲ್ಲಿನ ನಮ್ಮ ದೃಷ್ಟಿಕೋನಗಳು ಇನ್ನೂರಕ್ಕೂ ಹೆಚ್ಚಿನ ಸಂಪೂರ್ಣ ಮಂತ್ರಗಳ ಭಾಷಾಂತರಗಳ ಉದ್ದರಣಗಳಿಂದ ಸಮರ್ಥಿಸಲ್ಪಟಿವೆ. ನಾನಾ ಅಧ್ಯಾಯಗಳಲ್ಲಿ ಚರ್ಚಿಸಲಾಗಿರುವ ನಾನಾ ವಿಷಯಗಳಿಗೆ ಸಮಂಜಸವಾದ ಅಥರ್ವ ವೇದ ಮಂತ್ರಗಳ ಒಂದು ಪಟ್ಟಿಯನ್ನು ಅನುಬಂಧದಲ್ಲಿ (appendix) ನೀಡಲಾಗಿದೆ.


ಅಧ್ಯಾಯ ಸೂಚಿ

1. ಅಥರ್ವ ವೇದವನ್ನು ಯಾಕೆ ಓದಬೇಕು / 1

2. ಮುನ್ನೋಟ : ಅಧ್ಯಾಯಗಳ ಸಾರಾಂಶ / 5

3. ಹಿತ ನುಡಿಗಳು ಅಥವಾ ಸುಭಾಷಿತಗಳು / 10

4. ವೇದ ಶಿಕ್ಷಣ / 17

5. ಉಪಶಮನ ಮತ್ತು ಆರೋಗ್ಯಮಯ ದೀರ್ಘಾಯುಷ್ಯ / 31

6. ಶಾಂತಿ, ಆನಂದ ಮತ್ತು ಸಮೃದ್ಧಿ / 41

7. ದೇವತೆಗಳು ಮತ್ತ್ತು ಅವರ ಪ್ರಾಣ – ಮನಾದಿ ಶಕ್ತಿಗಳು / 43

8. ಅಂತರ್ಯಜ್ಞ / 48

9. ಪ್ರಜಾರಾಜ್ಯ ಪದ್ಧತಿ ಮತ್ತು ಆಡಳಿತ / 51

10. ಅಂತರಂಗ ಹಾಗೂ ಬಾಹ್ಯ ಸಂಘರ್ಷಗಳಿಂದ ರಕ್ಷಣೆ / 57

11. ಜೀವನ ಸಂಗಾತಿಯ ಆಯ್ಕೆ ಮತ್ತು ವಿವಾಹ / 60

12. ಕುಟುಂಬ ಜೀವನ / 66

13. ವಾಸ್ತು, ಗೃಹ ಮತ್ತು ಗೃಹ ನಿರ್ಮಾಣ / 74

14. ವೃತ್ತಿಗಳು ಮತ್ತು ಜಾತಿ / 79

15. ಆಹಾರ, ಗೋರಶ್ಮಿ ಮತ್ತು ಕುದುರೆ : ಸಾಂಕೇತಿಕತೆ / 83

16. ಮಳೆ / 91

17. ಕಾಲ, ದಶಮಾಂಶ ಪದ್ಧತಿ ಮತ್ತು ಅನಂತತೆ / 94

18. ಆಧ್ಯಾತ್ಮಿಕ ಮತ್ತು ತಾತ್ವಿಕ ಸ್ತೋತ್ರಗಳು / 96

19. ಭೂಮಿ / 103

20. ಉಪಸಂಹಾರ / 122

ಅನುಬಂಧಗಳು

1. ಅಥರ್ವ ವೇದದ ಪವಿತ್ರತೆ ಮತ್ತು ನಿಂದನಾತ್ಮಕ ಅಭಿಪ್ರಾಯಗಳು / 123

2. ವಿವಿಧ ವಿಷಯಗಳ ಕುರಿತು ಇರುವ ಸೂಕ್ತಗಳ ಪಟ್ಟಿ / 127

SKU: 093f65e080a2 Category: