ಆರೋಗ್ಯಮಯ ಜೀವನ

25.00

‘೨೦೦೦ದ ಇಸವಿಯ ವೇಳೆಗೆ ಎಲ್ಲರಿಗೂ ಆರೋಗ್ಯ’ ಎಂಬ ಘೋಷಣೆ ಮಾಡಿ ಸರ್ಕಾರವು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂದರೂ ಈ ಗುರಿಯ ಸಾಧನೆ ಸಾಧ್ಯವಾಗಿಲ್ಲ. ಅಧುನಿಕ ಮಾನವ ಹೊಸ-ಹೊಸ ಆವಿಷ್ಕಾರಗಳ ಮೂಲಕ ಕಾಯಿಲೆಗಳಿಗೆ ಔಷಧಿಗಳನ್ನು, ಚಿಕೆತ್ಸೆಗಳನ್ನು ಕಂಡುಹಿಡಿಯುತ್ತಿದ್ದರೂ, ರೋಗ-ರುಜಿನಗಳು ಹೊಸ-ಹೊಸ ಸ್ವರೂಪಗಳಲ್ಲಿ ಪ್ರಕಟವಾಗಿ ಮಾನವ ಜನಾಂಗವನ್ನು ಬೆಚ್ಚಿಬೀಳಿಸುತ್ತವೆ. ರೋಗಬಾರದತೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದರ ವಿನಃ ಈ ಸಮಸ್ಯೆಗೆ ಬೇರೆ ಪರಿಹಾರವೇ ಇಲ್ಲ ಎಂಬಂತಾಗಿದೆ.

ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ಆಯುರ್ವೇದ ಸಂಹಿತೆಗಳಲ್ಲಿ ಈ ಕುರಿತ ವಿವರಗಳು ವಿಶದವಾಗಿದೆ. ಇವುಗಳನ್ನು ಜನಪ್ರಿಯಗೊಳಿಸುವ ಕಿರುಪ್ರಯತ್ನ ಇದಾಗಿದೆ.

”ರೋಗತಡೆ” ಅಥವಾ ‘Prevention’ ವ್ಯಕ್ತಿಗೆ ಸುಲಭ ಸಾಧ್ಯವಾಗಬೇಕು ಹಾಗೂ ಅದೇ ಜೀವನವಿಧಾನವಾಗಬೇಕು. ಅದರಿಂದ ಹೆಚ್ಚು ಹಣ ವೆಚ್ಚವಾಗಬಾರದು ಈ ನಿಯಮಗಳಿಗೆ ತಕ್ಕಂತೆ ಆಯುರ್ವೇದದಲ್ಲಿ ಹೇಳಲಾದ ಸೂತ್ರಗಳು ಇಲ್ಲಿವೆ. ಚೆನ್ನಾಗಿ ಅರ್ಥೈಸಿಕೊಂಡು ನಿತ್ಯಬಳಕೆಗೆ ತಂದಾಗ ಈ ಆರೋಗ್ಯ ಸೂತ್ರಗಳು ಹಲವಾರು ರೋಗಗಳನ್ನು ತಡೆಗಟ್ಟಬಲ್ಲವು. ಇಷ್ಟಾಗ್ಯೂ ಅಪರೂಪದಲ್ಲಿ ರೋಗಗಳು ಪ್ರಟಕಗೊಂಡಾಗ ವೈದ್ಯರನ್ನು ಕಾಣುವುದನ್ನು ಆರೋಗ್ಯ ಸಾಧಕರು ಮರೆಯಬಾರದು.


ಅಧ್ಯಾಯ ಸೂಚಿ

ಪ್ರಕಾಶಕರ ಮಾತು / iv

1. ಪೀಠಿಕೆ / 01

2. ಪ್ರಕೃತಿ ನಿರ್ಣಯ / 04

3. ದಿನಚರ್ಯೆ / 15

4. ಋತುಚರ್ಯೆ / 25

5. ಪಂಚಕರ್ಮ ಚಿಕಿತ್ಸೆಗಳು / 34