ಅಂತರ್ಯಜ್ಞ

12.00

ವೇದದಲ್ಲಿ ವಿವೀಕನಿಧಿ, ಜ್ಞಾನ ಭಂಡಾರವಿದೆ ಎಂದು ಬಹುತೇಕ ಹಿಂದೂಗಳಿಗೆ ಅವರ ಚಿಕ್ಕಂದಿನಲ್ಲಿ ಅಂತಃಸ್ಫುರಣೆಯ ಮೂಲದ ಒಂದು ಭಾವನೆ ಇರುತ್ತದೆ. ಆದರೆ ಮುಂದೆ ಅವರು ಸಾಯಣರ ‘ವಿದ್ವತ್ ಪೂರ್ಣ’ ಭಾಷ್ಯಗಳ ಪರಿಚಯ ಪಡೆದಾಗ, ಈ ಭಾಷ್ಯ ವೇದಮಂತ್ರಗಳು ಕೇವಲ ಯಜ್ಞಕ್ರಿಯೆಯನ್ನು ಕುರಿತದ್ದು ಎಂದು ಘೋಷಿಸಿರುವರೆಂಬ ತಿಳುವಳಿಕೆಯನ್ನು ಹೊಂದಿ ಅವರ ಚಿಕ್ಕಂದಿನ ಭಾವನೆ ದುರ್ಬಲಗೊಳ್ಳುತ್ತದೆ; ಅವರು ವಿವೀಕನಿಧಿಗಾಗಿ ಉಪನಿಷತ್ತುಗಳ ಮೊರೆ ಹೋಗುತ್ತಾರೆ. ವೇದದಲ್ಲಿರುವ ಜ್ಞಾನ, ವಿವೇಕಗಳಿಗೆ ಒತ್ತು ಕೊಡುವ ನಮ್ಮ ಪುಸ್ತಕಗಳನ್ನು ನೋಡಿರುವ ವೇದಾಭಿಮಾನಿಗಳು ‘ವೇದದ ಆಧ್ಯಾತ್ಮಿಕ ವಿವರಣೆ’ ಯನ್ನು ಕುರಿತು ಕಿರುಹೊತ್ತಿಗೆಯೊಂದನ್ನು ಹೊರತರಬೇಕೆಂದು ನಮ್ಮಲ್ಲಿ ಕೇಳಿಕೊಳ್ಳುತ್ತಿದ್ದರು. ಅವರ ಭಾವನೆಗೆ ಮನ್ನಣೆ ನೀಡಿ ಈ ಕಿರುಹೊತ್ತಿಗೆಯನ್ನು ತರುತ್ತಿದ್ದೇವೆ. ಇದನ್ನು ಸಿದ್ಧಪಡಿಸಿ ಕೊಟ್ಟಿರುವ ಪ್ರೊ. ಸಾ. ಕೃ. ರಾಮಚಂದ್ರರಾವ್ ಅವರು ಪಾರಂಪರಿಕ ಅವರು ಶಾಸ್ತ್ರ ಮತ್ತು ಆಧುನಿಕ ಚಿಂತನಾಕ್ರಮಗಳೆರಡರಲ್ಲೂ ಪ್ರಕಾಂಡ ವಿದ್ವಾಂಸರು. ಅವರ ಈ ಪುಸ್ತಿಕೆ ಈ ವಿಷಯವನ್ನು ಕುರಿತು ಅಭ್ಯಾಸ ಮಾಡುವ ಹೊಸಬರಿಗೂ ಹಾಗೂ ವಿದ್ವಾಂಸರಿಗೂ ತುಂಬಾ ಉಪಯುಕ್ತವಾಗಿದೆ.


ಒಳಪುಟಗಳಲ್ಲಿ
1. ವೇದದ ಆಧ್ಯಾತ್ಮಿಕ ಭಾಷ್ಯಕ್ಕೆ ಪೀಠಿಕೆ / 1
2. ತೈತ್ತಿರೀಯ ಸಂಹಿತೆಯ ಆಧ್ಯಾತ್ಮಿಕ ಅವಲೋಕನ / 14
3. ಅನುಬಂಧ / 35
ಅನುಬಂಧ – 1 ಅಂತರಂಗದಿಂದ ಅಂತರಂಗಕೆ
ಅನುಬಂಧ – 2 ಸಂಕೇತಗಳ ವಿವರಣಾ ಪಟ್ಟಿ

SKU: 54229abfcfa5 Category: