ಅಗ್ನಿ ಸಹಸ್ರನಾಮ

20.00

ವೇದದಲ್ಲಿ ದೇವತೆ ಪ್ರಧಾನ. ದೇವತೆ ಎಂದರೆ ವಿಶ್ವಾತೀತ ಶಕ್ತಿ (Cosmic force). ಇದು ಋಷಿಗಳ ಅಭಿಮತ. ಋಗ್ವೇದದಲ್ಲಿ ೧೦,೫೫೨ ಮಂತ್ರಗಳಿವೆ. ೧,೩೦೦ ಮಂತ್ರಗಳಲ್ಲಿ ದೇವ ಎಂಬ ಶಬ್ದ ಇದೆ. ದೇವ ಶಬ್ದದ ವ್ಯುತ್ಪತ್ತಿ ದಿವ್ ಮೂಲದಿಂದ ಆಗಿದೆ. ಹಾಗೆಂದರೆ ಹೊಳೆಯುತ್ತಿರುವುದು ಅಥವಾ ಪ್ರಕಾಶಮಾನ ಆಗಿರುವುದು. ದೇವತೆಗಳು ಅತಿಭೌತ (supra-physical) ಜೀವಿಗಳು. ಚೇತನ, ಜ್ಞಾನ ಹಾಗೂ ಸಾಮರ್ಥ್ಯಗಳಿಂದ ಪರಿಪೂರ್ಣ ಆಗಿರುವರು. ದೇಹ ಇಲ್ಲದೆಯೇ ಅವರು ತಮ್ಮ ಶಕ್ತಿಗಳನ್ನು ಪ್ರಕಟಿಸಬಲ್ಲರು. ಇಂಥ ದೇವತೆಗಳ ಶಕ್ತಿ, ಸಾಮರ್ಥ್ಯ, ಕಾರ್ಯಪದ್ಧತಿ, ಚಲನವಲನ ಇವೆಲ್ಲವನ್ನು ದ್ರಷ್ಟಾರರಾದ ಋಷಿಗಳು ಕಂಡಿರುವರು, ಅನುಭವಿಸಿರುವರು.

ದೇವತೆಗಳು ಮಾನವರ ಹಿತಚಿಂತಕರು. ಅವರು ಪ್ರಗತಿಯ ಮಾರ್ಗದರ್ಶಕರು. ಕರೆದರೆ ಧಾವಿಸಿ ಬರುವರು. ಅಭೀಪ್ಸೆ ತೀವ್ರವಾಗಿದ್ದರೆ ಒಡನಾಡಿಗಳಾಗುವರು. ಇಂದ್ರ ದೇವ ದೈವೀ ಮನಸ್ಸಿನ ಅಧಿಪತಿ, ಸರಸ್ವತಿ ದೈವೀ ಪ್ರೇರಣೆಯ ಅಧಿದೇವತೆ, ಸೋಮ ದೇವ ಅಸ್ತಿತ್ವದ ಆನಂದದ ಅಧಿದೇವತೆ. ಅದಿತಿ ವೈಶಾಲ್ಯತೆಯ ಅಧಿದೇವತೆ. ಹೀಗೆ ದೇವತೆಗಳು ಯಾರು ಯಾರು ಏನನ್ನು ಕೆಳುವರೋ ಅದನ್ನು ನೀದಬಲ್ಲವರಾಗಿದ್ದಾರೆ. ಒಟ್ಟಾರೆ ಅವರು ಮಾನವ ವಿಕಾಸದ ದಾರಿಯನ್ನು ಸುಗಮಗೊಳಿಸುವರು.

ಇಂತಹ ದೇವತೆಗಳನ್ನು ಅಗ್ನಿ ಪ್ರಧಾನನಾಗಿದ್ದಾನೆ. ಇವನು ಮಾನವರಲ್ಲಿನ ದೈವೀ ಸಂಕಲ್ಪ ಶಕ್ತಿಯ (will power) ಅಧಿದೇವತೆ. ಅವನನ್ನು ಉದ್ದೇಶಿಸಿದ ಮಂತ್ರಗಳನ್ನು ಪಠಿಸಿ, ಅವನ ಕುರಿತು ಧ್ಯಾನಿಸಿದರೆ ಸಂಕಲ್ಪಶಕ್ತಿ ಪ್ರಖರಗೊಳ್ಳುವುದು. ದೈವೀ ಸಂಕಲ್ಪಶಕ್ತಿಯು ಅಂತರ್ಜ್ಞಾನ (wisdom) ದಿಂದ ಪ್ರೇರಿತ ಆಗಿರುತ್ತದೆ. ಇದು ಅಂತರಂಗದ ಸಂಪತ್ತುಗಳು ಎನಿಸಿದ ಕರುಣೆ, ಸ್ನೇಹ, ಸಾಮರಸ್ಯ, ಪರೋಪಕಾರ, ಸಹಬಾಳ್ವೆ ಮುಂತಾದವುಗಳನ್ನು ಎತ್ತಿಹಿಡಿಯುವಂತಹದ್ದಾಗಿದೆ.

ಋಗ್ವೇದದ ಮಂತ್ರಗಳಿಂದ ಅಗ್ನಿನಾಮಗಳನ್ನು ಸ್ತೋತ್ರರೂಪದಲ್ಲಿ ಪೋಣಿಸಿಕೊಟ್ಟವರು ವೇದಾಚಾರ್ಯ, ವ್ಯಾಕರಣ ವಿದ್ವಾನ್, ಕಾವ್ಯತೀರ್ಥ ಶ್ರೀ ಸಾಂಬದೀಕ್ಷಿತರು.


ಅಧ್ಯಾಯ ಸೂಚಿ
1. ಅಗ್ನಿ : ಗೂಢ ಜ್ವಾಲೆ / 01
2. ಶ್ರೀ ಗಣೇಶಾಯನಮಃ / 05
3. ಅಗ್ನಿ ಸಹಸ್ರನಾಮ ಸ್ತೋತ್ರಂ / 06
4. ಅಗ್ನಿ ಸಹಸ್ರನಾಮಾವಳಿಃ / 16
5. ಅಗ್ನಿ ಅಷ್ಟೋತ್ತರ ಶತನಾಮ ಸ್ತೋತ್ರಂ / 31
6. ಅಗ್ನಿ ಅಷ್ಟೋತ್ತರ ಶತನಾಮಾವಳಿಃ / 32

SKU: 93db85ed909c Category: