ಅಗ್ನಿ – ದೈವೀ ಸಂಕಲ್ಪದ ಅಧಿದೇವತೆ – 300 ಮಂತ್ರಗಳು

65.00

ವೇದದಲ್ಲಿ ದೇವತೆ ಪ್ರಧಾನ. ಋಷಿಗಳ ದೇವರ ಕಲ್ಪನೆ ಅದ್ಭುತ. ದೇವತೆ ಎಂದರೆ ಒಂದು ವೈಶ್ವಿಕ ಶಕ್ತಿ (cosmic force). ಇದು ಋಷಿಗಳ ಅಭಿಮತ. ಋಗ್ವೇದದಲ್ಲಿ ೧೦,೫೫೨ ಮಂತ್ರಗಳಿವೆ. ೧,೩೦೦ ಮಂತ್ರಗಳಲ್ಲಿ ದೇವ ಎಂಬ ಶಬ್ದ ಇದೆ. ದೇವ ಶಬ್ದದ ವ್ಯುತ್ಪತ್ತಿ ದಿವ್ ಮೂಲದಿಂದ ಆಗಿದೆ. ಹಾಗೆಂದರೆ ಹೊಳೆಯುತ್ತಿರುವುದು ಅಥವಾ ಪ್ರಕಾಶಮಾನವಾಗಿ ಇರುವುದು ಎಂದರ್ಥ. ದೇವತೆಗಳು ಅತಿಭೌತ (supra physical) ಜೀವಿಗಳು. ಚೇತನ, ಜ್ಞಾನ ಹಾಗೂ ಸಾಮರ್ಥ್ಯಗಳಿಂದ ತುಂಬಿದವರಾಗಿದ್ದಾರೆ. ದೇಹ ಇಲ್ಲದಯೇ ಅವರು ತಮ್ಮ ಶಕ್ತಿಗಳನ್ನು ಪ್ರಕಟಗೊಲಿಸಬಲ್ಲರು. ಋಗ್ವೇದದ ಋಷಿಗಳು ದ್ರಷ್ಟಾರರು. ದೇವತೆಗಳ ಶಕ್ತಿ, ಸಾಮರ್ಥ್ಯ, ಕಾರ್ಯಪದ್ಧತಿ, ಚಲನವಲನ ಇವೆಲ್ಲವನ್ನು ಕಂಡವರು, ಅನುಭವಿಸಿದವರು.

ಪುರಾಣದಲ್ಲಿ ದೇವರ ಚಿತ್ರಣ ವಿಭಿನ್ನ. ವಿಚಿತ್ರವಾಗಿದೆ. ತಪ್ಪು ಕಲ್ಪನೆಗೆ ಎಡೆಮಾಡಿಕೊಡುತ್ತದೆ. ವೇದ ದೇವತೆಗಳು ಮಾನವನ ಹಿತಚಿನ್ತಕರು. ಕರೆದರೆ ಧಾವಿಸಿ ಬರುವರು. ನಿತ್ಯ ಜೀವನವನ್ನು ಸುಗಮಗೊಳಿಸುವರು. ಒದನಾದಿಗಲಾಗಿಬಿಡುವರು. ಇಂದ್ರ ದೇವ ವಿವೇಕದ ಅಧಿಪತಿ. ಸರಸ್ವತಿ ದೈವೀ ಪ್ರೇರಣೆಯ ಅಧಿದೇವತೆ. ಸೋಮ ದೇವ ಆನಂದದ ಅಧಿದೇವತೆ. ಅದಿತಿ ವೈಶಾಲ್ಯತೆಯನ್ನು ನೀಡುವವಳು. ಹೀಗೆ ಯಾರು ಯಾರಿಗೆ ಏನೇನು ಬೇಕೊ ಅದನ್ನು ನೀಡಬಲ್ಲವರು ಅವರು. ಮಾನವರ ವಿಕಾಸದ ದಾರಿಯನ್ನು ಸುಗಮಗೊಳಿಸುವರು. ಪ್ರಗತಿಯೆಡೆಗೆ ಕರೆದೊಯ್ಯುವರು.

ಇಂಥ ದೇವರಲ್ಲಿ ಅಗ್ನಿ ಒಬ್ಬ. ಇವನು ಮಾನವರಲ್ಲಿನ ಸಂಕಲ್ಪಶಕ್ತಿಯ ಅಧಿದೇವತೆ. ಅವನನ್ನು ಉದ್ದೇಶಿಸಿದ ಮಂತ್ರಗಳನ್ನು ಪಠಿಸಿದರೆ, ಧ್ಯಾನಿಸಿದರೆ ಸಂಕಲ್ಪಶಕ್ತಿ ಪ್ರಖರಗೊಳ್ಳುವುದು.

ಈ ಪುಸ್ತಕದಲ್ಲಿ ಋಗ್ವೇದದ ಅಗ್ನಿ ಮಂತ್ರಗಳಿವೆ. ಮಂತ್ರಗಳ ಗೂಡಾರ್ಥ ಇದೆ. ವಿವರಣೆ ಇದೆ. ಸಾಧಕರಿಗೆ, ಆಸಕ್ತರಿಗೆಲ್ಲ ಸುಲಭವಾಗಿ ಅರ್ಥವಾಗಬಲ್ಲ ಪ್ರಯೋಜನಕಾರಿಯಾದ ಇಂಥದೊಂದು ಪುಸ್ತಕವನ್ನು ಕನ್ನಡಿಗರ ಕೈಗಿರಿಸಲು ನಮಗೆ ಆನಂದ ಆಗುತ್ತಿದೆ.


ಅಧ್ಯಾಯ ಸೂಚಿ
ದೈವಿಕ ಜ್ವಾಲೆ ಅಗ್ನಿ
1. ಸೂಕ್ತ 1.1 : ಅಗ್ನಿ ಸ್ತುತಿ / 01
2. ಸೂಕ್ತ 1.12 : ದೂತನಾದ ಅಗ್ನಿ / 12
3. ಸೂಕ್ತ 1.13 : ಆವರಿಸಿಕೊಳ್ಳುವ ಶಕ್ತಿಗಳು / 18
4. ಸೂಕ್ತ 1.26 : ಅಗ್ನಿಯೊಂದಿಗೆ ಆತ್ಮೀಯತೆ / 25
5. ಸೂಕ್ತ 1.27 : ವೈಶ್ವಿಕ ಜೀವನಾಗಿ ಅಗ್ನಿ /  28
6. ಸೂಕ್ತ 1.31 : ಮಾನವರೆಲ್ಲರಲ್ಲಿ ಅಗ್ನಿಯು ಇರುತ್ತಾನೆ / 33
7. ಸೂಕ್ತ 1.36 : ದೇವತೆಗಳ ಮಾತಿನಿಂದ ಪ್ರದೀಪ್ತನಾದ ಅಗ್ನಿ / 43
8. ಸೂಕ್ತ 1.44 : ಅಗ್ನಿಯು ನಮ್ಮನ್ನು ಪೋಷಿಸುವನು ಹಾಗೂ ಆವರಿಸುವನು / 52
9. ಸೂಕ್ತ 1.45 : ಅಗ್ನಿಯು ಮಾನವರನ್ನು ಆರಾಧಿಸುತ್ತಾನೆ / 59
10. ಸೂಕ್ತ 1.58 : ಪರಮಾನಂದವನ್ನು ನೀಡುವನು / 64
11. ಸೂಕ್ತ 1.59 : ವೈಶ್ವಿಕ ದೈವೀಶಕ್ತಿ ಮತ್ತು ಸಂಕಲ್ಪ ಶಕ್ತಿ / 69
12. ಸೂಕ್ತ 1.60 : ಆಲೋಚನೆಯನ್ನು ಶ್ರೀಮಂತನಾದ ಅಗ್ನಿ / 73
13. ಸೂಕ್ತ 1.65 : ಅಗ್ನಿಯು ಹೆಜ್ಜೆಗುರುತುಗಳು / 76
14. ಸೂಕ್ತ 1.66 : ಅಗ್ನಿಯು ನಮ್ಮನ್ನು ಹಲವು ವಿಧಗಳಲ್ಲಿ ಪ್ರೇರೇಪಿಸುತ್ತಾನೆ / 81
15. ಸೂಕ್ತ 1.67 : ರಹಸ್ಯ ಗಹ್ವರದಲ್ಲಿ ರೂಪುಗೊಂಡ ಮಂತ್ರಗಳು / 84
16. ಸೂಕ್ತ 1.68 : ಪ್ರಕಟೀಕರಣದ ಪ್ರಯೋಜನಗಳು / 88
17. ಸೂಕ್ತ 1.69 : ಅಗ್ನಿ ಮತ್ತು ಮಾನವ / 91
18. ಸೂಕ್ತ 1.70 : ಸೂರ್ಯಲೋಕದೊಳಗೆ ನಮಗೆ ಪ್ರವೇಶವನ್ನು ನೀಡುತ್ತಾನೆ / 94
19. ಸೂಕ್ತ 1.71 : ಮಂತ್ರವು ಅಜ್ಞಾನದ ಬೆಟ್ಟವನ್ನು ಛಿದ್ರಗೊಳಿಸುತ್ತದೆ / 98
20. ಸೂಕ್ತ 1.72 : ಅಂತರ್ ಜ್ಞಾನಿ / 104
21. ಸೂಕ್ತ 1.73 : ಅಗ್ನಿಯ ಐಶ್ವರ್ಯಗಳು / 110
22. ಸೂಕ್ತ 1.74 : ಯಜ್ಞಪಥದಲ್ಲಿ ಪಯಣ / 114
23. ಸೂಕ್ತ 1.75 : ನೀನು ಯಾರು ಮತ್ತು ಎಲ್ಲಿರುವೆ ? / 117
24. ಸೂಕ್ತ 1.76 : ನಿನ್ನನ್ನು ಆಕರ್ಷಿಸಿಕೊಳ್ಳುವುದು ಹೇಗೆ? / 119
25. ಸೂಕ್ತ 1.77 : ನಾವು ಅಗ್ನಿಗೆ ಹೇಗೆ ಅರ್ಪಿಸಿಕೊಳ್ಳುವುದು ಹೇಗೆ ? / 121
26. ಸೂಕ್ತ 1.78 : ಗಾಢಾಂಧಕಾರವನ್ನು ನಾಶಮಾಡಿದವನು / 124
27. ಸೂಕ್ತ 1.79 : ವಿಶಾಲ ಜ್ಞಾನವನ್ನು ನೆಲೆಗೊಳಿಸುವನು / 126
28. ಸೂಕ್ತ 1.94 : ಅಗ್ನಿಯ ಸ್ನೇಹ / 132
29. ಸೂಕ್ತ 1.95 : ರಹಸ್ಯಾತ್ಮನನ್ನು ತಿಳಿದವರು ಯಾರು ? / 139
30. ಸೂಕ್ತ 1.96 : ಸಂಪತ್-ಪ್ರದಾಯಕ / 144
31. ಸೂಕ್ತ 1.97 : ನಮ್ಮ ಪಾಪವನ್ನು ನಾಶ ಮಾಡುವನು / 147
32. ಸೂಕ್ತ 1.98 : ಅಗ್ನಿ ವೈಶ್ವಾನರ : ವೈಶ್ವಿಕ ದೈವೀಶಕ್ತಿ ಹಾಗೂ ಕ್ರಿಯೆ / 150
33. ಸೂಕ್ತ 1.99 : ಸುರಕ್ಷತೆಯೆಡೆಗೆ ನಮ್ಮನ್ನು ಕೆರೆದುಕೊಂಡು ಹೋಗು / 152

SKU: 35f4a8d465e6 Category: