ಆಧುನಿಕರಿಗಾಗಿ ವೇದ ಜ್ಞಾನ

30.00

ವೇದಗಳು ಎಂದರೆ ಏನು. ವೇದಗಳು ಇಂದಿಗೆ ಹೇಗೆ ಪ್ರಸ್ತುತವಾಗಿವೆ. ಅವುಗಳಲ್ಲಿ ಅಡಗಿರುವ ಜ್ಞಾನವನ್ನು ಹೇಗೆ ಅರಿತುಕೊಂಡು ಅನುಸರಿಸಬಹುದು ಇತ್ಯಾದಿ ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ. ವೇದಗಳು ನಿತ್ಯನೂತನ. ವೇದಗಳು ಜೀವನಮುಖೀ ಸಂದೇಶ ಸಾರುತ್ತವೆ. ಭಾರತೀಯ ಸಂಸ್ಕೃತಿಯ ಮೂಲ ವೇದಗಳಲ್ಲೇ ಇದೆ. ಈ ಎಲ್ಲ ಸಂಗತಿಗಳನ್ನು ಯಾವ ಗೊಂದಲಕ್ಕೂ ಎಡೆ ಇಲ್ಲದಂತೆ ಲೇಖಕ ಡಾ।। ಆರ್. ಎಲ್. ಕಶ್ಯಪ್ ಅವರು ತಿಳಿಸಿಕೊಟ್ಟಿದ್ದಾರೆ.

ವೇದಗಳು ಹಾಗೂ ಇನ್ನಿತರ ಆಧ್ಯಾತ್ಮ ಗ್ರಂಥ ಮತ್ತು ಪಥಗಳ ನಡುವೆ ತಿಳಿದೊ, ತಿಳಿಯದೋ ನಿರ್ಮಾಣಗೊಂಡ ಬಿರುಕು ಸತ್ಯವಲ್ಲ ಎಂಬುದನ್ನು ಆಧಾರಸಹಿತವಾಗಿ ಲೇಖಕರು ನಿರೂಪಿಸಿದ್ದಾರೆ. ಅವುಗಳ ನಡುವಿನ ಸಾಮರಸ್ಯವನ್ನು ಎತ್ತಿತೋರಿಸಿದ್ದಾರೆ.

ವಿಷಯ ನಿರೂಪಣೆ ಸರಳವಾಗಿದೆ. ಶೈಲಿ ಸುಗಮವಾಗಿದೆ. ಹಾಗಾಗಿ, ವೇದಗಳ ಪರಿಚಯ ಈವರೆಗೂ ಮಾಡಿಕೊಂಡಿರದೇ ಇರುವವರಿಗೂ ಇಲ್ಲಿನ ವಿಷಯಗಳನ್ನು ತಿಳಿದುಕೊಳ್ಳಲು ಕಷ್ಟವಾಗದು. ವೇದಗಳು ನಮಗೇಕೆ ಎಂಬ ಅಭಿಪ್ರಾಯ ಹೊಂದಿದವರೆಗೆ, ಅವುಗಳಿಂದಾಗುವ ವ್ಯಾಪಕ ಪ್ರಯೋಜನಗಳನ್ನು ಈ ಕಿರುಪುಸ್ತಕ ಮನಗಾಣಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ.


ಅಧ್ಯಾಯ ಸೂಚಿ
ಪ್ರಕಾಶಕರ ಮಾತು
1. ಪ್ರಾಸ್ತಾವಿಕ / 01
2. ವೇದ ಗ್ರಂಥಗಳು ಮತ್ತು ಅವುಗಳ ವರ್ಗೀಕರಣ / 07
3. ದೇವತೆಗಳು ಎಂದರೆ ಯಾರು ? / 13
4. ಉಪನಿಷತ್ತುಗಳು / 23
5. ಪರಮ ಏಕ (ತತ್ ಏಕಮ್) ಹಾಗೂ ದೇವತೆಗಳುಅನೇಕ ಅನೇಕ / 28
6. ವೇದಗಳು ಮತ್ತು ತಂತ್ರ / 41
7. ವೇದದ ಬಾಹ್ಯ ಅರ್ಥ ವಿವರಣೆ / 45
8. ಉಪಸಂಹಾರ / 48
9. ಪರಾಮರ್ಶನ ಗ್ರಂಥಗಳು / 49
10. ಅನುಬಂಧಗಳು
1. ರಹಸ್ಯ ಜ್ಞಾನ ಕುರಿತು ಸಾವಿತ್ರಿ ಕಾವ್ಯ / 51
2. ವೇದ ರಹಸ್ಯದ ಸಾರಾಂಶ ಸೂಕ್ತಗಳು / 65
3. ವೇದಗಳ ಪರಾಮರ್ಶನ / 68
4. ವೇದ ಗ್ರಂಥಗಳು / 70

SKU: f4b9ec30ad9f Category: