Additional information
Weight | 250 g |
---|
₹150.00
ಪುಟಗಳು: ೨೦೧
ಮೂಲ: ಜಾಯತಿ ಕಪೂರ
ಅನುವಾದ: ಸಾಲಿಗ್ರಾಮ ಸುಬ್ಬರಾಮಯ್ಯ
ಯೋಗಿರಾಜ ಶ್ರೀ ಶ್ಯಾಮಚರಣ ಲಾಹಿರಿಯವರು ಪರಮಾವತಾರ ಬಾಬಾಜಿ ಅವರಿಂದ ನೇರ ಅನುಗ್ರಹಕ್ಕೆ ಒಳಗಾದವರು. ಬಹುಕಾಲ ಗೂಢವಾಗಿದ್ದ ಕ್ರಿಯಾ ಯೋಗವನ್ನು ಜಗತ್ತಿಗೆ ಸಾರಲು ಇವರು ಅವತಾರ ಎತ್ತಿದರು. ಲಾಹಿರಿ ಮಹಾಶಯ ಎಂದೇ ಸುಪ್ರಸಿದ್ಧರಾಗಿದ್ದಾರೆ.
ತಮ್ಮ ಸಾಧನೆಯ ಪಥ ಹಾಗೂ ಕ್ರಮ ಕುರಿತು ಲಾಹಿರಿ ಮಹಾಶಯರು ಡೈರಿ ಬರೆಯುತ್ತಿದ್ದರು. ಇಂಥ ೨೬ ಡೈರಿಗಳಿಂದ ಆಯ್ದ ವಿಷಯಗಳು ಈ ಪುಸ್ತಕದುದ್ದಕ್ಕೂ ಕಾಣಸಿಗುತ್ತವೆ. ಯೌಗಿಕ ತಂತ್ರವಾದ ಕ್ರಿಯಾಯೋಗದಿಂದ ಇಂದ್ರಿಯ ಕ್ಷೋಭೆ ಸಮಾಪ್ತಗೊಂಡು, ಬ್ರಹ್ಮಾಂಡ ಪ್ರಜ್ಞೆಯೊಡನೆ ತಾದಾತ್ಮ್ಯತೆ ಸಾಧ್ಯ ಆಗುತ್ತದೆ ಎಂಬುದನ್ನು ಅವರ ಡೈರಿಯಲ್ಲಿನ ಲೇಖನಗಳಿಂದ ತಿಳಿದುಬರುತ್ತದೆ. ಇವರ ಜೀವನ ಹಾಗೂ ಸಾಧನೆಗಳ ಬೆಳಕು ಈ ಪುಸ್ತಕದ ಓದುಗರಿಗೆ ಖಂಡಿತ ದೊರಕಬಲ್ಲದು. ದಿವ್ಯತ್ವದೆಡೆಗಿನ ಪ್ರಥಮ ಮತ್ತು ಪ್ರಗತಿಪರ ಹೆಜ್ಜೆ ಇದಾಗಬಲ್ಲದು.
Reviews
There are no reviews yet.