ತಿರುಮಲ ವೆಂಕಟೇಶ್ವರ ದೇವಸ್ಥಾನ ಹಾಗೂ ಕೃಷ್ಣ ಯಜುರ್ವೇದ (ಉಪನ್ಯಾಸ)

30.00

ಆಂಧ್ರ ಪ್ರದೇಶದ ತಿರುಮಲ ಗಿರಿಯ ಮೇಲೆ ಇರುವ ಶ್ರೀ ವೆಂಕಟೇಶ್ವರ ದೇವಾಲಯ ವಿಷ್ಣುವಿನ ಆರಾಧನಾ ಸ್ಥಳ. ಇದು ದಕ್ಷಿಣ ಭಾರತದ ಅತಿ ಜನಪ್ರಿಯ ಮತ್ತು ಅತಿ ಶ್ರೀಮಂತ ದೇವಾಲಯಗಳಲ್ಲೊಂದು. ಸಹಜವಾಗಿಯೇ ಈ ದೇವಾಲಯದ ಜನಪ್ರಿಯತೆ ಮತ್ತು ಶ್ರೀಮಂತಿಕೆಯ ಬಗ್ಗೆ ಜನಮಾನಸದಲ್ಲಿ ಕುತೂಹಲ ಮತ್ತು ಪ್ರಶ್ನೆಗಳೇಳುತ್ತವೆ. ಈ ಸ್ಥಳ ಬೆಟ್ಟಗಳ ಸರಣಿಯಂತೆ ಕಾಣುತ್ತಿದ್ದರೂ ಇದನ್ನು ಸಪ್ತಗಿರಿ ಅಥವಾ ಏಳು ಬೆಟ್ಟಗಳು ಎಂದು ಏಕೆ ಗುರುತಿಸಲಾಗುತ್ತದೆ? ಈ ಬೆಟ್ಟಗಳ ನಡುವಿನ ಕಣಿವೆಯಂತಹ ಪ್ರದೇಶದಲ್ಲಿ ದೇವಾಲಯ ನಿರ್ಮಾಣವಾಗಿದ್ದೇಕೆ ಇನ್ನತರರ ಪ್ರಶ್ನೆ ಎಂದರೆ ಇಲ್ಲಿ ಪೂಜಿಸಲಾಗುವ ವರಾಹ (ಸೂಕರ ಅಂಥವಾ ಹಂದಿ) ದೇವರ ದೇವಾಲಯವನ್ನು ಮೂಲ ದೇವಾಲಯದ ಬದಿಯಲ್ಲೇ ಏಕೆ ನಿರ್ಮಿಸಲಾಗಿದೆ? ಇಲ್ಲಿನ ದೇವಾಲಯದಲ್ಲಿ ಬೇರೆಲ್ಲಾ ವಿಷ್ಣು ದೇವಾಲಯಗಳಲ್ಲಿರುವಂತೆ ಲಕ್ಷ್ಮಿಯ ಮೂರ್ತಿ ಏಕೆ ಪ್ರತಿಷ್ಠಾಪಿಸಿಲ್ಲ? ಮೂಲ ಮೂರ್ತಿಗೆ ಲಕ್ಷ್ಮಿಗೆ ಸಂಬಂಧಿಸಿದೆ ಎನ್ನಲಾದ ಶುಕ್ರವಾರದ ದಿನವೇ ಏಕೆ ಅಭಿಷೇಕ ಮಾಡಲಾಗುತ್ತದೆ? ಇಲ್ಲಿರುವ ಮೂರ್ತಿಯು ಕೆಲವಾರು ವೈಷ್ಣವ ಆಳ್ವಾರರು ಹೇಳಿರುವಂತೆ ಹರಿ-ಹರ ಸಮಾಗಮದ ಮೂರ್ತಿಯೇ? ಹೌದಾದರೆ ಅದಕ್ಕೆ ಕಾರಣ ಏನು?

ಕೆಲವೊಮ್ಮೆ ನೀಡಲಾಗಿರುವ ಉತ್ತರಗಳು ಹೆಚ್ಚು ಸಮಾಧಾನಕಾರವಾಗಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಏಕೀಕೃತವಾಗಿ ದೊರೆಯಬೇಕಾದಲ್ಲಿ ನಾವು ಈ ದೇವಾಲಯ ಮತ್ತು ಚತುರ್ವೇದಗಳಲ್ಲೊಂದಾದ ಕೃಷ್ಣ ಯಜುರ್ವೇದದ ನಡುವಿನ ಸಂಬಂಧವನ್ನು ಅರಿಯಬೇಕು.

Category: