Yajur Vedada Antaranga

Rs.80.00

ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮತ್ತು ಜೀವನದ ಗುಣಮಟ್ಟವನ್ನು ಉನ್ನತಗೊಳಿಸುವಲ್ಲಿ ಯಜುರ್ ವೇದವು ನೀಡುವ ಜ್ಯೋತಿ ಈ ಪುಸ್ತಕದ ಪ್ರಧಾನ ಪ್ರಧಾನ ವಿಷಯವಾಗಿದೆ.

ಋಗ್ವೇದದ ಮಂತ್ರಗಳು ಅಂದರೆ ಋಕ್ಕುಗಳು ಜ್ಞಾನದ ಕಿರಣಗಳಿಂದ ಮನಸ್ಸನ್ನು ಬೆಳಗುತ್ತವೆ; ಕಾರ್ಯ ಚಟುವಟಿಕೆಗಳನ್ನು ಋಜು ಮಾರ್ಗದೆಡೆ ಮುನ್ನಡೆಸಲು ಅಗತ್ಯವಾದ ಶಕ್ತಿಯನ್ನು ಯಜುರ್ ವೇದವು ನೀಡುತ್ತದೆ; ಅಥವಾ ಋಕ್ಕುಗಳ ಜ್ಞಾನಕ್ಕೆ ಅನುಗುಣವಾಗಿ ನಡೆಸಲಾಗುವ ಯಜ್ಞದ ರೀತಿಯಲ್ಲಿ ನಡೆಸಲಾಗುವ ಕ್ರಿಯೆಗಳಿಗೆ ಯಜುಸ್ ಮಂತ್ರಗಳು ಮಾರ್ಗದರ್ಶನ ಮಾಡುತ್ತವೆ. ಇದು ಶ್ರೀ ಆರೋಬಿಂದೊ ಅವರ ಅಭಿಪ್ರಾಯವಾಗಿದೆ. ಅವರು ಹೇಳುತ್ತಾರೆ : “ಈ ಯಜ್ಞವು ಏಕಕಾಲದಲ್ಲಿ ಯಜ್ಞವೂ, ಕ್ರಿಯೆಯೊ, ಆರಾಧನೆಯೂ ಆಗಿದೆ”.

ಸಾಂಪ್ರದಾಯಿಕವಾಗಿ, ಯಜುರ್ ವೇದವನ್ನು ಎರಡನೆಯ ವೇದವೆಂದು ಹೇಳಲಾಗುತ್ತದೆ, ಮೊದಲನೆಯದು ಋಗ್ವೇದ. ನಾವು ಋಗ್ವೇದ, ಯಜುರ್ ವೇದ, ಸಾಮವೇದ ಮತ್ತು ಅಥರ್ವವೇದ ಮತ್ತು ಉಪನಿಷತ್ತುಗಳು – ಇವುಗಳನ್ನು ಇಡಿಯಾಗಿ ಸಮಗ್ರ ದೃಷ್ಟಿಯಿಂದ ನೋಡಬೇಕು; ಅವು ಯಾವುದೇ ಕೇಂದ್ರಬಿಂದುವಿಲ್ಲದ ಪ್ರತ್ಯೇಕ ಜ್ಞಾನಶಾಖೆಗಳಲ್ಲ; ಉಪನಿಷತ್ತುಗಳಲ್ಲಿ ಇರುವ ಹಲವಾರು ಪ್ರಸಿದ್ದ ಮಂತ್ರಗಳು ಈಗಾಗಲೇ ವೇದ ಸಂಹಿತೆಗಳಲ್ಲಿವೆ. ಉದಾಹರಣೆಗೆ, ಪ್ರಥಮ ಉಪನಿಷತ್ ಈಶ ಅಥವಾ ಈಶಾವಾಸ್ಯ ಉಪನಿಶತ್ತಿನಲ್ಲಿರುವ ಬಹಳಷ್ಟು ಮಂತ್ರಗಳು ಶುಕ್ಲಯಜುರ್ ವೇದ ಸಂಹಿತೆಯ ೪೦ನೇ ಅಧ್ಯಾಯದಲ್ಲಿವೆ.

ಈ ಪುಸ್ತಕವು ಯಜುರ್ ವೇದದ ಎರಡು ಶಾಖೆಗಳ – ಕೃಷ್ಣಯಜುರ್ ವೇದದಿಂದ ತೈತ್ತಿರೀಯ ಸಂಹಿತಾ ಮತ್ತು ಶುಕ್ಲಯಜುರ್ ವೇದದಿಂದ ವಾಜಸನೇಯಿ ಸಂಹಿತಾ – ಒಂದು ಅಧ್ಯಯನವಾಗಿದೆ.

ಅನುಬಂಧ ೩ರಲ್ಲಿ ನಾವು ತೈ. ಸಂ. (೧೫) ಮತ್ತು ತೈ. ಸಂ. (೭) ರಲ್ಲಿರುವ ಅಶ್ವಮೇಧವನ್ನು ಕುರಿತಾದ ಎಲ್ಲ ಮಂತ್ರಗಳ ಬಗ್ಗೆ – ಈ ಮಂತ್ರಗಳು ಬಾಹ್ಯಯಜ್ಞಕ್ಕಿಂತಲೂ ಹೆಚ್ಚಾಗಿ ಅಂತರ್ ಯಜ್ಞದ ಪರಿಕಲ್ಪನೆಯನ್ನು ಬೆಂಬಲಿಸುತ್ತವೆ ಎಂಬುದನ್ನು ತೋರಿಸುವುದಕ್ಕಾಗಿ ಚರ್ಚಿಸಿದ್ದೇವೆ.

ತೈತ್ತಿರೀಯ ಸಂಹಿತೆಯಲ್ಲಿ ಅತ್ಯಂತ ಮುಖ್ಯವಾದ ತೈ. ಸಂ. ಕಾಂಡ ೪ರ ವಿಷಯಗಳ ಒಂದು ವಿವರವಾದ ಪಟ್ಟಿಯನ್ನು ಅನುಬಂಧ ೪ ನೀಡುತ್ತದೆ. ಅದು ಆಧ್ಯಾತ್ಮಿಕ ಅನುಷ್ಠಾನಗಳ ಬಗ್ಗೆ ವೈವಿಧ್ಯಮಯವಾದ ಜ್ಞಾನವನ್ನು ನೀಡುತ್ತದೆ.

ತೈತ್ತಿರೀಯ ಸಂಹಿತೆಯ ಸಮಗ್ರ ಅಧ್ಯಯನದಲ್ಲಿ ಆಸಕ್ತಿಯುಳ್ಳವರು SAKSHI ಯಿಂದ ಪ್ರಕಟವಾಗಿರುವ ನಾಲ್ಕೂ ಸಂಪುಟಗಳನ್ನು ಓದಬಹುದು. (ಎಲ್ಲ ೭ ಕಾಂಡಗಳಲ್ಲಿರುವ ಮಂತ್ರಗಳ ಅನುವಾದ ಇದೆ).


ಅಧ್ಯಾಯ ಸೂಚಿ

ತೈತ್ತಿರೀಯ ಸಂಹಿತೆಯ ಆಧ್ಯಾತ್ಮಿಕ ಅವಲೋಕನ – ಪ್ರೊ।। ಸಾ.ಕೃ. ರಾಮಚಂದ್ರರಾವ್ / ix

I. ಮೇಲ್ನೋಟಗಳು

1. ಪುಸ್ತಕದ ಮೇಲ್ನೋಟ / 1

2. ವೇದಯೋಗ : ತೈ.ಸಂ. (4), ವಾ.ಸಂ. (11 – 18) / 11

II. ದೇವತೆಗಳು ಮತ್ತು ಮಂತ್ರಗಳು

3. ಅಗ್ನಿ ಮತ್ತು ಇತರ ದೇವತೆಗಳು / 16

4. ಬಹು – ಪರಿಚಿತ ಮಂತ್ರಗಳು / 22

5. ರುದ್ರ ಮಂತ್ರಗಳು / 29

6. ವಾಸ್ತು (ವಾಸ್ತವ್ಯ) ಮಂತ್ರಗಳು / 34

III. ಯಜ್ಞ ಅಥವಾ ಬಲಿ

7. ಯಜ್ಞದ ಅರ್ಥ / 36

8. ಯಜ್ಞ ಮತ್ತು ಶಾಸ್ತ್ರೋಕ್ತ ಕ್ರಿಯಾವಿಧಿಗಳು / 41

9. ಸಾಂಕೇತಿಕತೆ / 45

10. ಆಂತರಿಕ ಮತ್ತು ಬಾಹ್ಯ ಯಜ್ಞ : ಸಂಗತ / 48

11. ಪ್ರಾಣಿಬಲಿ / 52

12. ಅಶ್ವ ಎಂಬ ಪದದ ಗಹನವಾದ ಅರ್ಥ / 55

13. ಅಶ್ವಮೇಧ / 62

IV. ದಂತಕಥೆಗಳು, ಸಮಾಜ ಮತ್ತು ವಿಜ್ಞಾನ

14. ದಂತಕಥೆಗಳು ಮತ್ತು ಅವುಗಳ ನಿಗೂಢ ಅರ್ಥ / 67

15. ತೈತ್ತಿರೀಯ ಬ್ರಾಹ್ಮಣ ಮತ್ತು ಆರಣ್ಯಕ / 76

16. ಋತುಗಳು, ಯುಗಗಳು ಮತ್ತು ವಿಜ್ಞಾನ / 78

17. ಸಂಖ್ಯೆಗಳು ಮತ್ತು ರೇಖಾಗಣಿತ / 81

V.  ಯೋಗದ ಒಳನೋಟಗಳು

18. ಸೃಷ್ಟಿ / 83

19. ಶರೀರದ ಪುನರುಜ್ಜೀವನ / 87

20. ಸುಪರ್ಣ / 93

VI. ಅನುಬಂಧಗಳು / 97

1. ಪುರಾತನ ವೈದಿಕ ಕ್ರಿಯಾವಿಧಿಗಳು ಮತ್ತು ಆಧುನಿಕ ವೈದಿಕ ಹೋಮ / 97

2. ಬ್ರಾಹ್ಮಣ – ಎಲ್ಲಾ ಕಾಂಡಗಳಲ್ಲಿನ ಅನುವಾಕಗಳು : ಪಕ್ಷಿನೋಟ / 101

3. ತೈ.ಸಂ. ಮಂತ್ರಗಳ್ ಮತ್ತು ಇತರ ಸಂಬಂಧಿತ ಸಂಖ್ಯೆಗಳ ಪಟ್ಟಿ / 111

4. ಅಂತಃಶಕ್ತಿಯ ವರ್ಧನೆ (ತೈ.ಸಂ. ಕಾಂಡ ೪ರ ವಿವರವಾದ ಸಾರಾಂಶ) / 117

 

SKU: 72b32a1f754b Category: