Sama Vedada Antaranga

50.00

‘ಸಾಮವೇದದ ಅಂತರಂಗ’ ಪುಸ್ತಕವು ನಮ್ಮ ಇತರ ಮೂರು ಪುಸ್ತಕಗಳಾದ ಋಗ್ವೇದವನ್ನು ಯಾಕೆ ಓದಬೆಕು, ಅಥರ್ವ ವೇದದ ಅಂತರಂಗ, ಮತ್ತು ಯಜುರ್ ವೇದದ ಅಂತರಂಗ ಇವುಗಳಿಗೆ ಪೂರಕವಾಗಿದೆ.
ಪುಸ್ತಕದಲ್ಲಿ ೩೨  ಅಧ್ಯಾಯಗಳಿದ್ದು , ಮೂರು ಭಾಗಗಳಲ್ಲಿ ವಿಭಾಗಿಸಲಾಗಿದೆ. ಮೊದಲನೇ ಭಾಗದ ೧೦ ಅಧ್ಯಾಯಗಳು, ಮಂತ್ರಗಳು, ಋಷಿಗಳು, ಅನುವಾದಕರು, ಉಪನಿಷತ್ತು ಮತ್ತು ಋಗ್ವೇದಗಳೊಂದಿಗೆ ಸಂಬಂಧ ಇತ್ಯಾದಿಗಳ ಕುರಿತು ಸಾಮಾನ್ಯ ತಿಳುವಳಿಕೆಯನ್ನು ನೀಡುತ್ತವೆ.
ರಡನೆಯ ಭಾಗವು, ಸಾಮವೇದದ ಹಾಗೂ ಸಂಗೀತದ ಕೆಲವು ಅಂಶಗಳ ಸಂಬಂಧವನ್ನು ವಿವರಿಸುತ್ತದೆ. ಈ ಗ್ರಂಥದಲ್ಲಿನ ವಿಷಯಗಳು ಹೊಸತು ಅಲ್ಲವಾದರೂ ಸಂಬಂಧಿತ ವಿಷಯಗಳ ಸಂಕ್ಷಿಪ್ತ ನಿರೂಪಣೆಯೇ ಈ ಪುಸ್ತಕದ ವಿಶೇಷವೆನಿಸಿದೆ.
ಪುಸ್ತಕದ ೧೯ನೆಯ ಅಧ್ಯಾಯವು ವಿಶಿಷ್ಟವೂ ಕುತುಹಲಕಾರಿಯೂ ಆಗಿದೆ. ಏಕೆಂದರೆ ಮಂತ್ರೋಚ್ಚಾರಣೆಯ ಸಂದರ್ಭದಲ್ಲಿ ಸ್ವರೋಚ್ಚಾರಣೆಯಲ್ಲಿನ ತಪ್ಪುಗಳನ್ನು ಕಂಡುಹಿಡಿಯಲು ಸಾಪೇಕ್ಷವಾಗಿ ಮುಂದುವರೆದ ಗಣಿತಶಾಸ್ತ್ರದ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.
೧೩ ಅಧ್ಯಾಯಗಳನ್ನು ಹೊಂದಿರುವ ಮೂರನೆಯ ಭಾಗದಲ್ಲಿ, ಸಾಮವೇದ ಮಂತ್ರಗಳೊಂದಿಗೆ ಸಂಯೋಜಿಸಲಾಗಿರುವ ವಿವಿಧ ದೇವತೆಗಳ ಮನಃಪ್ರಾಣಾದಿ ಶಕ್ತಿಗಳು, ಮಂತ್ರಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅರ್ಥಗಳನ್ನು ಕೊಡಲಾಗಿದೆ . ಈ ಮಂತ್ರಗಳ ಹಿಂದೆ ಇರುವ ಅರ್ಥಗಳ ಸಾಂಕೇತಿಕತೆಯು ಒಂದು ಅವಿಭಾಜ್ಯ ಅಂಗವೆಂಬುದನ್ನು ಗಮನಿಸಿ. ಈ ದೇವತೆಗಳೊಂದಿಗೆ ಸಂಯೋಜಿಸಲಾಗಿರುವ – ಸಂಕಲ್ಪ-ಶಕ್ತಿ, ವಿಚಾರಗಳಲ್ಲಿನ ಸ್ಪಷ್ಟತೆ, ಪ್ರೇರಣೆ – ಇವುಗಲ್ಲಿನ ಈ ಮಂತ್ರಗಳ ಮೂಲಕ ವೃಧ್ಧಿಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ಮಂತ್ರ-ಶಬ್ದಗಳ ಅರ್ಥವನ್ನು ಮತ್ತು ಅವುಗಳ ಅಂತರಾರ್ಥಗಳನ್ನು ಅರಿತುಕೊಳ್ಳುವುದು ತುಂಬಾ ಸಹಾಯಕಾರಿ.

Qty
SKU: 66f041e16a60 Category: