Rig Vedada Antaranga

75.00

“ಋಗ್ವೇದವನ್ನು ಯಾಕೆ ಓದಬೇಕು” ಪುಸ್ತಕವನ್ನು ನಾವು ೧೯೯೮ ರಲ್ಲಿ ಪ್ರಕಟಿಸಿದ ನಂತರ ಋಗ್ವೇದದ ಹತ್ತು ಮಂಡಳಗಳಲ್ಲಿನ ಪ್ರಮುಖ ವಿಚಾರಗಳ ಕುರಿತ ಒಂದು ಸಂಕ್ಷಿಪ್ತ ಪುಸ್ತಕಕ್ಕೆ ಸತತವಾದ ಕೋರಿಕೆಗಳು ಬಂದಿವೆ. ಈ ಪುಸ್ತಕ ಅಂತಹ ಕೋರಿಕೆಗಳಿಗೆ ಒಂದು ಪ್ರತಿಕ್ರಿಯೆಯ ರೂಪದಲ್ಲಿದೆ. ಈ ಪುಸ್ತಕ, ಕಿರುಪುಸ್ತಕಗಳ ಶ್ರೇಣಿಗೆ ಸೇರಿದೆ.

ಒಟ್ಟು ೧೦,೫೫೨ ಮಂತ್ರಗಳಲ್ಲಿರುವ ಜ್ಞಾನವನ್ನು ೧೦೦ ಪುಟಗಳಲ್ಲಿ ಸಂಕ್ಷಿಪ್ತವಾಗಿ ಹೇಳುವುದು ಅಸಾಧ್ಯ. ಕೇವಲ ಶೀರ್ಷಿಕೆಗಳು ಮತ್ತು ಅವುಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವುದರಿಂದ ಯಾವುದೇ ಉಪಯೋಗವಿಲ್ಲ . ನಮ್ಮ ಓದುಗರು ಮಂತ್ರಗಳ . ಪಠೄಗಳನ್ನು ಮತ್ತು ಅವುಗಳ ಭಾಷಾಂತರವನ್ನು ಇಚ್ಚಿಸುತ್ತಾರೆ.

ನಾವು ಋಗ್ವೇದದ ಕೆಲವು ಸಂಗತಿಗಳನ್ನು ಕುರಿತಂತೆ, ಸಮಂಜಸ ಮಂತ್ರಗಳೊಂದಿಗೆ ಅನೇಕ ಕಿರು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಈ ಪುಸ್ತಕದಲ್ಲಿ, ನಾವು ಪಟ್ಟಿ ಮಾಡಿರುವ ಕಿರು ಪುಸ್ತಕಗಳನ್ನು ವಿಪುಲವಾಗಿ ಉಲ್ಲೆಖಿಸುತ್ತೇವೆ ಮತ್ತು ಅವುಗಳಲ್ಲಿರುವ ಮಂತ್ರಗಳ ಮತ್ತು ಭಾಷಾಂತರಗಳ ಪುನರಾವರ್ತನೆಯನ್ನು ತಡೆದಿದ್ದೇವೆ. ಉದಾಹರಣೆಗೆ, ಅಗ್ನಿದೇವತೆಯ ಶಕ್ತಿಗಳನ್ನು ಕುರಿತಂತೆ, ನಾನೂರಕ್ಕೂ ಹೆಚ್ಚು ಮಂತ್ರಗಳುಳ್ಳ ಹಲವಾರು ಕಿರುಪುಸ್ತಕಗಳಿವೆ. ಹೀಗೆ, ಪುಸ್ತಕದ ಗಾತ್ರವನ್ನು ಹಿಗ್ಗಿಸಿದೆ, ಹಲವಾರು ವಿಷಯಗಳನ್ನು ಅವುಗಳ ಮಂತ್ರಗಳೊಂದಿಗೆ ತಿಳಿಸಲು ನಮಗೆ ಸಾಧ್ಯವಾಗಿದೆ.

Qty
SKU: 9f61408e3afb Category: