ಋಗ್ವೇದ ಶಬ್ದಾರ್ಥ ವಿಚಾರ

200.00

ವಾಕ್ಯರಚನವಿಧಾನ (ಅಥವಾ ವ್ಯಾಕರಣ) ಮತ್ತು ಶಬ್ದಾರ್ಥಶಾಸ್ತ್ರಗಳು ಒಂದು ಭಾಷೆಯ ಎರಡು ಪಾರ್ಶ್ವಗಳು. ವಾಕ್ಯರಚನಾ ವಿಧಾನವು ವಾಕ್ಯವನ್ನು ಭಾಷಾಸ್ವರೂಪಕ್ಕೆ ಅನುಗತವಾಗಿ ರಚಿಸುವ ನಿಯಮಾವಳಿಗಳನ್ನು ತಿಳಿಸುತ್ತದೆ. ಶಬ್ದಾರ್ಥ ಶಾಸ್ತ್ರವೆಂದರೆ ಶಬ್ದಗಳ ಅತವಾ ಶಬ್ದಪುಂಜಗಳ ಅರ್ಥ ಪರಿಶೀಲನೆ. ಒಂದು ವಾಕ್ಯ ವ್ಯಾಕರಣನಿಯಮಬದ್ದವಾಗಿದ್ದ ಮಾತ್ರಕ್ಕೆ ಅದು ಅರ್ಥಪೂರ್ಣವಾಗಿರಬೇಕೆಂದಿಲ್ಲ. ಉದಾಹರಣೆಗೆ : ಮಂತ್ರ ಪಠನವು ಪರ್ವತವನ್ನು ಪುಡಿಗೈದಿತು ಎಂಬುದು ವ್ಯಾಕರಣ ನಿಯಮದಂತೆ ಸರಿಯಾಗಿರಬಹುದು. ಆದರೆ ಯಾವುದೇ (ಸಮರ್ಪಕ) ಅರ್ಥ ಕೊಡುವುದಿಲ್ಲ. ಅನುಬಂಧದಲ್ಲಿ ಚರ್ಚಿಸಿರುವಂತೆ, ವೇದಮಂತ್ರಗಳ ಸಂಸ್ಕೃತವು ಶಾಸ್ತ್ರೀಯ (ಸಾಹಿತ್ಯಕ) ಸಂಸ್ಕೃತಕ್ಕಿಂತ ಗಣನೀಯವಾಗಿ ಭಿನ್ನವಾಗಿದೆ. ವೇದ ಮಂತ್ರಗಳ ವ್ಯಾಕರಣ ತುಲನಾತ್ಮಕವಾಗಿ ಸರಳವಾಗಿದ್ದು, ೪-೫ ಶಬ್ದಗಳುಳ್ಳ ಪುಟ್ಟ ಪದಪುಂಜಗಳನ್ನು, ಚಿಕ್ಕ ಚಿಕ್ಕ  ವಾಕ್ಯಗಳನ್ನು ಒಳಗೊಂಡಿದೆ. ಪ್ರಸ್ತುತ ಪುಸ್ತಕದಲ್ಲಿ, ಋಗ್ವೇದ ಮಂತ್ರಗಳ ಅರ್ಥವನ್ನು ಅರಿಯುವುದು ಹೇಗೆ ಎಂಬುದರೆ ಬಗ್ಗೆ ಅರ್ಥಾತ್ ಋಗ್ವೇದದ ಶಬ್ದಾರ್ಥ ಶಾಸ್ತ್ರ ಕುರಿತು ಚರ್ಚಿಸಿದ್ದೇವೆ.


ಅಧ್ಯಾಯ ಸೂಚಿ

1. ಮುನ್ನುಡಿ – ಪ್ರೊ।। ಜಿ. ವೆಂಕಟಸುಬ್ಬಯ್ಯ / vi

2. ಓದುಗರ ಗಮನಕ್ಕೆ / viii

ಭಾಗ – 1 : ಪೀಠಿಕೆ

1. ಮೂಲಪ್ರಶ್ನೆ ಮತ್ತು ಉದಾಹರಣೆಗಳು / 1

2. ಋಗ್ವೇದದ ಸಂದೇಶ / 18

ಭಾಗ – 2 : ಅರ್ಥ ನಿರ್ಣಯ

3. ಶಬ್ದಗಳ ಪ್ರಾಥಮಿಕ ಪರಿಶೀಲನೆ / 22

4. ವೃಕ್ಷಾಕೃತಿ ರಚನೆ ಮತ್ತು ೮೦ – ೨೦ ನಿಯಮ / 28

5. ಶಬ್ದಗಳ ೧೦ ಗುಂಪುಗಳು / 37

6. ದೇವತೆಗಳು ಮತ್ತು ರಾಕ್ಷಸರು / 56

7. ಅರ್ಥ ನಿರ್ಣಯದ ಸಾಮಾನ್ಯ ನಿಯಮಗಳು / 69

8. ಕಾರ್ಯ ವಿಧಾನ / 73

9. ಅರ್ಥನಿರ್ಣಯ : ೬೦ ಉದಾಹರಣೆಗಳು / 78

ಭಾಗ – 3 : ಸಾಂಕೇತಿಕತೆಯ ಅರ್ಥ ಹಾಗಿಓ ವಿವರಣೆ

10. ವೇದದಲ್ಲಿಯ ಸಾಂಕೇತಿಕತೆ : (ಶ್ರೀ ಅರೋಬಿಂದೊ) / 116

1. ಉಭಯಾರ್ಥಗಳು / 117

2. ಯುದ್ಧಗಳ ಸಾಂಕೇತಿಕತೆ / 118

3. ರಶ್ಮಿಗಳ ಬಿಡುಗಡೆ / 123

4. ಜಲರಾಶಿಗಳ ಬಿಡುಗಡೆ / 124

5. ಸೂರ್ಯನ ಉದಯ / 124

6. ಬಾಹ್ಯ ಕರ್ಮಗಳ (ವಿಧಿಗಳ) ಸಾಂಕೇತಿಕತೆ / 127

7. ‘ಗೌ’ನ ಸಾಂಕೇತಿಕತೆ / 128

8. ಸಾಂಕೇತಿಕತೆ ಅನಿವಾರ್ಯತೆ / 129

9. ಇತರ ಪ್ರಾಚೀನ ಸಂಸ್ಕೃತಿಗಳಲ್ಲಿಯ ಸಾಂಕೇತಿಕತೆ / 131

11. ‘ಗೌ’ ಶಬ್ದವನ್ನೊಳಗೊಂಡ ಎಲ್ಲ ಮಂತ್ರಗಳ ಪರಿಶೀಲನೆ / 134

1. ‘ಗೌ’ ಎಂಬುದು ಅಜ್ಞಾನ ಮತ್ತು ಅಪ್ರಜ್ಞತೆಗಳನ್ನು ನಾಶಮಾಡುವ ಪ್ರಕಾಶ / 135

2. ‘ಗೌ’ ಮತ್ತು ‘ಅದ್ರಿ’, ಅಜ್ಞಾನ ಮತ್ತು ಅಪ್ರಜ್ಞತೆಯ ರೂಪಕವಾದ ‘ಅದ್ರಿ’ / 138

3. ದೇವತೆ ‘ಅದಿತಿ’ ಮಾತು ‘ಗೌ’ / 140

4. ‘ಗೌ’ ವನ್ನು ಹುಡುಕಿ ಮರಳಿ ಪಡೆಯುವುದು / 140

5. ‘ಗೌ’ ವನ್ನು ದಾನಮಾಡುವವರು ಮತ್ತು ಸ್ವೀಕರಿಸುವವರು / 144

6. ದೈವೀ ಸಂಕಲ್ಪ ‘ಅಗ್ನಿ’ ಮತ್ತು ‘ಗೌ’ / 146

7. ಅಧ್ಯಾತ್ಮ ಜ್ಞಾನೋದಯ ಪೂರ್ವದ ‘ಉಷಸ್’ ಮತ್ತು ‘ಗೌ’ / 147

8. ಅಶ್ವಿನರು ಮತ್ತು ‘ಗೌ’ ಸಂಬಂಧಿತವಾದ ಅವರ ಕಾರ್ಯಗಳು / 148

9. ಋಭುಗಳು ಹಾಗೂ ‘ಗೌ’ / 148

10. ಒಂದು ಉಪಮೇಯ ಭಾಗವಾಗಿ ‘ಗೌ’ ಉಪಯೋಗ / 149

11. ‘ಗೌ’ ಒಂದು ಉಪಮೆಯಾಗಿ / 150

12. ಸಮಾಪನೆ / 150

12. ಕೆಲವು ಸೂಕ್ತಗಳ ಒಳನೋಟಗಳು / 152

1. ಅಗಸ್ತ್ಯ ಮತ್ತು ಇಂದ್ರ / 153

2. ಉಷೆಯ ರಥ ಮತ್ತು ಇಂದ್ರ / 154

3. ಊರ್ವಶಿ (ಋ.ವೇ.ದಲ್ಲಿ)/ 155

4. ಲೋಪಾಮುದ್ರಾ ಮತ್ತು ಅಗಸ್ತ್ಯ / 157

5. ಅದಿತಿ ಮತ್ತು ದಕ್ಷ / 158

6. ವಿರೋಧಿ ಶಕ್ತಿಗಳನ್ನೆದುರಿಸುವುದು (ಸವತಿಯರನ್ನು) / 160

7. ಎಲ್ಲ ಪಥಗಳೂ ಒಂದೇ ಗುರಿ ಸೇರುತ್ತವೆ / 161

8. ಚಿಕಿತ್ಸಕ ದೃಷ್ಟಿ / 163

9. ಉಪನಿಷತ್ತು ಮತ್ತು ವೇದ / 164

10. ಉಪನಿಷತ್ ಮಂತ್ರಗಳು / 166

11. ಅಶ್ವಮೇಧ / 167

12. ಶಮನಕಾರಕ ಸಸ್ಯಗಳು / 169

13. ಸೃಷ್ಟಿ ಸೂಕ್ತಗಳು / 170

14. ಮೃತ್ಯು ಸೂಕ್ತಗಳು / 171

15. ಶಾಂತಿಮಂತ್ರಗಳು / 171

16. ತಾತ್ತ್ವಿಕ ಮತ್ತು ಯೌಗಿಕ ಒಳನೋಟಗಳು / 172

17. ಅಥರ್ವ ವೇದ / 172

18. ಕಥಾನಕಗಳು ಮತ್ತು ಪುರಾಣಗಳು / 174

19. ಋಷಿ ವಾಮದೇವನ ಅನುಭಾವೀ ಸೂಕ್ತಗಳು / 176

13. ನಿರ್ಣಯಗಳು / 178

ಅನುಬಂಧಗಳು :

1. ಸಾಕ್ಷಿ ಪ್ರಕಟಿತ ಅನುವಾದಗಳು / 180

2. ಇಂಗ್ಲಿಷ್, ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಲ್ಲಿಯ ಅನುವಾದಗಳು / 182

3. ಉಲ್ಲೇಖಿತ ಋಗ್ವೇದ ಮಂತ್ರಗಳ ಹಾಗೂ ಸೂಕ್ತಗಳು / 188

4. ಉಲ್ಲೇಖಿತ ಋಗ್ವೇದ ಮಂತ್ರಗಳ್ ಸಂಯುಕ್ತ ಪಟ್ಟಿ / 194

5. ನಿಘಂಟು ಮತ್ತು ನಿರುಕ್ತ / 199

6. ವೇದಮಂತ್ರಗಳ ವ್ಯಾಕರಣದ ಸರಳತೆ / 202

7. ಉಪಸರ್ಗಗಳು, ಅವ್ಯಯಗಳು (Indeclinables)  ಮತ್ತು ನಿಪಾತಗಳು (Pronouns)  ಸರ್ವನಾಮಗಳು / 208

8. ಸಂಸ್ಕೃತ ಶಬ್ದಗಳ ಪಟ್ಟಿ / 213

9. ವಿಷಯ ಸೂಚಿ / 215