ಋಗ್ವೇದ ಸಂಹಿತೆ ಮಂಡಲ – 6

Rs.250.00

ಈ ಮಂಡಲದಲ್ಲಿ ೭೬೫ ಮಂತ್ರಗಳಿದ್ದು, ೭೫ ಸೂಕ್ತಗಳಲ್ಲಿ ಅಥವಾ ಆರು ಅನುವಾಕಗಳಲ್ಲಿ ಅವುಗಳನ್ನು ಇಡಲಾಗಿದೆ. ಅವು ಏಳು ಋಷಿಗಳಿಗೆ ಪ್ರಕಟವಾದಂಥವು. ಈ ೭೫ ಸೂಕ್ತಗಳಲ್ಲಿ ೬೦ಸೂಕ್ತಗಳು ಋಷಿ ಭರದ್ವಾಜ ಬಾರ್ಹಸ್ಪತ್ಯನಿಗೂ, ಮತ್ತು ಹನ್ನೊಂದು ಸೂಕ್ತಗಳು ಅವನ ಪುತ್ರರು ಅಥವಾ ಶಿಷ್ಯರಿಗೆ ಸೇರಿದವುಗಳಾಗಿವೆ. ನಾಲ್ಕು ಸೂಕ್ತಗಳು ಇನ್ನೊಬ್ಬ ಋಷಿಗೆ ಸೇರಿವೆ.

ಪಾರಂಪರಿಕವಾಗಿ ಪ್ರತಿಯೊಂದು ಮಂತ್ರವೂ ಅನೇಕ ಪಾದಗಳಲ್ಲಿ (ಸಾಮಾನ್ಯವಾಗಿ ನಾಲ್ಕು ) ವಿಭಾಗಿಸಲ್ಪಟ್ಟಿದೆ. ನಾವು ಪ್ರತಿಯೊಂದು ಭಾಗದ ಅನುವಾದವೂ ಅರ್ಥಪೂರ್ಣವಾಗುವಂತೆ ಮತ್ತು ಅನುವಾದದಲ್ಲಿ ಒಂದು ಸಾಲಿಗೆ ಅಡಕವಾಗುವಂತೆ, ಮಂತ್ರವನ್ನು ಕೆಲವೊಮ್ಮೆ ಹೆಚ್ಚು ಭಾಗಗಳಾಗಿ ವಿಭಾಗಿಸಿದ್ದೇವೆ. ಹೀಗೆ, ಇಡೀ ಅನುವಾದ, ಪದ್ಯರೂಪವೆಂದೆನ್ನಲಾಗದಿದ್ದರೂ, ಕೆಲಮಟ್ಟಿನ ಕಾವ್ಯಸ್ವರೂಪ ರಚನೆ ಹೊಂದಿದೆ. ಸಂಸ್ಕೃತ ಪಾಠದ ಒಂದು ಪಾದವು, ಒಂದೇ ಸಾಲಿನಲ್ಲಿ ಅನುವಾದಿಸಲ್ಪಟ್ಟಿರುವುದರಿಂದ, ಪದಗಳ ಅರ್ಥವನ್ನು ಅರಿಯಲು ಆಸಕ್ತಿಯುಳ್ಳ ಓದುಗರಿಗೆ ಅನುಕೂಲವಾಗಿದೆ.

‘ಸಾಕ್ಷಿ’ಯ ಈ ಹಿಂದಿನ ಪ್ರಕಟಣೆಗಳಲ್ಲಿ ಇದ್ದಂತೆಯೇ, ವೇದದ ಆಧ್ಯಾತ್ಮಿಕ ಮತ್ತು ಮನಸ್ಸಂಬಂಧಿತ (ಮನಃಶಾಸ್ತ್ರೀಯ) ಸಂದೇಶದ ಮೇಲೆ ಲಕ್ಷ್ಯ ಕೇಂದ್ರಿತವಾಗಿಟ್ಟುಕೊಳ್ಳಲಾಗಿದೆ. ನಮ್ಮ ಪುಸ್ತಕದ ಆದ್ಯ ಉದ್ದೇಶವು ಎಲ್ಲ ಜೀವನ ಸ್ತರಗಳಿಗೆ ಸೇರಿದ ವೇದ ಪ್ರಿಯರಿಗೆ, ಅನುವಾದವು ಅರಿಯಲು ಅನುಕೂಲವಾಗಿವಂತೆ ಮಾಡುವುದಾಗಿದೆ, ಹೊರತು, ಭಾಷತಜ್ಞರಿಗೆ ಅಥವಾ ವಿದ್ವದ್ವಲಯದ ಪರಿಣತರಿಗೆ ಮಾತ್ರ ಸೀಮಿತವಾಗಿಡುವುದಲ್ಲ.

ನಮ್ಮ ಈ ಹಿಂದಿನ ಪುಸ್ತಕಗಳಾದ ‘ಋಗ್ವೇದ ಸಂಹಿತೆ – ಮಂಡಲ ಹತ್ತು’, ಮತ್ತು ‘ಋಗ್ವೇದ ಸಂಹಿತೆ – ಮಂಡಲ ನಾಲ್ಕು’ ಇವುಗಳಲ್ಲಿ ವಿವರವಾಗಿ ವರ್ಣಿತವಾದ ಮಾದರಿಯನ್ನೇ ಈ ಅನುವಾದದಲ್ಲಿಯೂ ಅನುಸರಿಸಲಾಗಿದೆ.

ಮಂತ್ರಗಳಲ್ಲಿಯ ಅನೇಕ ಶಬ್ದಗಳಿಗೆ ಶ್ರೀ ಅರೋಬಿಂದೊ ನೀಡಿದ ಅರ್ಥವು, ಮಹಾ ಪಂಡಿತರಾದ ಸಾಯಣರ ಭಾಷ್ಯದಲ್ಲಿ ಕಂಡುಬರುವುದಕ್ಕಿಂತ, ಅಥವಾ ಭಾರತಶಾಸ್ತ್ರಜ್ಞರ (Indologists) ಅನುವಾದಗಳಲ್ಲಿ ಕಂಡುಬರುವ ಅರ್ಥಕ್ಕಿಂತ ತೀರ ವಿಭಿನ್ನವಾಗಿದೆ ಎಂಬುದನ್ನು ಬೇರೆ ಹೇಳುವ ಅವಶ್ಯಕತೆ ಇಲ್ಲ. ಶಾಸ್ತ್ರಿಯ (ಸಾಹಿತ್ಯಕ ) ಸಂಸ್ಕೃತಕ್ಕಿಂತ ತೀರ ಭಿನ್ನವಾದ, ವೇದಮಂತ್ರಗಳ ಸಂಸ್ಕೃತವನ್ನು ಶ್ರೀ ಅರೋಬಿಂದೊ ಆಳವಾಗಿ ಅಧ್ಯಯನ ಮಾಡಿದ್ದರು. ಈ ಅಧ್ಯಯನ ಮತ್ತು ವೇದರಹಸ್ಯದ ಕುರಿತಾದ ಅವರ ಅಂತಃಸ್ಪುರಣೆ, ಇವು ಪದಗಳ ಉಚಿತ ಅರ್ಥ ನೀಡುವಲ್ಲಿ ನೆರವಾದವು; ಅವನ್ನೇ ಇಲ್ಲಿ ತೆಗೆದುಕೊಳ್ಳಲಾಗಿದೆ. ಶಬ್ದಗಳಿಗೆ ಅರ್ಥಾರೋಪಣೆ ಮಾಡುವ ಈ ವಿಷಯ ಕುರಿತ ಹೆಚ್ಚಿನ ವಿವರಗಳಿಗೆ ‘ಸಾಕ್ಷಿ’ ಪ್ರಕಟಣೆ (Semantics of Rig Veda) ‘ಋಗ್ವೇದದ ಶಬ್ದಾರ್ಥ ವಿವರಣೆ’ ಎಂಬ ಪುಸ್ತಕವನ್ನು ನೋಡಬಹುದು.

ನಮ್ಮ ಕೈಪಿಡಿ ಪುಸ್ತಕ ‘Essentials of Rig Veda’ (ಋಗ್ವೇದದ ಮುಖ್ಯ ಅಂಶಗಳು), ಮಂತ್ರ ಛಂಧಸ್ಸು, ಋಷಿಗಳು, ದೇವತೆಗಳು ಶಕ್ತಿಗಳು ಮತ್ತು ಕೆಲವೊಂದು ಸ್ವಾರಸ್ಯಕರ ವಿಷಯಗಳ ಕುರಿತ ಉತ್ತಮ ಮೇಲ್ನೋಟವನ್ನು ನೀಡುತ್ತದೆಯೆಂಬುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ.


ಒಳಪುಟಗಳಲ್ಲಿ
i. ೭೫ ಸೂಕ್ತಗಳ ಶೀರ್ಷಿಕೆಗಳು / iv
ii. ವಿವಿಧ ದೇವತೆಗಳ ಕುರಿತು ಇರುವ ಸೂಕ್ತಗಳ ಸಂಖ್ಯೆ / v
iii. ಋಗ್ವೇದದ ಮೂಲಭೂತ ಕಲ್ಪನೆಗಳು / vi
vi. ಆರನೆಯ ಮಂಡಲದ ವಿಶೇಷತೆಗಳು / ix
v. ಋಷಿ ಭಾರದ್ವಾಜ / x
vi. ಸಾಂಕೇತಿಕತೆ / xiii
vii. ಕೃತಜ್ಞತೆಗಳು / xiv
viii. ಸಂಕ್ಷಿಪ್ತ ರೂಪಗಳು / xv

I. 765 ಮಂತ್ರಗಳ (75 ಸೂಕ್ತಗಳ) ಅನುವಾದ ಮತ್ತು ವಿವರಣೆ
ಅನುವಾಕ   ಸೂಕ್ತಗಳು    ಮಂತ್ರಗಳ ಸಂಖ್ಯೆ    ಪುಟ
1                1-15                 125             1
2                16-23               137             53
3                24-43               117             105
4                44-49               139             156
5                50-61               129             207
6                62-75               118             253

II. ಅನುಬಂಧಗಳು
1. ಭರದ್ವಾಜನ ಆಖ್ಯಾಯಿಕೆ / 310
2. ಆಕರಗಳು / 310
3. ವಿಷಯ ಸೂಚಿ / 312

SKU: 8179941434 Category: