ಪುರುಷ ಸೂಕ್ತ

30.00

ಖ್ಯಾತ ವಿದ್ವಾಂಸರಾದ ವೇದಕಮಲ ಪ್ರೊ।। ಎಸ್. ಕೆ. ರಾಮಚಂದ್ರ ರಾವ್ ಅವರ ಪುಸ್ತಕವನ್ನು ಪ್ರಕಟಿಸಲು ನಮಗೆ ಅತೀವ ಸಂತೋಷವೆನಿಸುತ್ತದೆ. ಇಡೀ ವೇದ ಸಾಹಿತ್ಯದಲ್ಲಿ ಪುರುಷ ಸೂಕ್ತವು ಅತ್ಯಂತ ಪರಿಚಿತವಾದ ಸೂಕ್ತವೆಂದು ಸ್ಪಷ್ಟವಾಗಿ ತಿಳಿದಿರುವ ಅಂಶವಾಗಿದೆ. ಆದರೆ ಸಾಂಪ್ರದಾಯಿಕ ಮೂಲಗಳನ್ನು ಬಳಸಿ ಕೆಲವು ವಿವರಣೆಗಳೊಂದಿಗೆ ಅದರ ಗಹನವಾದ ಅರ್ಥವನ್ನು ಸ್ಪಷ್ಟೀಕರಿಸುವ ಯತ್ನವು ಎಲ್ಲಿಯೂ ಕಂಡುಬಂದಿಲ್ಲ. ಮೊದಲನೆಯ ಆವೃತ್ತಿಯ, ತಮ್ಮ ಮುನ್ನುಡಿಯಲ್ಲಿ ಅವರು ತಿಳಿಸುವಂತೆ, ‘ಪುರುಷ ಕಲ್ಪನೆಯು ಕೆಲವು ವಿವರದೊಂದಿಗೆ ಸ್ಪಷ್ಟೀಕರಿಸಲ್ಪಟ್ಟಿದೆ ಮತ್ತು ‘ಪುರುಷ-ಮೇಧ’ ಎಂಬ ನಿಗೂಢ ಕಲ್ಪನೆಯು ಅದರ ಖಚಿತವಾದ ದೃಷ್ಟಿಕೋನದಲ್ಲಿ ಪರಿಶೀಲಿಸಲ್ಪಟ್ಟಿದೆ. ಈ ಸಾಂಪ್ರದಾಯಿಕ ಅರ್ಥನಿರೂಪಣೆಯನ್ನು ಹೊರತರುವುದರ ಮೂಲಕ ಹಲವಾರು ತಪ್ಪು ಕಲ್ಪನೆಗಳನ್ನು ತೊಡೆದುಹಾಕಬಹುದೆಂಬ ನಿರೀಕ್ಷೆಯಿದೆ’.

ಗ್ರಂಥಕರ್ತರ ಪ್ರಮುಖ ಕೊಡುಗೆ ಎಂದರೆ, ವೇದದ ಗ್ರಂಥಗಳಾದ ಶತಪಥ ಬ್ರಾಹ್ಮಣ, ತೈತ್ತಿರೀಯ ಆರಣ್ಯಕ, ತೈತ್ತಿರೀಯ ಬ್ರಾಹ್ಮಣ ಮತ್ತು ಇತರ ಉಪನಿಷತ್ ಗ್ರಂಥ ಹಾಗೂ ಬ್ರಾಹ್ಮಣಗಳಿಂದ ಆಯ್ದ ಉಧೃತ ಭಾಗಗಳನ್ನು ಉಲ್ಲೇಖಿಸುವುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪ್ರಮುಖ ಉಪನಿಷತ್ ಗ್ರಂಥಗಳಿಂದ ಪುರುಷ ಕಲ್ಪನೆಯು ಸವಿಸ್ತಾರವಾಗಿದೆ ಚರ್ಚಿಸಲ್ಪಟ್ಟಿದ್ದರೂ ಸಹ, ಈ ಅಂಶವು ವ್ಯಾಪಕವಾಗಿ ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ಪುಸ್ತಕವು ಹಲವಾರು ಉಧೃತ ಭಾಗಗಳು ಹಾಗೂ ಅವುಗಳ ಅನುವಾದವನ್ನು ಒಳಗೊಂಡಿದೆ. ಅಲ್ಲದೇ, ‘ಸೃಷ್ಟಿ ಮತ್ತು ಪ್ರಜಾಪತಿ’ ವಿಷಯಗಳಿಗೆ ಸಂಬಂಧಿಸಿದಂತೆ ನೀಡಲಾದ ಪ್ರೌಢ ನಿರೂಪಣೆಯೂ ಸಹ ಅವರ ಮತ್ತೊಂದು ವಿಶಿಷ್ಟ ಕೊಡುಗೆಯಾಗಿದೆ. ಪುರಾಣದಲ್ಲಿ ಈ ವಿಷಯಗಳ ಬಗ್ಗೆ ಮಂಡಿಸಲಾದ ಅತಿ ಸರಳೀಕೃತ ಅಭಿಪ್ರಾಯಗಳಲ್ಲಿ ನಾವು ಆಸಕ್ತಿ ಹೊಂದಿಲ್ಲ. ಆದರೆ ಬ್ರಾಹ್ಮಣ ಮತ್ತು ಆರಣ್ಯಕ ಗ್ರಂಥಗಳು ಈ ವಿಷಯಗಳ ಬಗ್ಗೆ ಬೆಳಕನ್ನು ಚೆಲ್ಲುತ್ತವೆ. ನಾವು, ಈ ಎಲ್ಲಾ ಜ್ಞಾನವು ಸಾಕಷ್ಟು ದೊಡ್ಡ ಪ್ರಮಾಣದ ವಾಚಕ ವೃಂದದವರಿಗೆ ಲಭ್ಯವಾಗುವಂತೆ ಶ್ರಮಿಸಿರುವ ಪ್ರೊ।। ಎಸ್. ಕೆ. ರಾಮಚಂದ್ರ ರಾವ್ ಅವರಿಗೆ ಆಭಾರಿಯಾಗಿದ್ದೇನೆ.


ಒಳಪುಟಗಳಲ್ಲಿ

i) ಓದುಗರೊಡನೆ / iv

ii) ಕೃತಜ್ಞತೆಗಳು / v

iii) ಸಂಕ್ಷಿಪ್ತ ರೂಪಗಳು / vi

I. ಭೂಮಿಕೆ

1. ನಾಲ್ಕು ವೇದಗಳಲ್ಲಿರುವ ನಿರೂಪಣೆಗಳು / 1

2. ಗಾಯತ್ರೀ ಮಂತ್ರದೊಡನೆ ಸಂಬಂಧ / 1

3. ಪುರುಷ ಶಬ್ದದ ಅರ್ಥ / 2

4. ಪ್ರಶ್ನ ಉಪನಿಷತ್ / 3

5. ಕಠ ಉಪನಿಷತ್ / 4

6. ಮುಂಡಕ ಉಪನಿಷತ್ / 5

7. ಬೃಹದಾರಣ್ಯಕ ಉಪನಿಷತ್ / 7

8. ಪುರುಷ ಮತ್ತು ಸೂರ್ಯ / 10

9. ಸೃಷ್ಟಿ ಮತ್ತು ಪ್ರಜಾಪತಿ / 11

10. ಮುದ್ಗಲ ಉಪನಿಷತ್ / 16

II. ಮಂತ್ರಗಳ ವಿವರಣೆ

1. ಮಂತ್ರ: 10.90.1 / 17

2. ಮಂತ್ರ: 10.90.2 / 22

3. ಮಂತ್ರ: 10.90.3 / 33

4. ಮಂತ್ರ: 10.90.4 / 39

5. ಮಂತ್ರ: 10.90.5 / 44

6. ಮಂತ್ರ: 10.90.6 / 50

7. ಮಂತ್ರ: 10.90.7 / 55

8. ಮಂತ್ರ: 10.90.8 / 61

9. ಮಂತ್ರ: 10.90.9 / 66

10. ಮಂತ್ರ: 10.90.10 / 69

11. ಮಂತ್ರ: 10.90.11 / 72

12. ಮಂತ್ರ: 10.90.12 / 73

13. ಮಂತ್ರ: 10.90.13 / 75

14. ಮಂತ್ರ: 10.90.14 / 77

15. ಮಂತ್ರ: 10.90.15 / 78

16. ಮಂತ್ರ: 10.90.16 / 82

III. ಉಪಸಂಹಾರ / 86

IV. ಪುರುಷ ಸೂಕ್ತ – ಪಠ್ಯ / 88

 

SKU: c0c7c76d30bd Category: