ನೆಮ್ಮದಿಯ ಬಾಳು ನಿಮ್ಮದಾಗಿಸಿಕೊಳ್ಳಿ

50.00

ಜೀವನದಲ್ಲಿ ನೆಮ್ಮದಿ ನಮ್ಮ ಹಕ್ಕು ಎಂದು ಹೇಳುವುದು ಪ್ರತೀತಿ. ಆದರೆ ಬಹಳ ಜನರ ನೆಮ್ಮದಿ ಇಲ್ಲ. ಈ ನೆಮ್ಮದಿಯನ್ನು ಯಾರು ಕಳಿಸಿದರು? ಇದಕ್ಕೆ ಕೊಡುವ ಸಾಧಾರಣ ಕಾರಣಗಳನ್ನು (ಹಣವಿಲ್ಲದಿರುವಿಕೆ, ‘ಒಳ್ಳೆ’ ಕೆಲಸ ಇಲ್ಲದಿರುವಿಕೆ) ನಂಬುವುದು ಕಷ್ಟ. ಏಕೆಂದರೆ ಹಣ ಇತ್ಯಾದಿ ಕೂರಿಕೆಗಳು ಈಡೇರಿದ ಮೇಲೂ ನೆಮ್ಮದಿ ಬರುವುದಿಲ್ಲ.

ಶ್ರೀ ಅರೋಬಿಂದೊ ಅವರ ಪ್ರಕಾರ ಬರೀ ಬಾಹ್ಯ ಸನ್ಯಾಸದಿಂದ ಎಂದರೆ ಕೆಲಸ ನಿಲ್ಲಿಸಿ, ಕೇವಲ ಅಧ್ಯಯನ, ಜಪ ಇತ್ಯಾದಿಗಳನ್ನು ಮಾಡುತ್ತಿದ್ದರೆ ಶಾಂತಿ ಬರುವುದಿಲ್ಲ. ನಮ್ಮ ಬಾಹ್ಯ ತೊಂದರೆಗಳ ಮೂಲ, ಅಂತರ್ಯದಲ್ಲಿ ಇರುವ ಹಲವಾರು ನಿಷೇಧಾತ್ಮಕ (negative) ವಿಚಾರ ಲಹರಿಗಳೇ. ಉದಾ : ಕೆಲವರು ಯಾರ ಬಗ್ಗೆಯೂ ಒಳ್ಳೆಯ ಮಾತು ಆಡುವುದಿಲ್ಲ. ಇದರ ಪ್ರತಿಕ್ರಿಯೆ ಏನೆಂದರೆ, ಅವರ ಬಗ್ಗೆ ಯಾರೂ ಒಳ್ಳೆಯದನ್ನು ನುಡಿಯುವುದಿಲ್ಲ. ಇದಕ್ಕೆ ಚಿಂತೆ ಪಡುತ್ತಾರೆ. ಶ್ರೀ ಆರೋಬಿಂದೊ ಅವರ ಪ್ರಕಾರ, ನಮ್ಮ ಮನಸ್ಸಿನಲ್ಲಿ ಹಲವಾರು ವಿಚಾರ ಲಹರಿಗಳಿವೆ. ಅವೆಲ್ಲವನ್ನು ಒಂದೊಂದಾಗಿ ಪರೀಕ್ಷಿಸಬೇಕು. ನಮ್ಮಲ್ಲಿರುವ ಬಹಳ ಭಿನ್ನಾಭಿಪ್ರಾಯಗಳು ಒಂದೇ ಕಡೆ ಇವೆ.

ಇಂತಹ ವಿರುದ್ಧವಾದ ವಿಚಾರ ಲಹರಿಗಳನ್ನು ಸಮನ್ವಯ ಮಾಡಬೇಕು. ಇಂಥ ಸಮನ್ವಯ ಕೆಲಸದಲ್ಲಿ ಈ ಪುಸ್ತಕದ ೨೬ ಪ್ರಬಂಧಗಳು ಸಹಾಯಕವಾಗುವವು. ಈ ಪ್ರಬಂಧಗಳನ್ನು ಅನುಸರಿಸಿ ನಮ್ಮ ವಿಚಾರ ಲಹರಿಗಳನ್ನು ಪರಿವರ್ತನೆ ಮಾಡಿದರೆ, ಬಾಳಿನಲ್ಲಿ ನೆಮ್ಮದಿ ಬರುವುದರಲ್ಲಿ ಸಂಶಯವಿಲ್ಲವೆಂಬುದು ಬಹಳ ಜನರ ಅನುಭವ.

ಹಿಂದಿನ ಮುದ್ರಣದ ಪ್ರತಿಗಳನ್ನು ಕೊಂಡು ಓದಿ ಅದರಿಂದ ಪ್ರಯೋಜನ ಪಡೆದವರೆಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ.


ಒಳಪುಟಗಳಲ್ಲಿ

1. ಜಗತ್ತು – ಒಂದು ದೋಷವೋ? ಮಾಯೆಯೋ? / 1

2. ಪ್ರಪಂಚ ಮುನ್ನಡೆಯುತ್ತಿದೆ / 4

3. ಮರುಳುಗೊಳಿಸುವ ಭೂತಕಾಲ / 6

4. ದೇವರು ಬೆಲೆ ಕೊಡುತ್ತಾನೆ  / 8

5. ಪ್ರಭುತ್ವಶ್ರೇಣಿ / 10

6. ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ  / 12

7. ಮನುಷ್ಯನ ಮೌಲ್ಯ / 17

8. ಮರುಳುಗೊಳಿಸುವ ಭೂತಕಾಲ / 19

9. ಮಾರ್ಗದರ್ಶಿೀ ಹೃದಯ / 21

10. ಚೈತನ್ಯದಲ್ಲಿ ಸ್ತರಗಳು ಮತ್ತು ಅಂತರಗಳು  / 23

11. ಕಾಯಕ / 25

12. ನೀವು ನೀವಾಗೇ ಇರಿ / 28

13. ಪ್ರಗತಿ ಹಾಗೂ ದುಃಖ / 30

14. ಬೆನ್ನಟ್ಟುವುದು / 32

15. ಸಹಿಷ್ಣುತೆ / 34

16. ಮನಸ್ಸು / 36

17. ವಿಧಿ / 38

18. ಆಯ್ಕೆ / 40

19. ಕೃತಜ್ಞತೆ / 43

20. ತಾರ್ಕಿಕತೆ / 46

21. ದ್ವೇಷ / 50

22. ಮಹಿಳೆ / 52

23. ಅಸಂತೋಷ ಮತ್ತು ಅದಕ್ಕೆ ಪರಿಹಾರ / 55

24. ಜೀವನದ ತಾಳಗತಿ  / 57

25. ಸಲ್ಲದು, ಅಂತಿಮ ತೀರ್ಪು / 60

26. ಓಂ/ 63

SKU: c0c7c76d30bd Category: