ಕಾರ್ಯ ಸಾಧನೆಯ ರಹಸ್ಯಗಳು: ಅಗ್ನಿಯ ಮಾರ್ಗದರ್ಶನ

15.00

ಅಗ್ನಿ ದೈವೀ ಶಕ್ತಿ ಆಗಿದೆ. ಇದು ಮಾನವನ ಮನಃಪ್ರಾಣಾದಿ ಶಕ್ತಿಯೊಡನೆ ಸಂಯೋಜನೆಗೊಂಡಿದೆ. ಇದನ್ನು ನಮ್ಮ ದೈನಂದಿನ ಜೀವನಕ್ಕೆ ಬಳಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಈ ಪುಸ್ತಕ ತಿಳಿಸುತ್ತದೆ. ವಿಶೇಷವಾಗಿ ಎಚ್ಚರವಾಗಿ ಇರುವ ಸಮಯದಲ್ಲಿ ಮಾಡುವ ಎಲ್ಲ ಕಾರ್ಯಗಳಲ್ಲಿ, ಈ ಮನಃಪ್ರಾಣಾದಿ ಶಕ್ತಿಯ ಕುರಿತು ತಿಳಿಸುತ್ತದೆ. ನಮ್ಮೊಳಗೇ ಇರುವಂತಹ ಸಂಕಲ್ಪ ಶಕ್ತಿಯಂತಹ ಮನಃಪ್ರಾಣಾದಿ ಶಕ್ತಿಗಳನ್ನು ಹೇಗೆ ವೃದ್ಧಿಪಡಿಸಿಕೊಳ್ಳಬಹುದು ಎಂಬುದರ ಕುರಿತು ಈ ಪುಸ್ತಕವು ತಿಳಿಸುತ್ತದೆ. ಇಲ್ಲಿ ನಿರೂಪಿಸಿರುವ ಆಲೋಚನಾ ವಿಧಾನಗಳಿಗೆ ಆಧಾರವಾಗಿ, ಋಗ್ವೇದ ಸಂಹಿತೆ ಮತ್ತು ಯಜುರ್ವೇದ ಸಂಹಿತೆಗಳಿಂದ ಆಯ್ದ ಒಂದು ನೂರಕ್ಕೂ ಹೆಚ್ಚಿನ ಮಂತ್ರಗಳನ್ನು ಕೊದಲ್ಲಗಿದೆ. ಅಧ್ಯಾಯ ಸೂಚಿಯಲ್ಲಿನ ಹದಿನೇಳು ಅಧ್ಯಾಯಗಳ ಶಿರೋನಾಮಗಳಿಂದಲೇ ಅಗ್ನಿಯೊಂದಿಗೆ ಸಂಯೋಜಿಸಲ್ಪಟ್ಟ ಶಕ್ತಿಗಳ ವ್ಯಾಪ್ತಿಯ ಸುಳಿವು ನಮಗೆ ಸಿಗುತ್ತದೆ.

ಅಗ್ನಿಯು ಚೈತನ್ಯದಿಂದ ಒಡಗೂಡಿದ ದೈವೀ ಬಲ ಆಗಿದ್ದಾನೆ ಎನ್ನುವ ಸಾರ್ವತ್ರಿಕ ಅರ್ಥ, ಈ ಎಲ್ಲ ಅಗ್ನಿ ಮಂತ್ರಗಳ ಶೀರ್ಷಿಕೆಗಳಿಂದ ಹಾಗೂ ನಂತರ ಕೊಟ್ಟಿರುವ ಅನುವಾದಗಳಿಂದ ಉಂಟಾಗುತ್ತದೆ. ಕವಿ ಅಥವಾ ಋಷಿ, ಕ್ರಾಂತದರ್ಶಿ ಎಂದರೆ ಅತಿಭೌತಿಕ ದರ್ಶನವುಳ್ಳವನು ಎನ್ನುವಂತಹ ಗುಣವಾಚಕಗಳನ್ನು ಅಗ್ನಿಗೆ ಪದೇ ಪದೇ ಋಷಿಗಳು ಉಪಯೋಗಿಸುತ್ತಾರೆ.

ಅಗ್ನಿಯು ಮಾನವರಲ್ಲಿ ಜನಿಸುತ್ತಾನೆ ಎಂದು ಹೇಳುವಾಗ, ಅವನು ಮಾನವರಲ್ಲಿ ತನ್ನ ಶಕ್ತಿಯನ್ನು ಪ್ರಕಟಗೊಳಿಸುತ್ತಾನೆ ಎಂದು ತಿಳಿಯಬೇಕು. ಮಾನವರಲ್ಲಿ ಪ್ರಕಟಗೊಳ್ಳುವುದಕ್ಕಾಗಿ ಇತರ ದೈವೀ ಶಕ್ತಿಗಳನ್ನು ಅಗ್ನಿಯು ಆಹ್ವಾನಿಸುವನು. ಆದುದರಿಂದ ಅವನನ್ನು ‘ಹೋತಾರ’ ಎನ್ನುತ್ತಾರೆ. ಅಗ್ನಿಯನ್ನು ಯೋಚನಾಮಗ್ನತೆಯಿಂದ ಹಾಗೂ ಮಂತ್ರ ಪಠಣಗಳ ಮೂಲಕ ಸಂಪರ್ಕಿಸಬಹುದು. ಚೈತನ್ಯಮಯನಾದ ಅಗ್ನಿಯನ್ನು ಋಷಿಯು ಹಸು – ಕರುಗಳಂತಹ ಭೌತಿಕ ಸಂಪತ್ತಿಗಾಗಷ್ಟೇ ಪ್ರಾರ್ಥಿಸುವುದಿಲ್ಲ. ಸರ್ವತೋಮುಖವಾದ ಸಂಪತ್ತಿಗಾಗಿ, ಎಲ್ಲಕ್ಕಿಂತ ಮಿಗಿಲಾಗಿ ಪರಮಾತ್ಮನನ್ನು ಅರಿತು, ಪರಮಾನಂದವನ್ನು ಹೊಂದುವುದಕ್ಕಾಗಿ ಅವನನ್ನು ಪ್ರಾರ್ಥಿಸುವುತ್ತಾನೆ. ಅಗ್ನಿಯೊಂದಿಗೆ ಸ್ನೇಹಿತರು, ತಂದೆ – ಮಕ್ಕಳು, ಪತಿ – ಪತ್ನಿಯರು ಮುಂತಾದ ಆತ್ಮೀಯ ಸಂಬಂಧಗಳನ್ನು ಪ್ರಜ್ಞಾಪೂರ್ವಕವಾಗಿ ಮಾನವರು ಹೊಂದಬಲ್ಲರು. ವೇದ ಕಾಲದ ನಂತರ ಬಂದ ಭಾಗವತ ಹಾಗೂ ಶ್ರೀಮದ್ ಭಗವದ್ಗೀತೆಗಳಲ್ಲಿ ಮತ್ತು ದಕ್ಷಿಣ ಭಾರತದ ಕವಿಗಳಾದ ಆಳ್ವಾರ್ ಹಾಗೂ ನಾಯನ್ಮಾರರಲ್ಲಿ ವ್ಯಾಪಕವಾಗಿ ಮೊಳೆತ ಭಕ್ತಿಯೋಗದ ಬೀಜವನ್ನು ನಾವಿಲ್ಲಿ ಕಾಣಬಹುದು. ನಮ್ಮೆಲ್ಲ ವಿಘ್ನಗಳನ್ನು ನಿವಾರಿಸಿ, ನಮ್ಮನ್ನು ಕ್ಷೇಮಕರವಾದ ನಾವೆಯಲ್ಲಿ ಕೂಡಿಸಿ ಪರಮ ಆನಂದ ಹಾಗೂ ಜ್ಞಾನದ ತೀರಕ್ಕೆ ತಲುಪಿಸು ಎಂದು ಅಗ್ನಿಯನ್ನು ಪ್ರಾರ್ಥಿಸುವ ಮಂತ್ರ ಋಗ್ವೇದ (೧.)ರಲ್ಲಿ ಇದೆ.

ಈ ಪುಸ್ತಕದಲ್ಲಿರುವ ಎಲ್ಲ ವಿಷಯಗಳಿಗೂ ಆಧಾರ Collected Works of Kapali Sastry, Vol. 4, 5, 6 ಮತ್ತು ಶ್ರೀ ಆರೋಬಿಂದೊ ಅವರ The Secret of The Veda ಮತ್ತು Hymns to the Mystic Fire ಕೃತಿಗಳು.

ಮೊದಲ ಮೂರು ಅಧ್ಯಾಯಗಳಲ್ಲಿ ನಾವು ಪರಿಪೂರ್ಣತೆಯ ಧ್ಯೇಯದಿಂದ ಕೂಡಿದ ಕಾರ್ಯನಿರ್ವಣೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದೇವೆ. ಮಿಕ್ಕೆಲ್ಲ ಅಧ್ಯಾಯಗಳು ತಮ್ಮ ಶಿರೋನಾಮದಿಂದಲೇ ವಿಷಯಗಳನ್ನು ತಿಳಿಸುತ್ತವೆ. ಅಗ್ನಿಯ ಕುರಿತು ಹೆಚ್ಚಿನ ವಿವರಣೆಗಳಿಗಾಗಿ ೧೭ನೆಯ ಅಧ್ಯಾಯದ ಕೊನೆಯಲ್ಲಿರುವ ಗ್ರಂಥಗಳನ್ನು ನೋಡಿ.


ಅಧ್ಯಾಯ ಸೂಚಿ
ಓದುಗರ ಗಮನಕ್ಕೆ
1. ಅಗ್ನಿಯ ಪರಿಚಯ / 1
2. ಕೆಲಸ ಎಂದರೇನು? ಅದನ್ನು ಯಾರು ಮಾಡುತ್ತಾರೆ? / 4
3. ಕೆಲಸದ ಸ್ವರೂಪ / 6
4. ಜ್ಞಾನಭರಿತ ದೈವೀಸಂಕಲ್ಪ / 8
5. ಅಗ್ನಿಯ ಶ್ರೇಷ್ಠತೆ / 11
6. ಮಾರ್ಗದರ್ಶಕನಾಗಿ ಅಗ್ನಿ / 14
7. ಅಗ್ನಿ ಮತ್ತು ಪುನರ್ ಜನ್ಮ / 16
8. ತಂದೆ ಹಾಗೂ ಮಿತ್ರನಾಗಿ ಅಗ್ನಿ : ಭಕ್ತಿಯೋಗ / 17
9. ಅಗ್ನಿಯನ್ನು ಜಾಗೃತಗೊಳಿಸುವಿಕೆ / 19
10. ಅಗ್ನಿಯು ನಮ್ಮಲ್ಲೇ ಜನಿಸಿ, ನಮ್ಮೊಳಗೇ ನೆಲೆಸಿರುವರು / 20
11. ಅಗ್ನಿಯು ಆಂತರಿಕ ಸೌಭಾಗ್ಯಗಳನ್ನು ನೀಡುವನು ಹಾಗೂ ಸಂವರ್ಧನಗೊಳಿಸುವನು / 21
12. ಅಗ್ನಿಯ ಕಾರ್ಯಗಳು / 23
13. ಆತ್ಮೀಯತೆ : ನೀನು ನನ್ನಲ್ಲಿ, ನಾನು ನಿನ್ನಲ್ಲಿ / 25
14. ಅಗ್ನಿ ಮತ್ತು ಧ್ಯಾನ / 26
15. ಅಗ್ನಿ ಮತ್ತು ಸತ್ಯ / 27
16. ಅಗ್ನಿ ಮತ್ತು ತಂತ್ರ ವಿಧಾನಗಳು / 29
17. ಋಗ್ವೇದದ ಮೊದಲನೆಯ ಸೂಕ್ತ / 31

SKU: e2ef524fbf3d Category: