ವೇದ ಕಾರ್ಯಾಗಾರ ಹಾಗೂ ಅಗ್ನಿಹೋತ್ರ ತರಬೇತಿ

ಸಾಕ್ಷಿ ಟ್ರಸ್ಟ್, ಬೆಂಗಳೂರು | ವೇದಭಾರತಿ, ಹಾಸನ

ದಿನಾಂಕ: ಜೂನ್ 14 - 16, 2024 (ಶುಕ್ರವಾರ ರಾತ್ರಿ 8 ರಿಂದ ಭಾನುವಾರ ಸಂಜೆ 5 ವರೆಗೆ)

ಸ್ಥಳ: ಅರೋವೇದ ತೋಟ ಏಡಮಡು ಗ್ರಾಮ, ಕನಕಪುರ ಹೆದ್ದಾರಿ (ಬನಶಂಕರಿ ದೇವಸ್ಥಾನದಿಂದ 25 ಕಿ.ಮಿ.)

Download Brochure | Register Now

ವೇದಗಳು ಭಾರತೀಯ ಸಂಸ್ಕೃತಿಯ ಆಧಾರಸ್ತಂಭ. ಜ್ಞಾನಿಗಳೆಲ್ಲ ಈ ಸಂಗತಿಯನ್ನು ಸಮರ್ಥಿಸಿದ್ದಾರೆ. ವೇದದಲ್ಲಿರುವ ವಿಷಯವೆಲ್ಲ ಲೋಕಕಲ್ಯಾಣಕರ ಆಗಿದೆ. ವೇದಪ್ರಣೀತ ಜೀವನಧರ್ಮ ಮಾನವನ ಹಿತ ಕಾಪಾಡುತ್ತದೆ. ವೇದವು ಶ್ರೇಷ್ಠ ಶಿಕ್ಷಣ ಪದ್ಧತಿಯನ್ನು, ಆರೋಗ್ಯಮಯ ಸಮಾಜ ವ್ಯವಸ್ಥೆಯನ್ನು, ಆದರ್ಶ ಕುಟುಂಬ ಸಂಪ್ರದಾಯವನ್ನು, ಜನಹಿತಪರ ರಾಜ್ಯ ವ್ಯವಸ್ಥೆಯನ್ನು, ಸಾಮರಸ್ಯಭರಿತ ಜೀವನವನ್ನು, ಜಾತಿ-ಮತ-ಕುಲ-ಲಿಂಗ ಭೇದರಹಿತತೆಯನ್ನು ಪ್ರತಿಪಾದಿಸುತ್ತದೆ.

ವೇದದಲ್ಲಿ ಶರೀರಕ್ಕೆ ಬೇಕಾದ ಆರೋಗ್ಯ ಇದೆ, ಮನಸ್ಸಿಗೆ ಬೇಕಾಗುವ ಶಾಂತಿ ಇದೆ, ಆತ್ಮಕ್ಕೆ ಅಗತ್ಯವಾದ ದಿವ್ಯತೆ ಇದೆ. ಒಟ್ಟಾರೆ ವೇದ ಎಲ್ಲರಿಗೂ ಬೇಕು. ಇದೊಂದು ಸಾಗರದಂತೆ. ಇಲ್ಲಿ ಬಿಂದುವೂ ಇದೆ. ಸಿಂಧುವೂ ಇದೆ. ಇದೆಲ್ಲವೂ ಲಭ್ಯ ಆಗಲು ಸಾಗರದ ತಳ ತಿಳಿಯಲು ಸಿದ್ಧರಾಗಬೇಕು. ಹುಡುಕುವವನಿಗೆ ನೂರೆಂಟು ದಾರಿ. ದುಡುಕುವವನಿಗೆ ದಾರಿಯೇ ಕಾಣದು. ವೇದ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಇದಕ್ಕಾಗಿ ಆಯೋಜಿಸಲಾಗಿದೆ, ವೇದ ಹಾಗೂ ಅಗ್ನಿಹೋತ್ರ ಕಾರ್ಯಾಗಾರ. ಬನ್ನಿ, ಭಾಗವಹಿಸಿ ಬೆಳಕಿನ ಪಥದಲ್ಲಿ ಮುನ್ನಡೆಯೋಣ.

ಅಗ್ನಿಹೋತ್ರ ಒಂದು ಪೂಜೆ. ಒಂದು ಸಾಧನೆ. ಜೀವನ ಪ್ರಗತಿ, ಸಾಮರಸ್ಯ, ದೈವಸಂಯೋಗ ಇವೆಲ್ಲವನ್ನೂ ಅಗ್ನಿಹೋತ್ರ ಆಚರಣೆಯಿಂದ ಪಡೆಯಬಹುದಾಗಿದೆ. ವ್ಯಷ್ಟಿ ಹಾಗೂ ಸಮಷ್ಟಿ ಎರಡರ ಕಾಳಜಿಯೂ ಅಗ್ನಿಹೋತ್ರದಲ್ಲಿ ಇದೆ. ಇಂದು ಅಗ್ನಿಹೋತ್ರ ಕುರಿತು ವಿಶ್ವವ್ಯಾಪಿ ಜನರ ಗಮನ ಹರಿದಿದೆ. ಮುಂಬರುವ ದಿನಗಳಲ್ಲಿ ಅಗ್ನಿಹೋತ್ರದಿಂದಲೇ ಜೀವನಾನಂದ ಸಾಧ್ಯ ಎಂದು ಎಲ್ಲರೂ ಮನಗಾಣಲಿದ್ದಾರೆ. ಹಾಗಾಗಿ ಹಾಸನದ ʼವೇದಭಾರತಿʼ ಅಗ್ನಿಹೋತ್ರ ಕುರಿತು ಜಾಗೃತಿ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಬನ್ನಿ ಅಗ್ನಿಹೋತ್ರ ಆಚರಿಸುವುದನ್ನು ಕಲಿಯೋಣ, ದೇವತೆಗಳೊಂದಿಗೆ ಸಹಯೋಗ ಸಾಧಿಸೋಣ.

---

ವಿಷಯಗಳು - ಉಪನ್ಯಾಸ, ಪ್ರಾತ್ಯಕ್ಷಿಕೆ, ಅಭ್ಯಾಸ

  • ನಾಲ್ಕೂ ವೇದಗಳ ಅಂತರಂಗ
  • ಆಧುನಿಕ ಕಾಲಕ್ಕೆ ವೇದಗಳ ಪ್ರಸ್ತುತತೆ
  • ಶಾಂತಿ ಮಂತ್ರಗಳು ದೇವತೆಗಳನ್ನು ಆವಾಹಿಸುವುದು
  • ಶ್ರೀ ಅರೋಬಿಂದೊ ಹಾಗೂ ಮಹರ್ಷಿ ದಯಾನಂದ ಸರಸ್ವತಿ - ಜೀವನ, ಬೋಧನೆ
  • ಜೀವನ ಪ್ರಗತಿಗಾಗಿ ವೇದಜ್ಞಾನ
  • ಧ್ಯಾನ, ಪ್ರಾಣಾಯಾಮ
  • ಅಗ್ನಿಹೋತ್ರ ಆಚರಣೆ ಅಭ್ಯಾಸ
  • ಸಂಕಲ್ಪ ಶಕ್ತಿ ವರ್ಧನೆ
  • ಸ್ಪಷ್ಟ ವಿಚಾರ ಶಕ್ತಿ ವರ್ಧನೆ
  • ಜೀವನದಲ್ಲಿನ ಅಡೆತಡೆಗಳ ನಿವಾರಣ ಕ್ರಮಗಳು
  • ಆನಂದದಿಂದ ಬದುಕುವ ಬಗೆ
  • ಸಂಬಂಧಗಳಲ್ಲಿ ಸಾಮರಸ್ಯ ಸಾಧಿಸುವ ಕಲೆ

---

ಸಾಕ್ಷಿ ಟ್ರಸ್ಟ್, ಬೆಂಗಳೂರು ಸಾಕ್ಷಿ ಸಂಸ್ಥೆ ಒಂದು ಆಧ್ಯಾತ್ಮಿಕ ಚಳುವಳಿ. ಸುಂದರ, ಸಮರಸಪೂರ್ಣ, ಸೃಜನಶೀಲ, ಸುಖಮಯ ಜೀವನ ಕುರಿತಂತೆ ಜಾಗೃತಿ ಮೂಡಿಸಲು ಶಕ್ತವಾದ ವೇದ ಹಾಗೂ ಶ್ರೀ ಅರೋಬಿಂದೊ ಅವರ ಸಂದೇಶಗಳ ಪ್ರಸಾರದ ಧ್ಯೇಯ ಹೊಂದಿದೆ. ೧೯೯೭ರಿಂದ ವೇದಗಳ ಸಂಶೋಧನೆ, ಸಂರಕ್ಷಣೆ ಹಾಗೂ ಪ್ರಸಾರ ಕಾರ್ಯದಲ್ಲಿ ನಿರತವಾಗಿದೆ.

ವೇದಭಾರತಿ, ಹಾಸನ ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರ ಪ್ರೇರಣೆಯಿಂದ ‘ಎಲ್ಲರಿಗಾಗಿ ವೇದ’ ಎಂಬ ಉದ್ದೇಶದೊಡನೆ ಹಾಸನದ ಹೊಯ್ಸಳನಗರದಲ್ಲಿರುವ ಶ್ರೀ ಹರಿಹರಪುರ ಶ್ರೀಧರ್ ಅವರ ‘ಈಶಾವಾಸ್ಯಮ್’ ಸಭಾಂಗಣದಲ್ಲಿ 2011ರಲ್ಲಿ ವೇದಭಾರತಿ ಆರಂಭವಾಯಿತು. ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ವಾರದಲ್ಲಿ ಎರಡು ದಿನ ವೇದಪಾಠವನ್ನು ಆರಂಭಿಸಿದರು. ಆರಂಭದ ಐದಾರು ವರ್ಷಗಳು ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರಿಂದ ಹಾಸನದಲ್ಲಿ ನೂರಾರು ವೇದ ಪರಿಚಯ ಶಿಬಿರಗಳು, ವೇದ ಗೋಷ್ಠಿಗಳು ಉಪನ್ಯಾಸಗಳು ನಡೆದು ವೇದಭಾರತಿಯು ಹಾಸನದಲ್ಲಿ ಮನೆಮಾತಾಯಿತು. ಹಾಸನದಲ್ಲಿ ನೂರಾರು ಮಹಿಳೆಯರು ಸ್ವರಬದ್ಧವಾಗಿ ಅಗ್ನಿಹೋತ್ರ ಮಂತ್ರ ಕಲಿತು ಪ್ರತಿ ದಿನವೂ ಈಶಾವಾಸ್ಯಮ್ ನಲ್ಲಿ ತಪ್ಪದೆ ಅಗ್ನಿಹೋತ್ರವನ್ನು ನಡೆಸುತ್ತಾರೆ. ರಾಜ್ಯದ ಹಲವು ಕಡೆ ಸಾಮೂಹಿಕ ಅಗ್ನಿಹೋತ್ರವನ್ನು ವೇದಭಾರತಿಯು ನಡೆಸಿದೆ.

---

ನೊಂದಣಿಗಾಗಿ ಸಂಪರ್ಕಿಸಿ

ಶ್ರೀ ಹರಿಹರಪುರ ಶ್ರೀಧರ: 9663572406

ಶ್ರೀ ಬಿಂದುಮಾಧವ: 9008833886

info@vedah.com

Download Brochure | Register Now (Online)